ಹಿಟ್ ಸಿನಿಮಾಗಾಗಿ ಎಂತೆಂತಹ ಸ್ಟೋರಿ ಗಳನ್ನು ಮಾಡಿರೋದು ನಾವೆಲ್ಲಾ ನೋಡಿದ್ದೇವೆ. ಆದರೆ ಈ ಚಿತ್ರ ಸ್ಪೆಷಲ್ ಆಗೋದಕ್ಕೆ ಸ್ಪೆಶಲ್ ಟೈಟಲ್ ನೀಡಿದೆ. ಅದು ಮತ್ಯಾವ ಚಿತ್ರದಲ್ಲಿ. ಸ್ಯಾಂಡಲ್ ವುಡ್ ನ ಮುಂದಿನ ನಿಲ್ದಾಣ. ಜರ್ನಿ ಸಿನಿಮಾದ ಹೆಸರು ಕೇಳಿದ್ದೇವೆ. ಆದರೆ ಈ ಚಿತ್ರದ ಹೆಸರೇ ಮುಂದಿನ ನಿಲ್ದಾಣ. ಇದೀಗ ರಂಗಿತರಂಗದ ನಟಿ ಈ ಚಿತ್ರದ ಮೂಲಕ ಸಿನಿ ಕರಿಯರ್ ಗೆ ಮತ್ತೇ ಎಂಟ್ರಿ ಕೊಟ್ಟಿದ್ದಾರೆ. 


ನಟಿ ರಾಧಿಕಾ ನಾರಾಯಣ್‌ ಎಂದು ಹೆಸರು ಬದಲಾಯಿಸಿಕೊಂಡಿರುವ ರಾಧಿಕಾ ಚೇತನ್‌ ಅವರಿಗೆ ‘ಮುಂದಿನ ನಿಲ್ದಾಣ’ ಸಿನಿಮಾ ಚಿತ್ರರಂಗಕ್ಕೆ ಮರು ಎಂಟ್ರಿಯಂತೆ. ಈ ಚಿತ್ರದ ಕುರಿತು ರಾಧಿಕಾ ಅವರಿಗೆ ದೊಡ್ಡ ಭರವಸೆ ಇದೆ. ಈಗಾಗಲೇ ಪೋಸ್ಟರ್‌, ಟೀಸರ್‌, ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆಯುತ್ತಿದ್ದು, ಸದ್ಯದಲ್ಲೇ ಟ್ರೇಲರ್‌ ರಿಲೀಸ್‌ ಆಗಲಿದೆ. ‘ಚೂರಿಕಟ್ಟೆ’ ಚಿತ್ರದ ಪ್ರವೀಣ್‌ ತೇಜ್‌ ಈ ಚಿತ್ರದಲ್ಲಿ ನಾಯಕ. ಸಿನಿಮಾ ಬಗ್ಗೆ ರಾಧಿಕಾ ನಾರಾಯಣ್‌ ಹಂಚಿಕೊಂಡಿರುವ ವಿಷಯಗಳು ಈಗಿವೆ ನೋಡಿ. 


ನಿರ್ದೇಶಕ ವಿನಯ್‌ ಭಾರದ್ವಜ್‌ ಅವರು ಒಂದು ಯೂತ್‌ಫುಲ್‌ ಪ್ರಯಾಣದ ಕತೆಯನ್ನು ಹೇಳಿದ್ದಾರೆ. ಒಂಟಿ ಪಯಣದಲ್ಲಿ ತೊಡಗುವ, ಟ್ರಕ್ಕಿಂಗ್‌ಗೆ ಹೊರಡುವ, ನಿಂತಲ್ಲಿ ನಿಲ್ಲದೆ ಜಗತ್ತು ಸುತ್ತಾಡಬೇಕು, ಪ್ರಕೃತಿ ಜತೆ ಸ್ನೇಹ ಬೆಳೆಸಬೇಕು ಎಂದು ಹಂಬಲಿಸುವ ಪ್ರತಿಯೊಬ್ಬರ ಮನಸ್ಸಿಗೂ ಮುಟ್ಟುವ ಕತೆ ಈ ಚಿತ್ರದಲ್ಲಿದೆ. ಮುಂದಿನ ನಿಲ್ದಾಣ ಸಿನಿಮಾ ನನಗೆ ಹಲವು ಕಾರಣಗಳಿಗಾಗಿ ಮಹತ್ವದ್ದು. ಈ ಚಿತ್ರದಿಂದ ನನ್ನ ಹೆಸರು ಬದಲಾಯಿಸಿಕೊಂಡೆ. ಹೊಸ ರೀತಿಯ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೀನಿ.

ತುಂಬಾ ಗ್ಯಾಪ್‌ ನಂತರ ದೊಡ್ಡ ಮಟ್ಟದ ಭರವಸೆಯೊಂದಿಗೆ ಚಿತ್ರರಂಗಕ್ಕೆ ಹಿಂತಿರುಗುವಂತೆ ಮಾಡುತ್ತಿರುವ ಸಿನಿಮಾ ಇದು.ಇದೊಂದು ಹೊಸ ಅಲೆಯ ಚಿತ್ರ. ಚಿತ್ರೀಕರಣಕ್ಕಾಗಿ ಆಯ್ದುಕೊಂಡ ಲೊಕೇಶನ್‌, ಕಲೆ, ಬಣ್ಣ, ದೃಶ್ಯ, ವಸ್ತ್ರವಿನ್ಯಾಸ ಈ ಎಲ್ಲದರಲ್ಲಿಯೂ ಹೊಸತನವನ್ನು ಹಿಡಿದಿಟ್ಟುಕೊಂಡು ಚಿತ್ರದ ಪ್ರತಿ ಪಾತ್ರವನ್ನು ವಿಶೇಷವಾಗಿತೆರೆ ಮೇಲೆ ಬಿಂಬಿಸಲಾಗಿದೆ. ಈಗಷ್ಟೆ ಪಿಆರ್‌ಕೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ನನ್ನ ಪಾತ್ರದ ಸುತ್ತ ಸಾಗುವ, ಸಂಚಿತ್‌ ಹೆಗಡೆ ಹಾಡಿರುವ ‘ಲೈಫ್‌ ಈಸ್‌ ಬ್ಯೂಟಿಫುಲ…’ ಹಾಡು ನೋಡಿದಾಗ ನನ್ನ ಪಾತ್ರ ಚೆಂದವುಂಟು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.


మరింత సమాచారం తెలుసుకోండి: