ಸ್ಯಾಂಡಲ್ ವುಡ್ ನ ಕಿರಿಕ್ ಪಾರ್ಟಿ ಜೋಡಿ  ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಬ್ರೇಕಪ್ ಕಹಾನಿ ಎಲ್ಲರಿಗೂ ಗೊತ್ತಿರುವ ವಿಚಾರ. ಕಿರಿಕ್ ಪಾರ್ಟಿ ಸಿನಿಮಾ ನಂತರ ರಕ್ಷಿತ್ ಮತ್ತು ರಶ್ಮಿಕಾ ಇಬ್ಬರು ಮದುವೆಯಾಗಲು ನಿರ್ಧರಿಸಿ ನಿಶ್ಚಿತಾರ್ಥ ಮಾಡಿಕೊಂಡು ನಂತರ ದೂರ ದೂರ ಆಗಿರುವುದೆಲ್ಲಾ ತಿಳಿದಿರುವ ಸಂಗತಿ.


ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಕಿರಿಕ್ ಪಾರ್ಟಿ ನಂತರ ಸ್ಟಾರ್ ಆದ ರಶ್ಮಿಕಾ ತೆಲುಗು ಚಿತ್ರರಂಗದ ಬೇಡಿಕೆಯ ನಟಿ ಯಾಗಿದ್ದಾರೆ. ಕಿರಿಕ್ ಪಾರ್ಟಿ ನಂತರ ರಕ್ಷಿತ್ ಅಭಿಮಾನಿಗಳ ಮುಂದೆ ಬಂದಿಲ್ಲ. ಅಲ್ಲದೆ ಬ್ರೇಕಪ್ ನಂತರ ರಕ್ಷಿತ್ ಮತ್ತು ರಶ್ಮಿಕಾ ಎಲ್ಲಿಯೂ ಮುಖಾಮುಖಿಯಾಗಿರಲಿಲ್ಲ. ಆದರೆ ಈಗೆ ಇಬ್ಬರು ಎದುರು ಬದರಾಗುವ ಸಮಯ ಬಂದಿದೆ. ಅಂದರೆ ರಕ್ಷಿತ್ ಮತ್ತು ರಶ್ಮಿಕಾ ಸಿನಿಮಾ ಒಂದೆ ದಿನ ತೆರೆಗೆ ಬರುತ್ತಿವೆ.


ರಕ್ಷಿತ್ ಶೆಟ್ಟಿ v/s ರಶ್ಮಿಕಾ ಮಂದಣ್ಣ


ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀ ಮನ್ನಾರಾಯಣ ಚಿತ್ರ ರಿಲೀಸ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೆ ಚಿತ್ರದ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಡಿಸೆಂಬರ್ 27ಕ್ಕೆ ಚಿತ್ರ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿದೆ. ವಿಶೇಷ ಅಂದರೆ ಅದೇ ದಿನ ರಶ್ಮಿಕಾ ಅಭಿನಯದ ಚಿತ್ರ ಕೂಡ ತೆರೆಗೆ ಬರುತ್ತಿದೆ. ಮೊದಲ ಬಾರಿಗೆ ಇಬ್ಬರು ಮುಖಾಮುಖಿಯಾಗುತ್ತಿದ್ದಾರೆ. ಧ್ರುವ ಸರ್ಜಾ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಪೊಗರು ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಮಿಂಚಿದ್ದಾರೆ.

ಪೊಗರಿರುವ ನಟೋರಿಯಸ್ ಆಗಿ ಮಿಂಚಿರುವ ಧ್ರುವ ಅಭಿನಯದ ಪೊಗರು ಸಿನಿಮಾ ಕೂಡ ಡಿಸೆಂಬರ್ 27 ಕ್ಕೆ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಕಾರ್ಯಕ್ರಮ ವೊಂದರಲ್ಲಿ ನಿರ್ದೇಶಕ ನಂದಕಿಶೋರ್ ಡಿಸೆಂಬರ್ 27 ಕ್ಕೆ ಪೊಗರು ರಿಲೀಸ್ ಮಾಡುವ ಪ್ಲಾನ್ ಇದೆ ಎಂದು ಹೇಳಿದ್ದರು. ಅಂದ ಮೇಲೆ ಡಿಸೆಂಬರ್ ನಲ್ಲಿ ರಶ್ಮಿಕಾ ಮತ್ತು ರಕ್ಷಿತ್ ಶೆಟ್ಟಿ ಬಾಕ್ಸ್ ಆಫೀಸ್ ನಲ್ಲಿ ವಾರ್ ನಡೆಸಲಿದ್ದಾರೆ.


మరింత సమాచారం తెలుసుకోండి: