ಬಹುತೇಕ ಚಿತ್ರಗಳಲ್ಲಿ ನಟಿ ಹೀರೋ ಗೆ ಪ್ರಾರಂಭದಲ್ಲಿ ಹೇಳುವುದು ಸುಳ್ಳೇ. ಅದು ತನ್ನ ಗೆಳತಿಯಿಂದಲೋ, ಫ್ರೆಂಡ್ ಇಂದಲೋ ತಿಳಿಯಬೇಕು ನಟನಿಗೆ. ಈಗೆ ಸದಾಕಾಲ ಸುಳ್ಳನ್ನೇ ಹೇಳುವ ನಟಿಗೆ ಕೊನೆಗೇನಾಗುತ್ತದೆ ಎಂಬುದೇ ಅಂದವಾದ ಚಿತ್ರ. ಅಂದವಾದ ಎಂದ ತಕ್ಷಣ ಬ್ಯೂಟಿಫುಲ್  ಆ ಎಂದು ಕನಸು ಕಾಣ ಬೇಡಿ. ಏಕೆಂದರೇ ಚಿತ್ರದ ಹೆಸರೇ ಅಂದವಾದ. ಇತ್ತೀಚೆಗಷ್ಟೈ  ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. 

ಸಿನಿಮಾ ಚೆನ್ನಾಗಿದೆ ಅಂದ್ರೆ ಅದು ಸ್ಟಾರ್ ಸಿನಿಮಾಗೇ ಆಗ್ಲಿ. ಹೊಸಬರ ಸಿನಿಮಾಗೇ ಆಗ್ಲಿ ನಮ್​ ಜನ ಗೆಲ್ಲಿಸಿ ಬೆನ್ನು ತಟ್ತಾರೆ. ಇದೀಗ ಅದೇ ಸಾಲಿನಲ್ಲಿ ಹೊಸತಂಡದ ಹೊಸ ಸಿನಿಮಾ ಸಕ್ಸಸ್​ ಹಾದಿಯಲ್ಲಿ ಮುನ್ನುಗ್ತಾಯಿದೆ. ಜೊತೆಗೊಂದು ದಾಖಲೆ ಕೂಡ ಬರೆದಿದೆ. ಅಂದವಾದ..ಟೈಟಲ್​ಗೆ ತಕ್ಕಂತೆ ಇದೊಂದು ಲವ್​ ಸ್ಟೋರಿ..ಆಲ್​ಮೋಸ್ಟ್ ಮಳೆ ಮತ್ತು ಹಿಮದ ಬ್ಯಾಕ್​ಡ್ರಾಪ್​ ನಲ್ಲೇ ನಡೆಯೋ ಕಥೆ. ಸುಳ್ಳುಗಳನ್ನೇ ಹೇಳಿಕೊಂಡು ಪ್ರೀತಿಸೋ ಹುಡುಗಿಯೊಬ್ಬಳ ಕಥೆ. ಆ ಸುಳ್ಳುಗಳೆಲ್ಲಾ ನಾಯಕನಿಗೆ ಗೊತ್ತಾದಾಗ ಏನಾಗುತ್ತೆ ಅನ್ನೋದೇ ಚಿತ್ರದ ಸ್ಟೋರಿಲೈನ್.


ಕಳೆದ ಶುಕ್ರವಾರ ತೆರೆಕಂಡಿರೋ ಅಂದವಾದ ಸಿನಿಮಾ ಥಿಯೇಟರ್​ ಅಂಗಳದಲ್ಲಿ ಸಕ್ಸಸ್​ಫುಲ್ಲಾಗಿ ಮುನ್ನುಗ್ತಿದೆ. ಸಿನಿಮಾ ನೋಡಿದ ಸಿನಿಪ್ರಿಯರು ಈ ಲವ್​ ಸ್ಟೋರಿ ನೋಡಿ ಫ್ರೆಶ್​ ಫೀಲ್ ಮಾಡ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅಂದವಾದ ಸಿನಿಮಾ ಐಎಮ್​ಡಿಬಿಯಲ್ಲಿ 3 ನೇ ಸ್ಥಾನ ಪಡೆದುಕೊಂಡಿದೆ. ಹಿಂದಿಯ ಹೌಸ್​ಫುಲ್ 4, ತಮಿಳಿನ ಬಿಗಿಲ್ ಮೊದಲ ಮತ್ತು ಎರಡನೇ ಸ್ಥಾನದಲ್ಲಿದೆ. ಈ ಮೂಲಕ ಅಂದವಾದ ಸಿನಿಮಾ ದಾಖಲೆಯತ್ತ ಮುಖ ಮಾಡಿದೆ.


ಅಂದ್ಹಾಗೇ ಅಂದವಾದ ಸಿನಿಮಾ ಮೂಲಕ ಜೈ ಎಂಬ ಹೊಸ ಪ್ರತಿಭೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಅನುಷಾ ರಂಗನಾಥ್​ ನಾಯಕಿಯಾಗಿ ಮಿಂಚಿದ್ದಾರೆ.ಚಿತ್ರಕ್ಕೆ ನಿರ್ದೇಶಕ ಚಲ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗಾಗ್ಲೇ ಚಿತ್ರಕ್ಕೆ ಪಾಸಿಟಿವ್ ರೆಸ್ಪಾನ್ಸ್​​ಮತ್ತು ರಿವ್ಯೂಸ್​ ಸಿಕ್ಕಿದ್ದು, ತೆಲುಗಿನ ಗೀತಾಂಜಲಿ ಸಿನಿಮಾದ ಫೀಲ್​ ಕೊಡುತ್ತೆ ಅನ್ನೋದು ಸಿನಿಪ್ರಿಯ ಅಭಿಪ್ರಾಯವಾಗಿದೆ. ಹೊಸಬರ ಈ ದಾಖಲೆಯ ಚಿತ್ರಕ್ಕೆ ಪ್ರೇಕ್ಷಕ ಓ ಕೆ ಎಂದಿದ್ದು ನಿರ್ಮಾಪಕ ಮತ್ತು ಚಿತ್ರತಂಡ ಫುಲ್ ಖುಷ್ ಆಗಿದೆ. 


మరింత సమాచారం తెలుసుకోండి: