ಅದ್ದೂರಿ, ಬಹದ್ದೂರ್, ಭರ್ಜರಿ ಈಗೆ ಮೂರೇ ಚಿತ್ರಗಳ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಧ್ರುವ ಸರ್ಜಾಗೆ ನಿನ್ನೆಯಷ್ಟೇ ಭರ್ತಡೇಯಾಗಿದೆ. ನಟ ದ್ರುವಾ ಅವರು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಇನ್ನೊಂದು ಖುಷಿಯ ಸಂಗತಿಯನ್ನು  ಹಂಚಿಕೊಂಡಿದ್ದಾರೆ. ನವೆಂಬರ್ ತಿಂಗಳ 24- 25ರಂದು ಮದುವೆ ಆಗುತ್ತಿರುವುದಾಗಿ ಘೋಷಿಸಿದ್ದಾರೆ. 


 ಧ್ರುವ ಸರ್ಜಾ ಸದ್ಯಕ್ಕೆ 'ಪೊಗರು' ಸಿನಿಮಾ ಚಿತ್ರೀಕರಣ ಮುಗಿಸಿದ್ದಾರೆ. 'ಬಹದ್ದೂರ್', 'ಭರ್ಜರಿ' ಸಿನಿಮಾಗಳಲ್ಲಿ ನಟಿಸಿರುವ ಧ್ರುವ ಸರ್ಜಾ ಅಭಿಮಾನಿಗಳಿಂದ ಆ್ಯಕ್ಷನ್ ಪ್ರಿನ್ಸ್​ ಎಂದು ಕರೆಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್​ನಲ್ಲಿ ಬಹುಕಾಲದ ಗೆಳತಿ ಪ್ರೇರಣಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಧ್ರುವ ಸರ್ಜಾ ಇದೀಗ ಹಸೆಮಣೆ ಏರುತ್ತಿದ್ದಾರೆ.  ನಿನ್ನೆ 31ನೇ ವರ್ಷಕ್ಕೆ ಕಾಲಿಟ್ಟಿರುವ ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ನಂದಕಿಶೋರ್ ನಿರ್ದೇಶಿಸುತ್ತಿರುವ 'ಪೊಗರು' ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಇದೇ ತಿಂಗಳ 24ರಂದು ಧ್ರುವ ಸರ್ಜಾ ಅಭಿನಯದ 'ಪೊಗರು' ಸಿನಿಮಾದ ಡೈಲಾಗ್ ಟ್ರೈಲರ್ ರಿಲೀಸ್ ಆಗಲಿದೆ. ಈ ವಿಷಯವನ್ನು ಖುದ್ದು ಧ್ರುವ ಸರ್ಜಾ ನಿನ್ನೆ ಟ್ವಿಟ್ಟರ್​ ನಲ್ಲಿ ಘೋಷಿಸಿಕೊಂಡಿದ್ದಾರೆ.


 2018ರ ಡಿಸೆಂಬರ್​ನಲ್ಲಿ ಬನಶಂಕರಿಯಲ್ಲಿ ಧ್ರುವ ಸರ್ಜಾ- ಪ್ರೇರಣಾ ನಿಶ್ಚಿತಾರ್ಥ ನೆರವೇರಿತ್ತು. ಈಗಾಗಲೇ 'ಪೊಗರು' ಸಿನಿಮಾ ಶೂಟಿಂಗ್ ಮುಗಿದಿರುವುದರಿಂದ ಇನ್ನು ಮದುವೆಯ ಸಿದ್ಧತೆಯಲ್ಲಿ ಧ್ರುವ ಬ್ಯುಸಿಯಾಗಲಿದ್ದಾರೆ. ಪೊಗರು' ಸಿನಿಮಾ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಹಿಂದಿಯಲ್ಲೂ ತೆರೆ ಕಾಣಲಿದೆ. ಹೀಗಾಗಿ, ಈ ಸಿನಿಮಾ ಬಗ್ಗೆ ಧ್ರುವ ಸರ್ಜಾಗೆ ನಿರೀಕ್ಷೆಗಳು ತುಸು ಹೆಚ್ಚೇ ಇವೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾಗೆ ಶಾನ್ವಿ ಶ್ರೀವಾತ್ಸವ್ ಹಾಗೂ ರಶ್ಮಿಕಾ ಮಂದಣ್ಣ ನಾಯಕಿಯರಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ನಂದ ಕಿಶೋರ್ ಮತ್ತೊಂದು ಸಿಹಿ ಸುದ್ದಿಯನ್ನು ಹೇಳಿಕೊಂಡಿದ್ದು, ಧ್ರುವ ಸರ್ಜಾ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ತೆರೆಗೆ ತರಲು ನಿರ್ಧರಿಸಿದ್ದಾರಂತೆ. ಉದಯ್​ ಮೆಹ್ತಾ  ಚಿತ್ರವನ್ನು ನಿರ್ಮಿಸಲಿದ್ದಾರೆ. ಡಿಸೆಂಬರ್​ ಅಥವಾ ಜನವರಿ ತಿಂಗಳಿನಲ್ಲಿ ಚಿತ್ರಿಕರಣ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ. ಧ್ರುವ ಸರ್ಜಾ ನಟಿಸಿರುವ 3 ಚಿತ್ರಗಳಿಗೆ ಕೋಟಿಗಟ್ಟಲೆ ಸಂಭಾವನೆ ಪಡೆದಿದ್ದಾರೆ. 


మరింత సమాచారం తెలుసుకోండి: