ರಾಜ್ಯಮಟ್ಟದ ಪ್ರಶಸ್ತಿ ಸೇರಿದಂತೆ ಕೆಲವು ಪಿಲ್ಮ್ ಫೆಸ್ಟಿವಲ್ ಗಳಲ್ಲಿ ಪ್ರಶಸ್ತಿ ಪಡಿಯೋಕೆ ಯಶಸ್ವಿ ನಿರ್ದೇಶನವೇ ಬೇಕು. ಅಂತಹದ್ದರಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಇವರು ಇದೀಗ ತಮ್ಮ ಮೂರನೇ ಚಿತ್ರದ ಶೂಟಿಂಗ್ ನಿನ್ನೆಯಷ್ಟೇ ಮುಗಿಸಿದ್ದಾರೆ. ಆ ಪ್ರಶಸ್ತಿ ಗೆದ್ದ ನಿರ್ದೇಶಕರೇ ಮಂಸೋರೆ. ಇಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಿದೆ ಚಿತ್ರತಂಡ. ಅಷ್ಟೇ ಅಲ್ಲದೆ ಈ ಚಿತ್ರದ ಟೈಟಲ್ ಕೂಡ ಇಂದೇ ಹೊರ ಬರಲಿದೆ. 


"ನನ್ನ ತನವನ್ನು ಉಳಿಸಿಕೊಂಡು ನನಗಿದ್ದ ಇತಿಮಿತಿಗಳನ್ನು ಮೀರಿ ದೊಡ್ಡ ಕ್ಯಾನ್ವಾಸಿನ ಚಿತ್ರವೊಂದನ್ನು ನಿರ್ದೇಶನ ಮಾಡಿದ ಖುಷಿಯ ಜೊತೆಗೆ ಜವಾಬ್ದಾರಿಯೂ ಹೆಚ್ಚಿದೆ. ಈ ಚಿತ್ರ ಮಹಿಳಾ ಪ್ರಧಾನ ಚಿತ್ರವಿದು. ಸೋಷಿಯಲ್‌ ಥ್ರಿಲ್ಲರ್‌ ಅಂಶಗಳು ಇಲ್ಲಿವೆ. ಸಮಾಜ, ಅಲ್ಲಿನ ವ್ಯವಸ್ಥೆ ಮತ್ತು ಮಧ್ಯಮ ವರ್ಗದವರ ಬದುಕಿನ ತಳಮಳವನ್ನು ಹೇಳುವ ಪ್ರಯತ್ನ ಇಲ್ಲಿದೆ. ನಮ್ಮ ಸುತ್ತಲು ಹಲವು ಸಂಗತಿಗಳು ನಡೆ ಯುತ್ತಿರುತ್ತವೆ. ಅವುಗಳನ್ನು ಎದುರಿಸಲು ನಾನು ಹರ ಸಾಹಸ ಪಡಬೇಕಾಗುತ್ತದೆ. ಅಂತಹ ಒಂದು ಘಟನೆಯೇ ಸಿನಿಮಾಗೆ ಪ್ರೇರಣೆ, ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು ಪ್ರೇಕ್ಷಕರ ಮನ ಗೆಲ್ಲಲಿದೆ ಎಂದು ತಿಳಿಸಿದ್ದಾರೆ ನಿರ್ದೇಶಕ ಮಂಸೋರೆ. ಫೆಬ್ರವರಿಯಲ್ಲಿ ಈ ಚಿತ್ರ ರಿಲೀಸ್ ಮಾಡುವ ಚಿಂತನೆ ಯಲ್ಲಿದೆ ಚಿತ್ರತಂಡ. 


 ಪ್ರಮೋದ್ ಶೆಟ್ಟಿ, ಹಿರಿಯ ಕಲಾವಿದೆ ಶೃತಿ, ದತ್ತಣ್ಣ, ಅಚ್ಯುತ ಕುಮಾರ್, ಅವಿನಾಶ್, ಶೋಭರಾಜ್, ಶರಣ್ಯಾ ಶರಣು, ಸುಧಾ ಬೆಳವಾಡಿ ಸೇರಿದಂತೆ ಬಹುದೊಡ್ಡ ತಾರಾಗಣವೇ ಚಿತ್ರದಲ್ಲಿದೆ.  ದೇವರಾಜ್‌ ಆರ್‌ ನಿರ್ಮಾಣ ಮಾಡಿದ್ದಾರೆ. ಮಂಸೋರೆ, ಟಿ.ಕೆ.ದಯಾನಂದ್‌, ವೀರೇಂದ್ರ ಮಲ್ಲಣ್ಣ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ನಾಗೇಂದ್ರ ಕೆ. ಉಜ್ಜನಿ ಈ ಚಿತ್ರದ ಸಂಕಲನಕಾರ ರಾಗಿದ್ದಾರೆ. ರಾಷ್ಟ್ರ ಪ್ರಶಸ್ತಿ ವಿಜೇತ ಮಂಸೋರೆ ಚಿತ್ರವಾಗಿರುವುದರಿಂದ ಚಿತ್ರ ಮತ್ತೊಮ್ಮೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಅದರಲ್ಲೂ ಚಿತ್ರ ಸಾಮಾಜಿಕ ಕಳಕಳಿಯ ಕಥೆ ಆಧಾರಿತ ವಾಗಿದೆ.




మరింత సమాచారం తెలుసుకోండి: