ಕೊರೋನಾ ವಯರಸ್ ದಿನದಿಂದ ದಿನಕ್ಕೆ ಉಗ್ರರೂಪವನ್ನು ತೆಗೆದುಕೊಂಡು ತನ್ನ ಪ್ರತಾಪವನ್ನು ತೋರಿಸಲು ಆರಂಭಿಸಿದೆ.  ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಪ್ರತಿನಿತ್ಯ ಸಾವರಿದ ಗಡಿಯನ್ನು ದಾಟುತ್ತಲೇ ಇದೆ. ಅದರಂತೆ ರಾಜ್ಯದ ರಾಜಧಾನಿ ಸೇರಿಂದತಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಕೂಡ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದರಿಂದ ಇದರಿಂದ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಉಂಟಾಗಿ ರೋಗಿಗಳು ಪರದಾಡುವಂತಾಗಿದೆ. ಅದೇರೀತಿ ರಾಜಧಾನಿಯ ಸನಿಹದಲ್ಲೇ ಇರುವ ತುಮಕೂರಿನಲ್ಲೂ ಕೂಡ ಸೋಂಕು ಹೆಚ್ಚಾಗಿ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಉಂಟಾಗಿದೆ ಇದಕ್ಕೆ ಜಿಲ್ಲಾಡಳಿತ  ಒಂದು ಸೂಕ್ತ ಕ್ರಮವೊಂದನ್ನು.ತೆಗೆದುಕೊಂಡಿದೆ.  ಅಷ್ಟಕ್ಕೂ ಆ ಕ್ರಮೇನು ಗೊತ್ತಾ..? 

ತುಮಕೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತಿದೆ. ಹಾಗಾಗಿ ಜಿಲ್ಲಾಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ ಸಾಲುತಿಲ್ಲ. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಸುಮಾರು 450 ಹಾಸಿಗೆಯುಳ್ಳ ಕೋವಿಡ್-19 ಕೇರ್ ಸೆಂಟರ್​​​​ ಅನ್ನು ತೆರೆದಿದೆ. ಈ ಮೂಲಕ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಿದೆ.

ಕೊರೋನಾ ಶಂಕಿತರನ್ನು ಈಗಾಗಲೇ ಮನೆಗಳಲ್ಲಿ ಹಾಗೂ ಕೆಲವು ಹಾಸ್ಟೆಲ್​​ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಕೋವಿಡ್​-19 ರೋಗಲಕ್ಷಣ ಇಲ್ಲದೇ ಇದ್ದರೂ ಹಲವರಲ್ಲಿ ಪಾಸಿಟಿವ್ ಬಂದಿರುತ್ತದೆ. ಅಂಥವರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ತುಮಕೂರು ಜಿಲ್ಲಾಡಳಿತ ಚಿಂತಿಸಿದೆ. ಹಾಗಾಗಿ ಪ್ರತ್ಯೇಕವಾಗಿ ಕೋವಿಡ್ ಕೇರ್ ಸೆಂಟರನ್ನು ತೆರೆದಿದೆ.

ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲೂ ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ. ಜಿಲ್ಲಾ ಮಟ್ಟದಲ್ಲಿ ತುಮಕೂರು ನಗರದ ಕ್ಯಾತಸಂದ್ರ ಬಳಿಯ ಕ್ರೀಡಾ ಸಮುಚ್ಚಯದಲ್ಲಿ ಸುಮಾರು 4೦೦ ಹಾಸಿಗೆಯುಳ್ಳ ವಾರ್ಡ್ ತೆರೆಯಲಾಗಿದೆ. ಚಿಕಿತ್ಸೆಗೆ ಬೇಕಾದ ಎಲ್ಲಾ ವೈದ್ಯಕೀಯ ಉಪಕರಣಗಳನ್ನು ಪೂರೈಸಲಾಗುತ್ತಿದೆ. ಅದೇ ರೀತಿ ಮಹಿಳಾ ಸೋಂಕಿತರಿಗೂ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಕ್ರೀಡಾ ಸಮುಚ್ಚಯದ ಪಕ್ಕದಲ್ಲೇ ಇರುವ ಎಸ್​​ಸಿ ಎಸ್​​ಟಿ ಹಾಸ್ಟೆಲ್​​ನಲ್ಲಿ ಮಹಿಳಾ ರೋಗಿಗಳಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ 50 ಹಾಸಿಗೆಯುಳ್ಳ ವಾರ್ಡ್ ಇದೆ.

ನಾಳೆಯಿಂದ ಕ್ರೀಡಾ ಸಮುಚ್ಚಯದ ಹಾಗೂ ಹಾಸ್ಟೆಲ್ ವಾರ್ಡ್​ಗಳಲ್ಲಿ ಸೋಂಕಿತರನ್ನು ಶಿಫ್ಟ್​ ಮಾಡುವ ಪ್ರಕ್ರಿಯೆ ಆರಂಭವಾಗಲಿದೆ. ಈ ಎಲ್ಲಾ ಕೋವಿಡ್ ಕೇರ್ ಸೆಂಟರ್​​ಗಳಲ್ಲಿ ದಿನದ 24 ಗಂಟೆಯೂ ವೈದ್ಯರು ಮತ್ತು ನರ್ಸ್​ಗಳು ಲಭ್ಯರಿದ್ದು, ಚಿಕಿತ್ಸೆ ನೀಡಲಿದ್ದಾರೆ. ಈ ಕೋವಿಡ್ ಕೇರ್ ಸೆಂಟರ್​​ಗಳಲ್ಲಿ ಕುಡಿಯುವ ನೀರು, ಸ್ನಾನ ಮತ್ತು ಶೌಚಗೃಹ ಸೇರಿದಂತೆ ಇತರೇ ಮೂಲ ಸೌಲಭ್ಯದ ಕುರಿತು ಜಾಗ್ರತೆ ವಹಿಸಲಾಗಿದೆ. ಅದರ ಜೊತೆಗೆ ವಾತಾವರಣವನ್ನು ಅತ್ಯಂತ ಸ್ವಚ್ಚವಾಗಿಡಲಾಗಿದೆ. ಒಟ್ಟಾರೆ ಆತಂಕದ ನಡುವೆ ತುಮಕೂರು ಜಿಲ್ಲಾಡಳಿತ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳುತಿದೆ.

మరింత సమాచారం తెలుసుకోండి: