ಕರ್ನಾಟಕದಲ್ಲಿ ಕೊರೋನ ನಡೆಸುತ್ತಿರುವ ಅಟ್ಟಹಾಸದಿಂದಾಗಿ ನಾಡಿನ ಜನತೆ ಆತಂಕ್ಕೆ ಸಿಲುಕಿದ್ದಾರೆ. ಪ್ರತಿನಿತ್ಯ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ಲೇ ಇದೆ. ಇಂದು ಒಂದೇ ದಿನ  ಕರ್ನಾಟಕದಲ್ಲಿ ಕೊರೋನಾ ಸೋಂಕು ಸಾವಿರದ ಗಡಿಯನ್ನು ದಾಟಿ ಮುನ್ನುಗ್ಗುತ್ತಿದೆ. ಇದು ನಾಡಿನ ಜನತೆಯಲ್ಲಿ ಭೀತಿಯನ್ನು ಹೆಚ್ಚಿಸಿದೆ. ಅಷ್ಟಕ್ಕೂ ಇಂದು ಕರ್ನಾಟಕದಲ್ಲಿ ದಾಖಲಾದ ಕೊರೋನಾ ಸೋಂಕು ಎಷ್ಟು ಗೊತ್ತಾ.?  

 

ರಾಜ್ಯದಲ್ಲಿ ಭಾನುವಾರವೂ ಕೊರೋನಾ ಸೋಂಕು ಅಕ್ಷರಶಃ ಸ್ಪೋಟಗೊಂಡಿದ್ದು, ಇದೇ ಮೊದಲ ಬಾರಿಗೆ ಪ್ರಕರಣಗಳ ಸಂಖ್ಯೆ ಸಾವಿರ ಗಡಿ ಮಾಡಿದೆ. ಭಾನುವಾರ ರಾಜ್ಯದಲ್ಲಿ ಬರೋಬ್ಬರಿ 1262ಸೋಂಕಿನ ಪ್ರಕರಣಗಳು ದೃಡಪಟ್ಟಿವೆ.

ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೋಂಕು ಪತ್ತೆಯಾಗಿದ್ದು, ಜನತೆಯನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ. ಭಾನುವಾರ ಪತ್ತೆಯಾದ 1262 ಪ್ರಕರಣಗಳು ಸೇರಿದಂತೆ ಒಟ್ಟು ರಾಜ್ಯದಲ್ಲಿ ಸೋಂಕಿನ ಸಂಖ್ಯೆ 13 190ಕ್ಕೆ ಏರಿಕೆ ಯಾಗಿದೆ.

ಮತ್ತೊಂದು ಆಘಾತಕಾರಿ ಬೆಳವಣಿಗೆಯಲ್ಲಿ ಭಾನುವಾರ ಕೊರೋನಾದಿಂದಲೇ 16 ಮಂದಿ ಸಾವನ್ನಪ್ಪಿದ್ದಾರೆ.


ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 207 ಕ್ಕೆ ಮುಟ್ಟಿದೆ. ಪತ್ತೆಯಾದ ಒಟ್ಟು ಪ್ರಕರಣಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲೇ 783 ಸೋಂಕಿನ ಪ್ರಕರಣಗಳು ದೃಡಪಟ್ಟಿವೆ. ಶನಿವಾರವೂ ಬೆಂಗಳೂರಿನಲ್ಲಿ ಹೆಚ್ಚಿನ ಪ್ರಕರಣ ಪತ್ತೆಯಾಗಿತ್ತು.

 

ಇದೀಗ ಪುನಃ ಕೊರೋನಾ ಹೆಚ್ಚಳವಾಗಿರುವುದು ಸಿಲಿಕಾನ್ ಸಿಟಿಯ ಜನತೆಯನ್ನು ನಿದ್ದೆಗೇಡುವಂತೆ ಮಾಡಿದೆ‌.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಬೆಂಗಳೂರು ನಗರ 783, ದಕ್ಷಿಣ ಕನ್ನಡ 97, ಬಳ್ಳಾರಿ 71, ಉಡುಪಿ 40, ಕಲಬುರಗಿ 34, ಹಾಸನ 31, ಗದಗ 30, ಬೆಂಗಳೂರು ಗ್ರಾಮಾಂತರ 27, ಧಾರವಾಡ 18,

ಮೈಸೂರು 18, ಬಾಗಲಕೋಟೆ 17, ಉತ್ತರ ಕನ್ನಡ 14, ಹಾವೇರಿ 12, ಕೋಲಾರ 11, ಬೆಳಗಾವಿ 8, ಬೀದರ್ 7, ಚಿತ್ರದುರ್ಗ 7, ರಾಯಚೂರು 6, ಮಂಡ್ಯ 6, ದಾವಣಗೆರೆ 6, ವಿಜಯಪುರ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಕೊಪ್ಪಳ, ಚಿಕ್ಕಮಗಳೂರು, ಕೊಡಗು ತಲಾ ಮೂರು, ತುಮಕೂರು 2 ಮತ್ತು ಯಾದಗಿರಿಯಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿವೆ.

 

220 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ರಾಜ್ಯದಲ್ಲಿ 5,472 ಸಕ್ರಿಯ ಕೊರೊನ ಪ್ರಕರಣಗಳಿವೆ. ಐಸಿಯುವಲ್ಲಿ 243 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ನಾಲ್ವರ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಕೊರೊನಾದಿಂದ ಈವರೆಗೆ 88 ಜನರ ಸಾವಿಗೀಡಾಗಿದ್ದಾರೆ.

 

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಇಂದು 16 ಜನರು ಮೃತಪಟ್ಟಿದ್ದು, ಕರ್ನಾಟಕದಲ್ಲಿ ಈವರೆಗೆ ಕೊರೊನಾದಿಂದ 207 ಜನರು ಮೃತಪಟ್ಟಿದ್ದಾರೆ. 13,190 ಸೋಂಕಿತರ ಪೈಕಿ 7,507 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 5472 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

మరింత సమాచారం తెలుసుకోండి: