ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ನ ನಿರೂಪಕರಾದ ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ವಿವಾಹದ  18ನೇ ವಾರ್ಷಿಕೋತ್ಸವ ಸಂಭ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಿದ್ದಾರೆ.  ಕಿಚ್ಚ ಸುದೀಪ್ ಹೆಂಡತಿ ಪ್ರಿಯಾ, ಸ್ನೇಹಿತರು, ಅಭಿಮಾನಿಗಳು ಮತ್ತು ಕುಟುಂಬದವರ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ವಿಶೇಷ ಅಂದ್ರೆ ಸುದೀಪ್ ಮದುವೆ ವಾರ್ಷಿಕೋತ್ಸವದ ದಿನವೆ ಬಾರಿ ಸದ್ದು ಸುದ್ದಿ ಮಾಡಿದ್ದ 'ದಿ ವಿಲನ್' ಸಿನಿಮಾ ರಿಲೀಸ್ ಆಗಿತ್ತು. ಕಳೆದ ವರ್ಷ ಇದೆ ದಿನ ಆಕ್ಟೋಬರ್ 18ರಂದು ವಿಲನ್ ಅದ್ದೂರಿಯಾಗಿ ತೆರೆಗೆ ಬಂದಿತ್ತು.


ಕಿಚ್ಚ ಸುದೀಪ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮೊದಲ ಬಾರಿಗೆ ದಿ ವಿಲನ್ ಸಿನಿಮಾದಲ್ಲಿ ಮಿಂಚಿದ್ದರು. ಇಬ್ಬರು ಸ್ಟಾರ್ಸ್ ಒಂದೆ ಸಿನಿಮಾದಲ್ಲಿ ಕಾಣಿಸಿಕೊಂಡ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದ್ದು. ಆದ್ರೆ ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ದಿ ವಿಲನ್ ವಿಫಲವಾಗಿತ್ತು. ಕಲೆಕ್ಷನ್ ವಿಚಾರದಲ್ಲಿ ಭಾರಿ ಸದ್ದು ಮಾಡಿತ್ತು ದಿ ವಿಲನ್.  ಬಿಗ್ ಬಾಸ್ ನಲ್ಲಿ ಪ್ರಿಯಾ ಸುದೀಪ್ ಈ ಬಾರಿಯ ಬಿಗ್ ಬಾಸ್ ವೇದಿಕೆ ಮೇಲೆ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ.

ಸುದೀಪ್ ತಮ್ಮ ಪತ್ನಿ ಜೊತೆಗೆ ವೇದಿಕೆ ಹಂಚಿಕೊಳ್ಳುತ್ತಿರುವ ಕಾರಣ ಈ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಡೆಯಲಿದೆ. ಸುದೀಪ್ ಬದುಕಿನ ಈ ಸಂಭ್ರಮದ ಕ್ಷಣವನ್ನು 'ಬಿಗ್ ಬಾಸ್'ನಲ್ಲಿ ಆಚರಿಸಲು ಕಲರ್ಸ್ ಕನ್ನಡ ವಾಹಿನಿ ನಿರ್ಧಾರ ಮಾಡಿದೆ. ಕನ್ನಡ ಸ್ಟಾರ್ ಗಳ ವಿದ್ಯಾಭ್ಯಾಸ ಏನು?, ಅವ್ರು ಓದು ನಿಲ್ಲಿಸಿದ್ದು ಏಕೆ? ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಸುದೀಪ್ ದಂಪತಿಗಳಿಗೆ ಶುಭಾಶಯಗಳು ಹರಿದು ಬರುತ್ತಿವೆ. ಸುದೀಪ್ ಅಭಿಮಾನಿಗಳ ಸಂಘಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಧ ವಿಧವಾದ ಪೋಸ್ಟರ್ ಗಳ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಸುದೀಪ್ ಹಾಗೂ ಪ್ರಿಯಾ ಸುದೀಪ್ ಅಕ್ಟೋಬರ್ 18, 2000 ರಲ್ಲಿ ವಿವಾಹ ಆಗಿದ್ದರು. ಅವರಿಗೆ ಸಾನ್ವಿ ಎಂಬ ಮಗಳಿದ್ದಾರೆ.


మరింత సమాచారం తెలుసుకోండి: