ಸ್ಯಾಂಡಲ್ ವುಡ್ ನ ಕನಸುಗಾರ, ಕ್ರೇಜಿಸ್ಟಾರ್ ಮಲ್ಲ ಹುಡುಗಿಯರಿಗೆ ಮನ ಮೆಚ್ಚಿದ ನಟ ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರಶಸ್ತಿ ನೀಡಲಾಗಿದೆ. ಸದ್ಯಕ್ಕೆ ಸಿನಿ ಇಂಡಸ್ಟ್ರಿಯಲ್ಲಿ ಬಿಗ್ ಬಾಸ್ ಎಂದೇ ಖ್ಯಾತಿ ಪಡೆದು ಚಿತ್ರರಂಗಕ್ಕೆ ಮೇರು ವ್ಯಕ್ತಿ ಯಾಗಿರುವ  ಕ್ರೇಜಿಸ್ಟಾರ್ ಇನ್ನು ಮುಂದೆ ಡಾ. ರವಿಚಂದ್ರನ್ ಆಗಲಿದ್ದಾರೆ.  ಸಿಎಂ‌ಆರ್ ಯೂನಿವರ್ಸಿಟಿ ಕ್ರೇಜಿಸ್ಟಾರ್ ಗೆ ನವೆಂಬರ್ 3 ರಂದು ಡಾಕ್ಟರೇಟ್ ಪ್ರದಾನ ಮಾಡಲಿದೆ. ಇದರಿಂದ ಅಭಿಮಾನಿಗಳ ದಿಲ್ ಖುಶ್ ಆಗಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.


ಕನಸುಗಾರ ರವಿ ಮಾಮ  ಕೇವಲ ಒಬ್ಬ ನಟ ಮಾತ್ರವಲ್ಲ. ಅನೇಕ ಚಿತ್ರಗಳ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಂಗೀತ ನೀಡಿಯೂ ಸೈ ಎನಿಸಿಕೊಂಡಿದ್ದಾರೆ. ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಮಿಂಚಿದ್ದಾರೆ. ಪ್ರೇಮಲೋಕ, ರಣಧೀರ, ಶಾಂತಿ ಕ್ರಾಂತಿ, ಯುಗಪುರುಷ, ಯುದ್ದಕಾಂಡ, ರಾಮಾಚಾರಿ, ಅಂಜದ ಗಂಡು, ಸ್ವಾಭಿಮಾನ, ನಾನು ನನ್ನ ಹೆಂಡ್ತಿ, ಮನೆದೇವ್ರು, ಗೋಪಿಕೃಷ್ಣ, ಬಣ್ಣದಗೆಜ್ಜೆ, ಶ್ರೀರಾಮಚಂದ್ರ, ಆಣ್ಣಯ್ಯ, ಗಡಿಬಿಡಿ ಗಂಡ, ರಸಿಕ, ಕಲಾವಿದ, ಸಿಪಾಯಿ, ಪುಟ್ನಂಜ, ಕನಸುಗಾರ, ಮಾಂಗಲ್ಯಂ ತಂತುನಾನೇನ, ಪ್ರೀತ್ಸೋದ್ ತಪ್ಪಾ, ಯಾರೇ ನೀನು ಚೆಲುವೆ, ನಾನು ನನ್ನ ಹೆಂಡ್ತೀರು, ಓ ನನ್ನ ನಲ್ಲೆ, ಏಕಾಂಗಿ, ಮಲ್ಲ, ರಾಮಕೃಷ್ಣ, ಕೋದಂಡರಾಮ, ಅಹಂ ಪ್ರೇಮಾಸ್ಮಿ,ಹಠವಾದಿ ಹೀಗೆ ಒಂದಕ್ಕಿಂತ ಒಂದು ಭಿನ್ನ ಚಿತ್ರ ನೀಡಿರುವ ರವಿಚಂದ್ರನ್ ಅವರಿಗೆ ಡಾಕ್ಟರೇಟ್ ದೊರೆಯುತ್ತಿದೆ.

'ರಾಮಾಚಾರಿ' ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫ಼್ಹಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿತ್ತು. ನಾದಬ್ರಹ್ಮ ಹಂಸಲೇಖ ಮತ್ತು ರವಿಚಂದ್ರನ್ ಒಂದಾದದರೆ ಆ ಸಿನಿಮಾದ ಹಾಡುಗಳೆಲ್ಲ ಸೂಪರ್ ಹಿಟ್ ಎನ್ನುವ ಕಾಲವೊಂದಿತ್ತು. ಪ್ರೇಮಲೋಕ', 'ರಣಧೀರ' ಸಿನಿಮಾಗಳ ಆಡಿಯೋ ಕ್ಯಾಸೆಟ್ಟುಗಳು ದಾಖಲೆಯ ಮಾರಾಟ ಕಂಡು ಇತಿಹಾಸ ಬರೆದಿದ್ದಾರೆ. ಮೂನ್ ಮೂನ್ ಸೇನ್, ಮಧುಬಾಲ, ಮೀನಾ, ರೋಜಾ, ಭಾನುಪ್ರಿಯ, ಶಿಲ್ಪಾಶೆಟ್ಟಿ ಮುಂತಾದ ಹೆಸರಾಂತ ಪರಭಾಷಾ ನಾಯಕಿಯರನ್ನು ಕನ್ನಡಕ್ಕೆ ತಂದಿದ್ದು ವಿ.ರವಿಚಂದ್ರನ್. ಕನ್ನಡಕ್ಕೆ ದೊಡ್ಡ ಬಜೆಟ್ ಸಿನಿಮಾಗಳ ಮೂಲಕ ದೃಶ್ಯಶ್ರೀಮಂತಿಕೆಯನ್ನು ತಂದು ಕೊಟ್ಟವರು ಈಕನಸುಗಾರ. ಇತ್ತೀಚೆಗೆ ಬಿಡುಗಡೆಯಾಗಿ ಸೂಪರ್ ಹಿಟ್ ಆದ ಕುರುಕ್ಷೇತ್ರದಲ್ಲಿ ರಚಿಚಂದ್ರನ್ ಶ್ರೀಕೃಷ್ಣ ಪಾತ್ರ ಮಾಡಿ ಮೆಚ್ಚುಗೆ ಪಡೆದಿದ್ದರು.


మరింత సమాచారం తెలుసుకోండి: