ಟಾಲಿವುಡ್ ನ ಪ್ರಿನ್ಸ್ ಅಂತಲೇ ಕರೆಸಿಕೊಳ್ಳುವ ಮಹೇಶ್ ಬಾಬು ಅವರ ಮುದ್ದಿನ ಮಗಳು ಸಿತಾರಾ ಇದೀಗ ಸಿನಿ ಪ್ರಪಂಚಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಹೌದು, ಸಾಮಾಜಿಕ  ಜಾಲತಾಣದಲ್ಲಿ ಅಮ್ಮ ಹಾಗೂ ಅಮ್ಮನೊಂದಿಗಿನ ಚಿತ್ರಗಳೊಂದಿಗೆ ಸುದ್ದಿಯಾಗುವ ಸಿತಾರಾ ಈಗ ತಮ್ಮದೇ ಆದ ಕಾರಣದಿಂದ ಸದ್ದು ಮಾಡುತ್ತಿದ್ದಾರೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಸಿತಾರಾ ಕುರಿತಾದ ವಿಡಿಯೋ ಹಾಗೂ ಫೋಟೋಗಳನ್ನು ನೋಡುತ್ತಿದ್ದರೆ ಸದ್ಯದಲ್ಲೇ ಪ್ರಿನ್ಸೆಸ್​ ಬೆಳ್ಳಿ ತೆರೆಗೆ ಲಗ್ಗೆ ಇಡುವ ಸೂಚನೆ ಸಿಗುತ್ತಿದೆ.

ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅವರು ಇತ್ತೀಚೆಗಷ್ಟೆ ಜಾಹೀರಾತೊಂದರಲ್ಲಿ ತಮ್ಮ ಹೆಂಡತಿ, ಮಗ ಹಾಗೂ ಮಗಳೊಂದಿಗೆ ಕಾಣಿಸಿಕೊಂಡು ಸುದ್ದಿಯಾಗಿದ್ದರು. ಈಗ ಇಂತಹದ್ದೇ ಮತ್ತೊಂದು ವಿಷಯಕ್ಕೆ ಪ್ರಿನ್ಸೆಸ್​ ಸಿತಾರಾ ಸದ್ದು ಮಾಡುತ್ತಿದ್ದಾರೆ.
ಪ್ರಿನ್ಸ್ ಮಹೇಶ್ ಬಾಬು ಅತೀ ಚಿಕ್ಕ ವಯಸ್ಸಿಗೆ ಸಿನಿ ಪ್ರಪಂಚಕ್ಕೆ ಕಾಲಿಟ್ಟು ತಂದೆಯೊಂದಿಗೆ ನಟಿಸಿದ್ದರು. ಅದೇ ಚಾನ್ಸ್ ಇದೀಗ ಮಹೇಶ್ ಬಾಬು ಮಗಳಾದ ಸರಿತಾ ಗೆ ಸಿಕ್ಕಿರುವುದು ಅದೃಷ್ಟವೇ ಸರಿ.  ಇತ್ತೀಚೆಗಷ್ಟೇ ಮಹೇಶ್ ಬಾಬು ಅವರ ಮಹರ್ಷಿ ಸಿನಿಮಾ ತೆರೆ ಕಂಡು ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡಿತ್ತು. ವಯಸ್ಸು ಎಷ್ಟಾದರೇನಂತೆ ಆ ಸ್ಮಾರ್ಟ್ ನೆಸ್ ಬಿಟ್ಟುಕೊಡದ ಪ್ರಿನ್ಸ್ ಎಂದರೆ ಟಾಲಿವುಡ್ ನಲ್ಲಿ ಹುಡುಗಿಯರ ಲವರ್ ಬಾಯ್. 


ಒಂದು ಕಾಲದಲ್ಲಿ ಎನ್​ಟಿಆರ್ ಟಾಲಿವುಡ್​ ಅನ್ನು ಆಳಿದ್ದು, ನಂಬರ್​ ಒನ್​ ಸ್ಥಾನದಲ್ಲಿದ್ದರು. ಇದಾದ ನಂತರ ಸೂಪರ್​ ಸ್ಟಾರ್​ ಕೃಷ್ಣ, ಆಮೇಲೆ ಮೆಗಾಸ್ಟಾರ್​ ಚಿರಂಜೀವಿ ದಶಕಗಳ ಕಾಲ ತೆಲುಗು ಸಿನಿಮಾವನ್ನು ಸಿಂಹದಂತೆ ರಾಜ್ಯಭಾರ ಮಾಡಿದರು. ಎನ್​ಟಿಆರ್​ ಅವರಂತೆಯೇ ಚಿರಂಜೀವಿ ಅವರೂ ಸಹ ರಾಜಕೀಯಕ್ಕೆ ಎಂಟ್ರಿಕೊಟ್ಟು ಪ್ರಜಾ ರಾಜ್ಯ ಪಕ್ಷ ಕಟ್ಟಿದರು. ಆದರೆ ಅಲ್ಲಿ ಯಶಸ್ಸು ಕಾಣದ ಕಾರಣದಿಂದ ಅವರು ಮತ್ತೆ ಸಿನಿಮಾ ರಂಗಕ್ಕೆ ಮರಳಿ ಇಡೀ ಜೀವನವನ್ನೇ ಕಲಾ ಸೇವೆಗೆ ಮುಡುಪಾಗಿಸಿಕೊಂಡರು. ಈಗ ಟಾಲಿವುಡ್​ನಲ್ಲಿ ನಂಬರ್​ ಒನ್​ ನಟ ಯಾರು ಎಂದು ಹುಟುಕಾಟ ನಡೆಸಿದರೆ, ಗೂಗಲ್​ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ಸಿಗುವ ಉತ್ತರ ಪ್ರಿನ್ಸ್​ ಮಹೇಶ್​ ಬಾಬು.


మరింత సమాచారం తెలుసుకోండి: