ಗಿರ್ಮಿಟ್, ಸ್ಯಾಂಡಲ್ ವುಡ್ ನ ಬಹು ನಿರೀಕ್ಷೆ ಹುಟ್ಟಿಸಿರುವ ಚಿತ್ರ ಗಿರ್ಮಿಟ್ ಚಿತ್ರಕ್ಕೆ ಇದೀಗ ರಾಕಿಂಗ್ ಸ್ಟಾರ್ ದಂಪತಿ ಧ್ವನಿ ನೀಡಿದ್ದಾರೆ.  ಸಂಗೀತ ಸಂಯೋಜಕ ರವಿ ಬಸ್ರೂರು ನಿರ್ದೇಶನದಲ್ಲಿ ಆರು ಭಾಷೆಗಳಲ್ಲಿ ಮೂಡಿಬರುತ್ತಿರುವ ‘ಗಿರ್ವಿುಟ್’ ಚಿತ್ರದ ಬಿಡುಗಡೆ ದಿನಾಂಕ ಹತ್ತಿರವಾಗಿದ್ದು, ಚಿತ್ರದ ಕುರಿತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಮತ್ತೊಂದೆಡೆ ಈ ಸಿನಿಮಾ ಯಶ್-ರಾಧಿಕಾ ಪಂಡಿತ್ ಜೋಡಿಯ ಅಭಿಮಾನಿಗಳಿಗೆ ವಿಶೇಷವಾಗಿದ್ದು, ಅವರ ಸಂಭ್ರಮವನ್ನೂ ಹೆಚ್ಚಿಸಿದೆ.


ಇದಕ್ಕೆ ಕಾರಣ ಚಿತ್ರತಂಡ ಹೊರಬಿಟ್ಟಿರುವ ಡಬ್ಬಿಂಗ್ ಟ್ರೇಲರ್. ಬಾಲ ಕಲಾವಿದರೇ ಅಭಿನಯಿಸಿರುವ ಈ ಚಿತ್ರದ ಹೀರೋ-ಹೀರೋಯಿನ್ ಪಾತ್ರಕ್ಕೆ ಯಶ್-ರಾಧಿಕಾ ಕಂಠದಾನ ಮಾಡಿದ್ದಾರೆ ಎಂಬುದು ಗೊತ್ತಿದ್ದ ವಿಚಾರವೇ. ಆದರೆ ಆ ಡಬ್ಬಿಂಗ್ ಹೇಗಿತ್ತು ಎಂಬ ಬಗ್ಗೆ ಚಿತ್ರತಂಡ ಟ್ರೇಲರ್​ವೊಂದನ್ನು ಶನಿವಾರ ಬಿಡುಗಡೆ ಮಾಡಿದ್ದು, ಆ ಕುರಿತು ಸಿನಿಪ್ರಿಯರಿಗಿದ್ದ ಒಂದು ಹಂತದ ಕುತೂಹಲ ತಣಿದಿದೆ. ಜತೆಗೆ ಟ್ರೇಲರ್​ಗೆ ಸಿಗುತ್ತಿರುವ ಪ್ರೋತ್ಸಾಹ ಹಾಗೂ ಮೆಚ್ಚುಗೆ ಚಿತ್ರದ ಕುರಿತ ಕೌತುಕವನ್ನೂ ಹೆಚ್ಚಿಸಿದೆ.


ಗಿರ್ಮಿಟ್ ಚಿತ್ರಕ್ಕೆ ನಾಯಕನಾಗಿ ನಟಿಸಿರುವ ಬಾಲ ಕಲಾವಿದ ಆಶ್ಲೇಷ್ ರಾಜ್​ಗೆ ಯಶ್, ಬೇಬಿ ಶ್ಲಾಘಾ ಸಾಲಿಗ್ರಾಮ ನಿಭಾಯಿಸಿರುವ ನಾಯಕಿ ಪಾತ್ರಕ್ಕೆ ರಾಧಿಕಾ ಪಂಡಿತ್ ಕಂಠದಾನ ಮಾಡಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಮಕ್ಕಳೇ ಅಭಿನಯಿಸಿದ್ದು, ಅವರಿಗೆ ರಂಗಾಯಣ ರಘು, ಸಾಧುಕೋಕಿಲ, ಸುಧಾ ಬೆಳವಾಡಿ, ತಾರಾ, ಅಚ್ಯುತ್​ಕುಮಾರ್,ಕಾಮಿಡಿ ಕಿಲಾಡಿಗಳು’ ಖ್ಯಾತಿಯ ನಯನಾ, ‘ಮಜಾ ಟಾಕೀಸ್’ ಪವನ್, ಪೆಟ್ರೊಲ್ ಪ್ರಸನ್ನ ಸೇರಿ ಹಲವು ಕಲಾವಿದರು ಕಂಠದಾನ ಮಾಡಿದ್ದಾರೆ. ಯಶ್-ರಾಧಿಕಾ ಎರಡೇ ದಿನದಲ್ಲಿ ಡಬ್ಬಿಂಗ್ ಕೆಲಸಗಳನ್ನು ಮುಗಿಸಿಕೊಟ್ಟಿದ್ದಾರೆ ಎಂಬುದು ಮತ್ತೊಂದು ವಿಶೇಷ. ಮಕ್ಕಳ ಚಿತ್ರವಾದರೂದೊಡ್ಡ ಕಲಾವಿದರು ಧ್ವನಿ ನೀಡಿರುವುದರಿಂದ ಕಮರ್ಷಿಯಲ್ ಸಿನಿಮಾ ನೋಡಿದ ಅನುಭವ ಆಗಲಿದೆ ಎನ್ನುತ್ತಾರೆ ನಿರ್ದೇಶಕರು. 


ಗಿರ್ಮಿಟ್ ಚಿತ್ರ ಕೇವಲ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮಲಯಾಳಂಮತ್ತು ಇಂಗ್ಲಿಷ್​ನಲ್ಲಿ ಈ ಚಿತ್ರ ಬಿಡುಗಡೆ ಆಗಲಿದೆ. ಹಿಂದಿಮತ್ತು ತೆಲುಗಿನಲ್ಲಿ ‘ಪಕ್ಕಾ ಮಾಸ್’, ತಮಿಳು ಮತ್ತು ಮಲಯಾಳಂನಲ್ಲಿ ‘ಪೊಡಿ ಮಾಸ್’ ಹಾಗೂ ಇಂಗ್ಲಿಷ್​ನಲ್ಲಿ ‘ಗಿರ್ವಿುಟ್’ ಎಂಬ ಟೈಟಲ್​ನಲ್ಲೇ ಈ ಸಿನಿಮಾ ನವೆಂಬರ್ 8ರಂದು ತೆರೆಗೆ ಬರಲಿದೆ. 


మరింత సమాచారం తెలుసుకోండి: