ಒಂದು ಅಧ್ಯಯನದ ಪ್ರಕಾರ ಕೊರೋನಾ ವೈರಸ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿ ಹೊಂದಿರುವಂತಹ ವ್ಯಕ್ತಿಗೆ ಬಹು ಬೇಗನೇ ಕೊರೋನಾ ಸೋಂಕು ನಾಟುವುದಿಲ್ಲ  ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿರುವಂತಹ ವಿಷಯವಾಗಿದೆ. ಆದರೆ ಈ ಕೊರೋನಾ ಸೋಕಿನಿಂದ ಗುಣಮುಖನಾದ ವ್ಯಕ್ತಿಯಲ್ಲಿ ಮತ್ತೆ ಈ ಸೋಂಕು ಬರುವುದಿಲ್ಲ ಎಂದು ಹೇಳಲಾಗುತ್ತಿದೆ.

 

ಹೌದು ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಕರೊನಾ ಸೋಂಕಿಗೆ ಒಳಗಾಗುವ ಸಾಧ್ಯತೆ ಅಧಿಕ. ಹೀಗಾಗಿ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಆಹಾರ, ಪಾನೀಯಗಳನ್ನು ಸೇವಿಸಿ ಎಂದಿ ಸಲಹೆ ನೀಡಲಾಗುತ್ತಿದೆ. ಆದರೆ, ಒಮ್ಮೆ ಕರೊನಾ ಸೋಂಕಿಗೆ ಒಳಗಾದಲ್ಲಿ ದೇಹದಲ್ಲಿ ವೈರಸ್​ಗೆ ಪ್ರತಿರೋಧ ತೋರುವ ಶಕ್ತಿ ಹೆಚ್ಚಾಗುತ್ತದೆ ಹಾಗೂ ಮರು ಸೋಂಕಿಗೆ ಒಳಗಾಗುವ ಸಾಧ್ಯತೆಯೂ ಕಡಿಮೆ ಎಂಬುದು ಅಧ್ಯಯನವೊಂದರಲ್ಲಿ ಗೊತ್ತಾಗಿದೆ.

 

ಚೀನಾದ ಪೀಕಿಂಗ್​ ಯುನಿಯನ್​ ವೈದ್ಯಕೀಯ ಕಾಲೇಜಿನ ಸಂಶೋಧಕರು ಇದನ್ನು ಕಂಡುಕೊಂಡಿದ್ದು, ಮಂಗಗಳ ಮೇಲೆ ನಡೆಸಿದ ಅಧ್ಯಯನದಲ್ಲಿ ಇದು ಸಾಬೀತಾಗಿದೆ. ಕರೊನಾ ಸೋಂಕಿಗೆ ಒಳಗಾದಾಗ ಮಂಗಗಳು ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿವೆ. ಆರಂಭದಲ್ಲಿ ಕೋವಿಡ್​ನ ಲಘು ಹಾಗೂ ಸಾಮಾನ್ಯ ಲಕ್ಷಣಗಳು ಕಂಡು ಬಂದ ಬಳಿಕವೂ ಎರಡು ವಾರಗಳಲ್ಲಿಯೇ ಅವುಗಳು ಚೇತರಿಸಿಕೊಂಡಿವೆ. 28 ದಿನಗಳ ಬಳಿಕ ಅವುಗಳಲ್ಲಿ ಮರು ಸೋಂಕಿಗೆ ಒಳಗಾಗುವ ಅಪಾಯವೂ ಕಡಿಮೆಯಾಗಿತ್ತು ಎಂದು ಸಂಶೋಧಕರು ತಿಳಿಸಿದ್ದಾರೆ.

 

ಮಂಗಗಳ ಶ್ವಾಸನಾಳದ ಮೂಲಕ ಅವುಗಳಿಗೆ ವೈರಸ್​ ಸೋಂಕು ತಗಲುವಂತೆ ಮಾಡಲಾಯಿತು. ನಿಯಮಿತವಾಗಿ ಪಡೆದ ಮಾದರಿಗಳನ್ನು ವಿಶ್ಲೇಷಿಸಿದಾಗ ಮೂರೇ ದಿನಗಳಲ್ಲಿ ಸೋಂಕು ವ್ಯಾಪಿಸುವ ಸಾಮರ್ಥ್ಯ ಹೆಚ್ಚಾಗಿರುವುದು ಕಂಡುಬಂತು.

 

ಅಚ್ಚರಿಯ ವಿಷಯವೆಂದರೆ, ಸೋಂಕಿನ ಮೊದಲ ಡೋಸ್​ಗೆ ಅವುಗಳಲ್ಲಿ ಪ್ರತಿರೋಧ ಶಕ್ತಿ ಸೃಷ್ಟಿಯಾಗಿರುವುದು ತಿಳಿದು ಬಂತು. ಈ ಶಕ್ತಿಯೇ ಅವುಗಳನ್ನು ಮತ್ತೆ ಸೋಂಕಿಗೆ ಒಳಗಾಗುವುದರಿಂದ ತಡೆದಿದೆ ಎಂದು ತಜ್ಞರು ಹೇಳಿದ್ದಾರೆ.

 

ಅಮೆರಿಕದ ಷಿಕಾಗೋದಲ್ಲಿ ಕಳೆದ ಮೇ ತಿಂಗಳಲ್ಲಿ ನಡೆಸಿದ ಅಧ್ಯಯನದಲ್ಲೂ ಇದೇ ಅಂಶ ಕಂಡುಬಂದಿದೆ. ಕೋವಿಡ್​ ಸೋಂಕಿಗೆ ಒಳಗಾದವರು ಚೇತರಿಸಿಕೊಂಡಲ್ಲಿ ಅವರಲ್ಲಿ ಮತ್ತೆ ಸೋಂಕಿಗೆ ಒಳಗಾಗದಂತೆ ತಡೆಯುವ ಶಕ್ತಿಯೂ ಮೂಡಿರುತ್ತದೆ ಎಂದು ಹೇಳಲಾಗಿದೆ.
ಸದ್ಯ ಲಸಿಕೆಗಳು ಸಂಶೋಧನಾ ಹಂತದಲ್ಲಿ ಇರುವುದರಿಂದ ಈ ವಿಚಾರ ಆಶಾದಾಯಕ ವಿಚಾರವಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

 

మరింత సమాచారం తెలుసుకోండి: