ಕೊರೋನಾ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ಭಾರತದಲ್ಲಿ ಲಾಕ್ ಟೌನ್ ಮಾಡಲಾಗಿದೆ.  ಅಷ್ಟಾದರೂ ನಮ್ಮ ಜನ ಹೊರ ಬಂದು ಸಾಂಕ್ರಾಮಿಕ ಮಹಾ ಮಾರಿಗೆ ಬಲಿಯಾಗುತ್ತಾ ಇದ್ದಾರೆ.  ಈಗಾಗಲೇ ೨ಇಬ್ಬರು ಮೃತಪಟ್ಟಿದ್ದು ಇಂದು ಮತ್ತೊಂದು ಬಲಿಯನ್ನು ಕೊರೋನಾ ವೈರಸ್ ತೆಗೆದುಕೊಂಡಿದೆ.  ಇಂದು ಮೃತ ಪಟ್ಟ ಕೊರೋನಾ ದಿಂದ ಮೃತ ಪಟ್ಟ ವ್ಯಕ್ತಿ ಎಲ್ಲಿಯವರು ಎಂಬುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲದೆ ನೋಡಿ.

 

ಇಡೀ ಕರ್ನಾಟಕದಲ್ಲಿ ಎಲ್ಲಾ ಪ್ರಮುಖ ಜಿಲ್ಲೆಯಲ್ಲಿ ಕಾಣಿಸಿಕೊಂಡಿದ್ದ ಕರೋನಾ ವೈರಸ್ ಇಂದು ಕಲ್ಪತರು ನಾಡನ್ನು ಪ್ರವೇಶಿಸಿ ಬಲಿತೆಗೆದುಕೊಂಡಿದೆ. ತುಮಕೂರಿನಲ್ಲಿ ದಾಖಲಾದ ಮೊದಲ ಸಾವು. ಈ ಸಾವು ಇಡೀ ತುಮಕೂರು ಜಿಲ್ಲೆಯನ್ನು ಆತಂಕದಲ್ಲಿ ಇರುವಂತೆ ಮಾಡಿದೆ.

 

ಮಾ.27- ರಾಜ್ಯದಲ್ಲಿ ಕೊರೊನಾದಿಂದ ಮೂರನೆ ಸಾವು ಸಂಭವಿಸಿದ್ದು, ತುಮಕೂರು ಜಿಲ್ಲೆ ಶಿರಾದಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ೨೧ಕ್ಕೇರಿದ ಸಾವಿನ ಸಂಖ್ಯೆ ಏರಿದೆ.

 

ತುಮಕೂರು ಜಿಲ್ಲಾಧಿಕಾರಿ ರಾಕೇಶ್ ಅವರು ಇಂದು ತುರ್ತು ಪತ್ರಿಕಾಗೋಷ್ಠಿಯಲ್ಲಿ ಶಿರಾದಲ್ಲಿ ಇಂದು ಬೆಳಗ್ಗೆ 10.45ಕ್ಕೆ 63 ವರ್ಷದ ವ್ಯಕ್ರಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಸ್ಪಷ್ಟ ಪಡಿಸಿದ್ದಾರೆ.

 

ಈ ವ್ಯಕ್ತಿ ಮಾರ್ಚ್ ೫ರಂದು ದೆಹಲಿಗೆ ಸಂಪರ್ಕ ಕ್ರಾಂತಿ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಅಲ್ಲಿ ಮಾರ್ಚ್ 11ರಂದು ಜಾಮೀಯಾ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲಿಂದ ತುಮಕೂರಿಗೆ ಬಂದು ಶಿರಾಗೆ ಪ್ರಯಾಣಿಸಿದ್ದರು. ಮಾರ್ಚ್ 24ರಂದು ಆಸ್ಪತ್ರೆಗೆ ದಾಖಲಾಗಿದ್ದರು.

 

ಮಾರ್ಚ್ 27ರಂದು ಸಾವನ್ನಪ್ಪಿದ್ದಾರೆ. ಇವರ ಜೊತೆಗೆ ಸುಮಾರು ೪೦೦ಕ್ಕೂ ಹೆಚ್ಚು ಮಂದಿ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರೆಂದು ತಿಳಿದು ಬಂದಿದ್ದು, ಅವರ ಮೇಲೆಲ್ಲಾ ನಿಗ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 

ದೇಶದಲ್ಲೆ ಕೊರೊನಾಗೆ ಮೊದಲ ಬಲಿಯಾಗಿದ್ದು ಕರ್ನಾಟಕದಲ್ಲೇ. ಕಲ್ಬುರ್ಗಿಯಲ್ಲಿ ವೃದ್ಧರೊಬ್ಬರು ಸಾವನ್ನಪ್ಪಿದರು. ಅನಂತರ ಮಾರ್ಚ್ 25ರಂದು ಗೌರಿ ಬಿದನೂರಿನಲ್ಲಿ 71 ವರ್ಷದ ವೃದ್ದೆಯೊಬ್ಬರು ಸಾವನ್ನಪ್ಪಿದ್ದರು. ಈಗ ಶಿರಾದ ವ್ಯಕ್ತಿ ಮೃತ ಪಟ್ಟಿದ್ದಾರೆ. ದೇಶದಲ್ಲಿ ಇಂದಿಗೆ ಒಟ್ಟು 21 ಜನ ಸಾವನ್ನಪ್ಪಿದಂತಾಗಿದೆ.

 

మరింత సమాచారం తెలుసుకోండి: