ಸ್ಯಾಂಡಲ್ ವುಡ್ ಅನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಪಣ ತೊಟ್ಟಿರುವ ಕೆಜಿಎಫ್ ನಟ ರಾಕಿಂಗ್ ಸ್ಟಾರ್ ಯಶ್ ಗೆ ಇದೀಗ ವಾರಸುದಾರ ಸಿಕ್ಕಾಯ್ತು. ಆದ್ದರಿಂದ ಸ್ವಲ್ಪ ಇರ್ರಪ್ಪಾ ಮಕ್ಕಳ ಜೊತೆ ಬ್ಯೂಸಿಯಾಗಿದೀನಿ ಎಂದು ಸಂಭ್ರಮ ಸಡಗರದಿಂದ ತಿಳಿಸಿದ್ದಾರೆ. ಅಷ್ಟಕ್ಕೂ ನಡೆದಿದ್ದೇನು ಎಂಬುದನ್ನು ಹೇಳ್ತೀವಿ ಮುಂದೆ ಓದಿ. ಯಶ್ ರಾಧಿಕಾ ಗೆ ಐರಾ ಜನಿಸಿದ ನಂತರ ರಾಧಿಕ ಮತ್ತೇ ಗರ್ಭಿಣಿಯಾಗಿದ್ದರು. ಇತ್ತೀಚೆಗಷ್ಟೇ ಶ್ರೀಮಂತ ಕಾರ್ಯಕ್ರಮವನ್ನು ಭರ್ಜರಿಯಾಗಿ ನಡೆಸಿದ್ದರು.

ಬುಧವಾರ ರಾಕಿ ಭಾಯ್ ಯಶ್ ಗೆ ಗಂಡು ಮಗು ಜನಿಸಿದ್ದು, ಯಶ್ ರಾಧಿಕ್ ಕುಟುಂಬ ಮತ್ತು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೂನಿಯರ್ ರಾಕಿ ಭಾಯ್ ಎಂಟ್ರಿಯಾಯ್ತು, ಇನ್ನೇನಿದ್ದರೂ ಹವಾ ಶುರು ಎಂದು ಕಾಮೆಂಟ್ ಮತ್ತು ಲೈಕುಗಳ ಸುರಿಮಳೆ ಗೈದಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ರಾಧಿಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಅಮ್ಮ - ಮಗ ಆರೋಗ್ಯವಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.  2018 ಡಿಸಂಬರ್ 2 ರಂದು ರಾಧಿಕಾಗೆ ಐರಾ ಜನಿಸಿದ್ದಳು.

ಒಂಭತ್ತು ತಿಂಗಳೊಳಗಾಗಿ ಇನ್ನೊಂದು ಮಗುವಿನ ಆಗಮನವಾಗಿದೆ.  ಮೊಮ್ಮಗ ಬಂದ ಖುಷಿಯನ್ನ ಹಂಚಿಕೊಂಡ ಯಶ್ ತಾಯಿ ಪುಷ್ಪ, 'ಮೊಮ್ಮಗ‌ ಹುಟ್ಟಿರೋದು ಖುಷಿ ತಂದಿದೆ. ಮೊಮ್ಮಗ ಯಶ್ ನಂತೆಯೇ ಕಾಣುತ್ತಾನೆ. ಇಂದು ಮತ್ತು ನಾಳೆ ಡೇಟ್ ಕೊಟ್ಟಿದ್ರು ಆದ್ರೆ ಬುಧವಾರ 9 ಗಂಟೆಗೆ ಡೆಲಿವರಿ ಆಗಿದೆ. ರಾಧಿಕಾ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಡಿಸ್ಚಾರ್ಜ್ ಬಗ್ಗೆ ಇನ್ನು ನಿರ್ಧಾರ ಮಾಡಿಲ್ಲ. ನಮ್ಮ ಮೇಲೆ‌ ನೀವೆಲ್ಲ‌ ಇಟ್ಟಿರೋ ಪ್ರೀತಿಯನ್ನೇ ನಮ್ಮ ಮೊಮ್ಮಕ್ಕಳಿಗೂ ಕೊಡಿ' ಎಂದಿದ್ದಾರೆ. 


ರಾಧಿಕಾ ಪಂಡಿತ್ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಡಾಕ್ಟರ್ ಸ್ವರ್ಣಾ ಮಾತನಾಡಿದ್ದಾರೆ.  ತಾಯಿ,ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗುವಿನ 3 ಕೆಜಿ ತೂಕ ಇದೆ.  ಐರಾಳಂತೆಯೇ ಇದ್ದಾನೆ ಯಶ್ ಎರಡನೇ ಮಗು. ಮೊದಲನೆಯದ್ದು ಸಿಸೇರಿಯನ್, ಎರಡನೆಯದ್ದೂ ಸಹ ಪ್ಲಾನ್ಡ್ ಸಿಸೇರಿಯನ್. ಮಗನನ್ನ ನೋಡಿ ಯಶ್ ಫುಲ್ ಖುಷಿಯಾಗಿದ್ದಾರೆ.  ಕುಟುಂಬದವರೆಲ್ಲಾ ತಾಯಿ-ಮಗುವನ್ನ ನೋಡಲು ಬಂದಿದ್ದಾರೆ.   ಇನ್ನೂ ಮೂರು ದಿನಗಳಲ್ಲಿ ಡಿಸ್ ಚಾರ್ಜ್ ಮಾಡುತ್ತೇವೆ ಎಂದಿದ್ದಾರೆ.


మరింత సమాచారం తెలుసుకోండి: