ಕೊರೋನಾ ವೈರಸ್ ಇಡೀ ಜಗತ್ತಿನಲ್ಲಿ ತಲ್ಲಣವನ್ನು ಮೂಡಿಸಿರುವ ವೈರಾಣಾಗಿದ್ದು ಈ ವೈರಾಣು ಉತ್ಪತ್ತಿಯ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಿದ್ದು. ಈ ಬಗ್ಗೆ ಅನೇಕಾ ಅಂಶಗಳು ಬೆಳಕಿಗೆ ಬಂದಿದೆ ಈ ಕೊರೋನಾ ಸೋಂಕು ಬಾವಲಿಗಳಿಂದ ಬಂದಿದೆ ಹಾಗೂ ಈ ಕೊರೋನಾ ವೈರಸ್ ಗಳಲ್ಲಿ ಇನ್ನು ಅನೇಕ ಪ್ರಭೇದಗಳು ಇವೆ ಎಂದು ಸಂಶೋಧಕರ ವರದಿ ತಿಳಿಸಿದೆ. ಅಷ್ಟಕ್ಕೂ ಸಂಶೋಧಕರು ತಿಳಿಸಿರುವ ವರದಿ ಸಂಪೂರ್ಣ ಅಂಶ ಇಲ್ಲಿದೆ?

 

ವಿಶ್ವಾದ್ಯಂತ ಸೃಷ್ಟಿಯಾಗಿರುವ ಕೊರೊನಾ ವೈರಸ್ ಸೋಂಕಿನ ಕೋಲಾಹಲದ ಮಧ್ಯೆ ಪ್ರಪಂಚದ ವಿವಿಧ ಭಾಗಗಳಲ್ಲಿ ಈ ಕುರಿತು ವೈಜ್ಞಾನಿಕ ಸಂಶೋಧನೆಗಳು ಮುಂದುವರೆದಿವೆ. ಈ ಸರಣಿಯಲ್ಲಿ ಇದೀಗ ವಿಜ್ಞಾನಿಗಳು ಮ್ಯಾನ್ಮಾರ್ ನಲ್ಲಿ ಬಾವಲಿಗಳಲ್ಲಿ 6 ಹೊಸ ಪ್ರಜಾತಿಯ ಕೊರೊನಾ ವೈರಸ್ ಗಳನ್ನು ಗುರುತಿಸಿದ್ದಾರೆ. ಅಷ್ಟೇ ಅಲ್ಲ ವಿಶ್ವದಲ್ಲಿ ಈ ವಿಷಾಣುಗಳು ಪತ್ತೆಯಾಗಿದ್ದು ಇದೇ ಮೊದಲಬಾರಿಗೆ ಎನ್ನಲಾಗಿದೆ.

 

ರೋಗದ ಪರಿಸ್ಥಿತಿಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮಾನವರು ಮತ್ತು ಪ್ರಾಣಿಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನಡೆಸುತ್ತಿರುವಾಗ ಸಂಶೋಧಕರಿಗೆ ಈ ಹೊಸ ವೈರಸ್ಗಳ ಬಗ್ಗೆ ಮಾಹಿತಿ ದೊರೆತಿದೆ

.

ಭೂಬಳಕೆ ಮತ್ತು ಅಭಿವೃದ್ಧಿಯಲ್ಲಿನ ಬದಲಾವನೆಗಲಿಂದಾಗಿ ಸ್ಥಳೀಯ ವನ್ಯಜೀವಿಗಳೊಂದಿಗೆ ಮಾನವರ ಸಂಪರ್ಕ ಹೆಚ್ಚಾಗಿ ಕಂಡುಬರುವ ಸೈಟ್ ಗಳನ್ನು ಗುರಿಯಾಗಿಸಿ ವಿಜ್ಞಾನಿಗಳು ನಡೆಸಿದ ಸಂಶೋಧನೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ.

 

ಮೇ 2016 ರಿಂದ ಆಗಸ್ಟ್ 2018 ರ ಅವಧಿಯಲ್ಲಿ ಅವರು ಈ ಕ್ಷೇತ್ರದಲ್ಲಿ ಬರುವ ಬಾವಲಿಗಳ ಜೊಲ್ಲು ಹಾಗೂ ಮಲದ ಸುಮಾರು ೭೫೦ ಕ್ಕೂ ಅಧಿಕ ನಮೂನೆಗಳನ್ನು ಸಂಗ್ರಹಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಬಾವಲಿಗಳಲ್ಲಿ ಸಾವಿರಾರು ರೀತಿಯ ಕೊರೊನಾ ವೈರಸ್ ಗಳಿದ್ದು, ಅವುಗಳಲ್ಲಿ ಇದುವರೆಗೆ ಕೇವಲ 6 ಪ್ರಜಾತಿಯ ವೈರಸ್ ಗಳನ್ನು ಗುರಿತಿಸಲಾಗಿದ್ದು, ಇನ್ನೂ ಹಲವಾರು ಕೊರೊನಾ ವೈರಸ್ ಗಳ ಪತ್ತೆ ಬಾಕಿ ಇದೆ ಎಂದು ಹೇಳಿದ್ದಾರೆ.

 

ಈ ವೇಳೆ ಸಂಶೋಧಕರು ತಮ್ಮ ಬಳಿ ಇದ್ದ ನಮೂನೆಗಳ ಪರೀಕ್ಷೆ ನಡೆಸಿ, ಅವುಗಳ ಹೋಲಿಕೆ ಕೊರೊನಾ ವೈರಸ್ ವಿಷಾಣುಗಳ ಜೊತೆಗೆ ನಡೆಸಿದ್ದು, ಇದೆ ಮೊದಲ ಬಾರಿಗೆ ಆರು ಹೊಸ ಪ್ರಜಾತಿಯ ಕೊರೊನಾ ವಿಷಾಣುಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿನ ಒಂದು ಪ್ರಜಾತಿ ದಕ್ಷಿಣ-ಪೂರ್ವ ಏಷ್ಯಾದ ಎಲ್ಲೆಡೆ ಕಾಣಸಿಗುತ್ತದೆ ಆದರೆ, ಇದು ಮ್ಯಾನ್ಮಾರ್ ನಲ್ಲಿ ಇದೆ ಮೊದಲ ಬಾರಿಗೆ ಕಂಡುಬಂದಿದೆ ಎಂದು ಹೇಳಿದ್ದಾರೆ.

 

 

 

మరింత సమాచారం తెలుసుకోండి: