ಅಂಬುಲೆನ್ಸ್, ಜೀವ ಉಳಿಸುವ ರಕ್ಷಕ. 108 ಕ್ಕೆ ಕರೆ ಮಾಡಿದ ತಕ್ಷಣ ಹತ್ತಿರದ ಸ್ಥಳಗಳಿಂದ ಬಂದು ಜೀವ ರಕ್ಷಣೆ ಮಾಡುತ್ತದೆ. ಆದರೆ ಈ ನಟಿಗೆ ಸಮಯಕ್ಕೆ ಸರಿಯಾಗಿ ಆಂಬುಲೆನ್ಸ್ ಸಿಗದೇ ಪರದಾಡಿ ಕೊನೆಗೆ ಜೀವವನ್ನೇ ಕಳೆದುಕೊಂಡಿದ್ದಾರೆ. ಯಾರು ಆ ನಟಿ, ಏನಾಯ್ತು ಅಸಲೀ ಕಥೆ ಅಂತ ನಾವ್ ಹೇಳ್ತೀವಿ ನೋಡಿ. ಸೂಕ್ತ ಸಮಯಕ್ಕೆ ಅಂಬುಲೆನ್ಸ್ ಸಿಗದ ಕಾರಣದಿಂದಲೇ ನಟಿ ಪೂಜಾ ಜುಂಜರ್  ಮತ್ತು ಆಕೆಯ ನವಜಾತ ಶಿಶು ನಿಧನ ಹೊಂದಿದ್ದಾರೆ.

25 ವರ್ಷ ವಯಸ್ಸಿನ ಪೂಜಾ ಜುಂಜರ್ ಮರಾಠಿ ಭಾಷೆಯ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಭಾನುವಾರ ಬೆಳಗ್ಗೆ ಮುಂಬೈನಿಂದ 600 ದೂರದಲ್ಲಿ ಇರುವ ಹಿಂಗೊಳಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ನಟಿ ಪೂಜಾ ಜುಂಜರ್ ಗೋರೆಗಾಂವ್‍ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು. ಮಗು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆಯಿತು. ಬೆಳಗ್ಗೆ 2 ಗಂಟೆ ಸುಮಾರಿಗೆ ಪೂಜಾ ಜುಂಜರ್ ಆರೋಗ್ಯದಲ್ಲಿ ಏರುಪೇರು ಉಂಟಾಯಿತು. ಆಂಬುಲೆನ್ಸ್ ವಿಳಂಬವಾಗಿ ಮರಾಠಿ ನಟಿ ಮತ್ತು ಆಕೆಯ ಶಿಶು ಸಾವು ಈ ವೇಳೆ ಅವರನ್ನು ಮತ್ತೊಂದು ಆಸ್ಪತ್ರೆಗೆ ಶಿಫ್ಟ್ ಮಾಡಬೇಕು ಎಂದು ವೈದ್ಯರು ಸೂಚಿಸಿದರು. 40 ಕಿಲೋ ಮೀಟರ್ ದೂರ ಇದ್ದ ಆ ಆಸ್ಪತ್ರೆಗೆ ಹೋಗಲು ಅಂಬುಲೆನ್ಸ್ ಅಗತ್ಯ ಇತ್ತು.

ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಸೌಕರ್ಯ ಸಿಗಲಿಲ್ಲ. ಅಂಬುಲೆನ್ಸ್ ಗಾಗಿ ಹುಡುಕಾಡಿದ ಕುಟುಂಬ ನಂತರ, ಖಾಸಗಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆಸುಕೊಂಡು ಹೋಗುತ್ತಿದ್ದರು. ಆದರೆ, ಖಾಸಗಿ ಅಂಬುಲೆನ್ಸ್ ನಲ್ಲಿ ಹೋಗುವಾಗಲೇ, ಆಸ್ಪತ್ರೆ ತಲುಪುವ ಮುನ್ನ ಪೂಜಾ ಜುಂಜರ್ ವಿಧಿವಶರಾದರು. ನಟಿ ಪೂಜಾ ಜುಂಜರ್ ಎರಡು ಮರಾಠಿ ಸಿನಿಮಾಗಳಲ್ಲಿ ನಟಿಸಿದ್ದು, ಹೆರಿಗೆ ಕಾರಣ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿದ್ದರು. ಅಗತ್ಯ ಅನಿವಾರ್ಯ ಆಗಿರುವ ಆಂಬುಲೆನ್ಸ್ ಸೇವೆ ಸರಿಯಾದ ಸಮಯಕ್ಕೆ ಸಿಗದೇ ಈ ರೀತಿ ನಡೆದಿರುವುದು ನಿಜಕ್ಕೂ ದುರಂತವೇ ಸರಿ. ಪ್ರಮುಖ ನಟಿಗೆ ಈ ರೀತಿ ಆಗಿದ್ದು, ಇನ್ನು ಜನಸಾಮಾನ್ಯರ ಪರಿಸ್ಥಿತಿ ಹೇಗಾಗಬೇಡ  ಅಲ್ಲವಾ, ಓಮ್ಮೆ ನೀವೆ ಯೋಚಿಸಿ.


మరింత సమాచారం తెలుసుకోండి: