ಮಾಲಿವುಡ್ ನಲ್ಲಿ ಚಿತ್ರದ ಟೀಸರ್ ಇದೀಗ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಅದು ಮಾಲಿವುಡ್ ನ ಖ್ಯಾತ ನಟ ಮುಮ್ಮಟ್ಟಿ ಅಭಿನಯದ ಮಾಮಂಗಂ ಚಿತ್ರ. ಟೀಸರ್ ಜಬ್ಬರ್ ದಸ್ತ್ ಆಗಿ ಮೂಡಿ ಬಂದಿದ್ದು, ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಮಾಮಾಂಗಂ ಚಿತ್ರದಲ್ಲಿ ಮೆಗಾಸ್ಟಾರ್ ರಾಜ ಕಂದರ್ ಮೆನನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಹಿಂದೆ 'ಒರು ವಡಕ್ಕನ್ ವೀರಗಾಥ' ಚಿತ್ರದಲ್ಲಿ ವೀರಪುರುಷನಾಗಿ ಕಾಣಿಸಿಕೊಂಡಿದ್ದ ಮಮ್ಮುಟ್ಟಿ ಇದೀಗ 'ಮಾಮಾಂಗಂ' ಚಿತ್ರದ ಮೂಲಕ ಮತ್ತೊಮ್ಮೆ ಖಡ್ಗ ಝಳಪಳಿಸಿದ್ದಾರೆ.


ಮಾಮಂಗಂ ಐತಿಹಾಸಿಕ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಮತ್ತೊಮ್ಮೆ ಇತಿಹಾಸವನ್ನು ಮರುಸೃಷ್ಟಿಸುವಲ್ಲಿ ಮಾಲಿವುಡ್ ಚಿತ್ರತಂಡ ಯಶಸ್ವಿಯಾಗಿದೆ ಎನ್ನಬಹುದು. ಹಾಗೆಯೇ 'ಮಾಮಾಂಗಂ' ಚಿತ್ರವು ಭಾರತದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕಲಿದೆ ಎಂಬ ಸುದ್ದಿಯಿದೆ. ಏಕೆಂದರೆ 1989ರಲ್ಲಿ ಬಿಡುಗಡೆಯಾಗಿದ್ದ 'ಒರು ವಡಕ್ಕನ್ ವೀರಗಾಥ' ಚಿತ್ರದ ಚಂದು ಪಾತ್ರವು ಇಂದಿಗೂ ಮಲಯಾಳಂ ಸಿನಿಪ್ರಿಯರ ಮನಸ್ಸಿನಲ್ಲಿ ಇಂದಿಗೂ ಅಚ್ಚಳಿಯದೇ ಉಳಿದಿದೆ. ಇನ್ನು ಒಂದು ದಶಕದ ಹಿಂದೆ 'ಪಯಶಿರಾಜ' ಚಿತ್ರದ ಮೂಲಕ ತೆರೆ ಮರೆಯಲ್ಲಿ ಉಳಿದು ಹೋದ ರಾಜರೊಬ್ಬರ ಕಥೆ ಹೇಳಿದ್ದ ಮೆಗಾಸ್ಟಾರ್ ಇದೀಗ ಮತ್ತೊಮ್ಮೆ ಚರಿತ್ರ ಪುರುಷನ ಅವತಾರವೆತ್ತಿದ್ದಾರೆ. 'ಮಾಮಾಂಗಂ' ಚಿತ್ರದಲ್ಲಿ ಮೆಗಾಸ್ಟಾರ್ ರಾಜ ಕಂದರ್ ಮೆನನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರ. 


ಅಷ್ಟೇ ಅಲ್ಲದೆ ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಯುವನಟ ಉಣ್ಣಿ ಮುಕುಂದನ್ ಸಹ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಕೇರಳ ಚರಿತ್ರೆಯನ್ನು ತಿಳಿಸಲಿದ್ದು, ಗ್ರಾಫಿಕ್ಸ್​ಗೆ ಹೆಚ್ಚು ಒತ್ತು ನೀಡದೇ ಇತಿಹಾಸವನ್ನು ಮರು ಸೃಷ್ಟಿಸುವಲ್ಲಿ ನಿರ್ದೇಶಕ ಎಂ.ಪದ್ಮ ಕುಮಾರ್ ಯಶಸ್ವಿಯಾಗಿದ್ದಾರೆ. ಮನೋಜ್ ಪಿಳ್ಳೆ ಅವರ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ಮಾಮಂಗಂ ಚಿತ್ರದ ಟ್ರೈಲರ್ ಮಮ್ಮುಟ್ಟಿಯ ಕಂಚಿನ ಕಂಠದೊಂದಿಗೆ ಮೂಡಿ ಬಂದಿದ್ದು, ಮೆಗಾಸ್ಟಾರ್ ಅಭಿಮಾನಿಗಳು ಚಿತ್ರದ ವಿಡಿಯೋ ತುಣುಕಿಗೆ ಬಹುಪರಾಕ್ ಅಂದಿದ್ದಾರೆ. ಇನ್ನು ಈ ಸಿನಿಮಾ ನವೆಂಬರ್ 21 ರಂದು ರಾಷ್ಟ್ರಾದ್ಯಂತ ತೆರೆಗೆ ಅಪ್ಪಳಿಸಲಿದೆ. ಅದ್ಭುತವಾಗಿ ಮೂಡಿ ಬಂದಿರುವ ಟೀಸರ್ ಇದೀಗ ಭಾರೀ ವೈರಲ್ ಆಗಿದೆ.


మరింత సమాచారం తెలుసుకోండి: