ಇಡೀ ವಿಶ್ವವನ್ನೇ ತೀವ್ರವಾಗಿ ಕಾಡುತ್ತಿರುವ ಕೊರೋನಾ ಸೋಂಕು ಸಾಕಷ್ಟು ಜನರನ್ನು ಬಲಿ ತೆಗೆದುಕೊಂಡು ಅನೇಕ ಜನರನ್ನು ಸಾವು ಬದುಕಿನ ನಡುವೆ ಹೋರಾಡುವಂತೆ ಮಾಡಿದೆ. ಈ ಒಂದು ಕೊರೋನಾ ವೈರಸ್ ಅನ್ನು ಇಡೀ ವಿಶ್ವದಿಂದ ತೊಲಗಿಸುವ ಉದ್ದೇಶದಿಂದ ಜಗತ್ತಿನ ನಾನಾ ರಾಷ್ಟ್ರಗಳಲ್ಲಿ ಕೊರೋನಾ ಸೋಂಕಿಗೆ ಔಷಧಿಯ್ನು ಸಂಶೋಧಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ. ಆದರೆ ಈ ಮದ್ಯೆ ಕೊರೋನಾ  ಸೋಂಕು ಕಡಿಮೆಯಾದರೆ ಕೊರೋನಾಗೆ ಔಷಧಿಯನ್ನು ಕಂಡುಹಿಡಿಯುವುದು ಕಷ್ಟವಾಗುತ್ತದೆ ಎಂದು ವಿಶ್ವ ವಿದ್ಯಾಲಯವೊಂದು ಆಶ್ಚರ್ಯಕರ ಸುದ್ದಿಯೊಂದನ್ನು ಹೊರಹಾಕಿದೆ ಅಷ್ಟಕ್ಕೂ ಆ ವಿಶ್ವ ವಿದ್ಯಾನಿಲಯ ಯಾವುದು ಗೊತ್ತಾ..?  

 

 ವಿಶ್ವವನ್ನೇ ಬಾಧಿಸುತ್ತಿರುವ ಕರೊನಾ ಸೋಂಕು ಕೆಲದಿನಗಳಿಂದ ಇಳಿಮುಖವಾಗುತ್ತಿದೆ. ಇದೇ ರೀತಿ ಅದು ಕಡಿಮೆಯಾಗುವುದು ಮುಂದುವರಿದರೆ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ತೊಡಕಾಗುತ್ತದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ.

 

ನಿರ್ದಿಷ್ಟವಾದ ಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾದರೂ, ಸಂಶೋಧನೆ ನಡೆಯುತ್ತಿರುವ ಹೆಚ್ಚಿನ ಸಂಖ್ಯೆಯ ಸೋಂಕಿತರು ಸಿಗದೆ, ಚುಚ್ಚುಮದ್ದಿನ ಪರೀಕ್ಷೆಗೆ ತೊಡಕು ಉಂಟಾಗಲಿದೆ ಎಂದು ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಯಲ್ಲಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರಿಗೆ ಸಹಕರಿಸುತ್ತಿರುವ ಔಷಧ ಕಂಪನಿ ಅಸ್ಟ್ರಾಜೆಂಕಾದ ಸಿಇಒ ಪ್ಯಾಸ್ಕಲ್​ ಸೋರಿಯಾಟ್​ ಆತಂಕ ವ್ಯಕ್ತಪಡಿಸಿದ್ದಾರೆ.

 

ಈ ಹಿನ್ನೆಲೆಯಲ್ಲಿ ಉದ್ದೇಶಪೂರ್ವಕವಾಗಿ ಹೆಚ್ಚಿನ ಸಂಖ್ಯೆಯ ಆರೋಗ್ಯವಂತ ಜನರಲ್ಲಿ ಕರೊನಾ ಸೋಂಕು ಉಂಟು ಮಾಡಿ, ಪರೀಕ್ಷೆ ಮುಂದುವರಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಹೇಳಿದ್ದಾರೆ.

 

ನಾವು ಸಮಯದ ವಿರುದ್ಧ ಹೋರಾಡುತ್ತಿದ್ದೇವೆ. ಯುರೋಪ್​ನಲ್ಲಿ ಈಗಾಗಲೆ ಕರೊನಾ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಅಮೆರಿಕ ಮತ್ತು ಬ್ರಿಟನ್​ನಲ್ಲಿ ಹೆಚ್ಚಾಗಿದೆ. ಆದರೆ ಅಲ್ಲಿ ಕೂಡ ಸದ್ಯದಲ್ಲೇ ಸೋಂಕಿತರ ಸಂಖ್ಯೆ ಕಡಿಮೆಯಾಗುವುದು ನಿಶ್ಚಿತ. ಹಾಗಾಗಿ, ಸಂಶೋಧನೆಗೆ ತೊಡಕಾಗುವ ಸಾಧ್ಯತೆ ಇರುವುದರಿಂದ, ಸಂಶೋಧನೆಗಳನ್ನು ತ್ವರಿತವಾಗಿ ಕೈಗೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ವಿವರಿಸಿದ್ದಾರೆ.

 

ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಸಂಶೋಧನೆಯಲ್ಲಿ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ಸಂಶೋಧಕರ ಜತೆಗೆ ಸ್ಯಾನೋಫಿ, ಜಾನ್ಸನ್​ ಆಯಂಡ್​ ಜಾನ್ಸನ್​, ಗ್ಲಾಕ್ಸೋಸ್ಮಿತ್​ಕ್ಲೈನ್​ ಮತ್ತು ಫೈಜರ್​ ಜತೆ ಅಸ್ಟ್ರಾಜೆನೆಕಾ ಕೂಡ ಶ್ರಮಿಸುತ್ತಿದೆ.

ವಿಶ್ವದ ಹಲವು ರಾಷ್ಟ್ರಗಳು ಲಾಕ್​ಡೌನ್​ ಮೂಲಕ ಕರೊನಾ ಸೋಂಕಿನ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಿದ್ದಾರಾದರೂ, ಈ ಸೋಂಕುರಹಿತ ವಾತಾವರಣದಲ್ಲಿ ಎಂದಿನಂತೆ ಮುಕ್ತವಾಗಿ ಜನಜೀವನ ನಡೆಯುವಂತೆ ಮಾಡಲು ಬದ್ಧವಾಗಿವೆ. ಈ ಹಿನ್ನೆಲೆಯಲ್ಲಿ ರೋಗನಿರೋಧಕ ಚುಚ್ಚುಮದ್ದಿನ ಸಂಶೋಧನೆಗೆ ಎಲ್ಲ ರಾಷ್ಟ್ರಗಳು ಒತ್ತು ನೀಡುತ್ತಿವೆ.

 

మరింత సమాచారం తెలుసుకోండి: