ಕೊರೋನಾ ವೈರಸ್ ಇಡೀ ವಿಶ್ವದಾದ್ಯಂತ ಕೊರೋನ ಒಂದು ಕೋಟಿ ಜನರನ್ನು ತಲುಪಿ  ಮತ್ತಷ್ಟು ಜನರನ್ನು ಹಾವುತಿ ತೆಗೆದುಕೊಳ್ಳುವುದಕ್ಕೆ ರಬಸದಿಂದ ಮುನ್ನುಗ್ಗುತ್ತಿದೆ. ಈಗಾಗಲೇ ಈ ಕೊರೋನಾ ವೈರಸ್ ಗೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದು ಇನ್ನು ಕೊಟ್ಯಾಂತರ ಮಂದಿ ಕೊರೋನಾದ ಸುಳಿಯಲ್ಲಿ  ಸಿಲುಕಿ ನರಳುತ್ತಿದ್ದಾರೆ. ಈ ಕೊರೋನಾವನ್ನು ಇಡೀ ವಿಶ್ವದಿಂದ ಮುಕ್ತಿಗೊಳಿಸಲು ವಿಶ್ವದ ಅನೇಕ ರಾಷ್ಟ್ರಗಳ ಸಂಶೋ‍ಧಕರು ಕೋವಿಡ್ ನ ಔಷಧಿಯ ಕುರಿತಾಗಿ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಈ ನಿರಂತರ ಪ್ರಯತ್ನದ ಫಲವಾಗಿ ಭಾರತದಲ್ಲಿ ಔಷಧಿಯೊಂದು ಸಂಶೋಧನೆಗೊಂಡಿದೆ. ಈ ಔಷಧಿ ಈಗಾಗಲೇ ಎಲ್ಲಾ ಕ್ಲಿನಿಕಲ್ ಟೆಸ್ಟ್ ಗಳನ್ನು ಮುಗಿಸಿ ಮಾರುಕಟ್ಟೆಗೆ ಲಗ್ಗೆ ಇಡಲು ಕಾಯುತ್ತಿದೆ ಅಷ್ಟಕ್ಕೂ ಕೊರೋನಾಗೆ ವೈರಿಯಾಗುವ ಆ ಔಷಧಿ ಯಾವುದು ಗೊತ್ತಾ..?

 

ಇದೀಗ ಮಾನವರ ಮೇಲಿನ ಪ್ರಯೋಗಕ್ಕೆ ಒಳಗಾಗಿ, ಆಗಸ್ಟ್​ 15ಕ್ಕೆ ಕರೊನಾ ವೈರಾಣುವಿನಿಂದ ಸ್ವಾತಂತ್ರ್ಯ ಕೊಡಿಸಲು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿರುವ ದೇಶದ ಮೊದಲ ಕೋವಿಡ್​-19 ರೋಗನಿರೋಧಕ ಚುಚ್ಚುಮದ್ದು ಕೊವ್ಯಾಕ್ಸಿನ್​ ಯಶಸ್ವಿಯಾಗುವುದು ನಿಶ್ಚಿತ ಎಂದು ಹೈದರಾಬಾದ್ ಮೂಲದ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಲಿಮಿಟೆಡ್​ನ (ಬಿಬಿಐಎಲ್​) ಚೇರ್ಮನ್​ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ. ಕೃಷ್ಣ ಎಲಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

ಇದು ದೇಶಿಯವಾಗಿ ಉತ್ಪಾದಿಸಲ್ಪಟ್ಟಿರುವ ಇನ್​ಆಯಕ್ಟಿವೇಟೆಡ್​ ರೋಗನಿರೋಧಕ ಚುಚ್ಚುಮದ್ದು ಇದಾಗಿದೆ. ಈ ಚುಚ್ಚುಮದ್ದನ್ನು ಮನುಷ್ಯರ ಮೇಲೆ ಪ್ರಯೋಗಿಸಲು ಕರೊನಾ ಸೋಂಕಿತರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿರುವುದಾಗಿ ಹೇಳಿದ್ದಾರೆ.

ಕೊವ್ಯಾಕ್ಸಿನ್​ ಅನ್ನು ವೆರೋ ಸೆಲ್​ ಪ್ಲಾಟ್​ಫಾರಂ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಇನ್​ಆಯಕ್ಟಿವೇಟೆಡ್​ ರೋಗನಿರೋಧಕ ಚುಚ್ಚುಮದ್ದುಗಳು ಬಹಳಷ್ಟು ಸೋಂಕುಗಳಿಗೆ ಪರಿಣಾಮಕಾರಿ ಎನಿಸಿವೆ. ಅವುಗಳ ಸಾಲಿಗೆ ಕೊವ್ಯಾಕ್ಸಿನ್​ ಕೂಡ ಸೇರುತ್ತದೆ ಎಂದು ಹೇಳಿದ್ದಾರೆ.

 

ಪುಣೆಯ ನ್ಯಾಷನಲ್ ಇನ್​ಸ್ಟಿಟ್ಯೂಟ್​ ಆಫ್​ ವೈರಾಲಜಿ ಅವರು ಕರೊನಾ ವೈರಾಣುವಿನ ಸ್ಟ್ರೈನ್​ ಅನ್ನು ಪ್ರತ್ಯೇಕಿಸಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್​) ಕೊಟ್ಟರು. ಅದನ್ನು ಪಡೆದುಕೊಂಡ ಬಿಬಿಐಎಲ್​ ರೋಗನಿರೋಧಕ ಚುಚ್ಚುಮದ್ದಿನ ಕ್ಯಾಂಡಿಡೇಟ್​ ಅನ್ನು ಸಿದ್ಧಪಡಿಸಿತು. ಭಾರತ್​ ಬಯೋಟೆಕ್​ ಈ ಹಿಂದೆ ರೇಬಿಸ್​, ಪೋಲಿಯೋ, ರೊಟಾವೈರಸ್​, ಜಾಪನೀಸ್​ ಎನ್​ಸಿಫಲೈಟಿಸ್​, ಚಕೂನ್​ಗುನ್ಯಾ ಮತ್ತು ಝೈಕಾ ಸೋಂಕು ನಿವಾರಣೆಗಾಗಿ ಇನ್​ಆಯಕ್ಟಿವೇಟೆಡ್​ ರೋಗನಿರೋಧಕಗಳನ್ನು ಅಭಿವೃದ್ಧಿಪಡಿಸಿದ ಅನುಭವ ಹೊಂದಿದೆ. ಇದೀಗ ಆ ಸಂಸ್ಥೆ ಕೋವಿಡ್​-19 ಸೋಂಕಿಗೂ ಇನ್​ಆಯಕ್ಟಿವೇಟೆಡ್​ ರೋಗನಿರೋಧಕ ಚಚ್ಚುಮದ್ದನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ.

 

ಈ ಚುಚ್ಚುಮದ್ದನ್ನು ಸೋಂಕಿತರಿಗೆ ಕೊಟ್ಟಾಗ, ಅದರಲ್ಲಿರುವ ವೈರಾಣುವಿನ ಸ್ಟ್ರೈನ್​ಗೆ ಸೋಂಕು ಉಂಟು ಮಾಡಲಾಗಲಿ ಅಥವಾ ವಂಶಾಭಿವೃದ್ಧಿಗಾಗಲಿ ಅವಕಾಶ ಇರುವುದಿಲ್ಲ. ಹಾಗಾಗಿ ಮೃತ ವೈರಾಣುವಾಗಿ ಇದು ರೋಗನಿರೋಧಕ ವ್ಯವಸ್ಥೆಯನ್ನು ಜಾಗೃತಗೊಳಿಸುತ್ತಾ, ಕರೊನಾ ವೈರಾಣು ವಿರುದ್ಧ ರೋಗನಿರೋಧಕಶಕ್ತಿಯಾಗಿ ಕೆಲಸ ಮಾಡುತ್ತದೆ ಎಂದು ವಿವರಿಸಿದ್ದಾರೆ.

 

మరింత సమాచారం తెలుసుకోండి: