ಆಪರೇಷನ್ ಅಲಮೇಲಮ್ಮ, ಕನ್ನಡದಲ್ಲಿ ತೆರೆಕಂಡ ರಿಶಿ ಅಭಿನಯದ ಚೊಚ್ಚಲ ಚಿತ್ರವಿದು. ಈಗಾಗಲೇ ತೆರೆ ಕಂಡು ಭಾರೀ ಸದ್ದು ಮಾಡಿತ್ತು. ಇದೀಗ ಮತ್ತೇ ಸದ್ದು ಮಾಡಲು ಶುರುವಾಗಿದೆ. ಅದು ಯಾಕೆ ಅಂತ ನಾವ್ ಹೇಳ್ತೀವಿ ನೋಡಿ. ಕಿರುತೆರೆಯ ಅನುರೂಪ ಧಾರಾವಾಹಿ ಮೂಲಕ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿ ಕೊಟ್ಟ ನಟ ರಿಶಿ, ಹಲವಾರು ಶಾರ್ಟ್ ಮೂವಿಗಳನ್ನು ಮಾಡಿ ಹೆಸರು ಮಾಡಿದ್ದರು. ನಂತರದಲ್ಲಿ ಸಿಂಪಲ್ ಸುನಿ ನಿರ್ದೇಶನದ ಆಪರೇಷನ್ ಅಲಮೇಲಮ್ಮ ಚಿತ್ರ ರಿಶಿ ಅವರ ಕೆರಿಯರ್ ಗೆ ಒಂದು ದೊಡ್ಡ ಬ್ರೇಕ್ ನೀಡಿತು ಎನ್ನಬಹುದು.


ಸ್ಮೈಲಿಂಗ್ ಸ್ಟಾರ್ ರಿಶಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಮುಂದಿನ ತಿಂಗಳು ಯ 10 ರಂದು ಚೆನ್ನೈ ನಲ್ಲಿ. ತಮ್ಮ ಬಹುಕಾಲದ ಗೆಳತಿ ಸ್ವಾತಿ ಅವರೊಂದಿಗೆ ರಿಶಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಕಳೆದ ತಿಂಗಳು ಹೈದರಾಬಾದ್ ನಲ್ಲಿ ಎಂಗೇಜ್ ಮೆಂಟ್ ನೆರವೇರಿತ್ತು. ಕವಲುದಾರಿ ಸಿನಿಮಾ ಬಿಡುಗಡೆಯಾಗುತ್ತಿದ್ದುದರಿಂದ ತಮ್ಮ ಎಂಗೇಜ್ ಮೆಂಟ್ ವಿಚಾರವನ್ನು ರಿವೀಲ್ ಮಾಡದೆ ನಂತರ ತಮ್ಮ ಗೆಳತಿ ಸ್ವಾತಿ ಅವರ ಫೋಟೋ ಹಾಕಿ ಈ ವಿಷಯವನ್ನು ಹಂಚಿಕೊಂಡಿದ್ದರು. ನನ್ನ ಸಂಗಾತಿ ನನಗೆ ಸಿಕ್ಕಿದ್ದಾಳೆ. ಸ್ವಾತಿ, ಅವಳ ಹೆಸರು.

ವೃತ್ತಿಯಿಂದ ಬರಹಗಾರ್ತಿ. ನನ್ನ ಎಲ್ಲ ಕೆಲಸಗಳಲ್ಲಿ ಬೆನ್ನೆಲುಬಾಗಿ ನಿಂತಿದ್ದಾಳೆ. ನಮ್ಮಿಬ್ಬರ ಕುಟುಂಬದವರ ಆಶೀರ್ವಾದದಿಂದ, ಹೈದರಾಬಾದ್ ನಲ್ಲಿ ಒಂದು ಚಿಕ್ಕ ಸಮಾರಂಭದಲ್ಲಿ ನಮ್ಮಿಬ್ಬರ ನಿಶ್ಚಿತಾರ್ಥ ನೆರವೇರಿದೆ. ರಿಲೀಸ್ ಕೆಲಸಗಳಲ್ಲಿ ತೊಡಗಿದ್ದರಿಂದ ನಿಶ್ಚಿತಾರ್ಥದ ವಿಚಾರವನ್ನು ಇವಾಗ ತಿಳಿಸುತ್ತಿದ್ದೇನೆ. ನಿಮ್ಮೆಲ್ಲರ ಆಶೀರ್ವಾದ ಶುಭ ಹಾರೈಕೆ ನಮ್ಮ ಮೇಲೆ ಸದಾ ಹೀಗೆ ಇರಲಿ ಎಂದು ಕೋರುತ್ತಾ, ಮದುವೆಯಲ್ಲಿ ನಿಮ್ಮನ್ನು ಭೇಟಿಯಾಗುವ ಆಶಯದೊಂದಿಗೆ ಮತ್ತೊಮ್ಮೆ ಹೃದಯಪೂರ್ವಕ ಧನ್ಯವಾದಗಳು” ಎಂದು ಪೋಸ್ಟ್ ಹಾಕಿ ಸಂತೋಷ ಹಂಚಿಕೊಂಡಿದ್ದರು. ಇದೀಗ ಇದೇ ನವೆಂಬರ್ 10 ರಂದು ಚೆನ್ನೈ ನಲ್ಲಿ ಮದುವೆ ನೆರವೇರಲಿದ್ದು ಸಂಬಂಧಿಕರು ಮತ್ತು ಆಪ್ತರಿಗಷ್ಟೇ ಆಹ್ವಾನ ವಿರಲಿದೆ. ನಂತರ ಬೆಂಗಳೂರಿನಲ್ಲಿ ಸಿನಿಮಾರಂಗದವರು ಹಾಗೂ ಸ್ನೇಹಿತರಿಗಾಗಿ ಅರತಕ್ಷತೆ ಕಾರ್ಯಕ್ರಮ ಏರ್ಪಡಿಸಲಾಗಿದೆ.


మరింత సమాచారం తెలుసుకోండి: