ಬಿಗ್ ಬಾಸ್ ಸೀಸನ್ 7 ರ ಮಿಂಚಿನ ಹುಡುಗಿ ದುನಿಯಾ ರಶ್ಮಿ ಮೂರು ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ತುಂಬಾ ಚೆನ್ನಾಗಿ ಫರ್ಫಾಮೆನ್ಸ್ ಕೊಟ್ಟರು ಸಹ ಯಾಕೆ ಹೊರಗೆ ಬಂದರು ಎಂಬುದು ಅಭಿಮಾನಿಗಳ ಡೌಟು. ಈ ಡೌಟ್ ಗೆ ಉತ್ತರ ಇಲ್ಲಿದೆ ನೋಡಿ. 


ರಶ್ಮಿ ಹೇಳಿದ ಮಾತನ್ನು ಕೇಳಿ, ಇದು ನಂಗೂ ಆಶ್ಚರ್ಯ. ಯಾಕೆ ಅಂತ ಗೊತ್ತಾಗುತ್ತಿಲ್ಲ.
ಪ್ರತಿಯೊಂದು ಟಾಸ್ಕ್‌ನಲ್ಲೂ ಚೆನ್ನಾಗಿಯೇ ಆಡಿದ್ದೆ. ಎಲ್ಲರ ಜತೆಗೂ ಚೆನ್ನಾಗಿದ್ದೆ. ಕೆಲವರು ಮಾತ್ರ ನನ್ನ ವೈರಿ ರೀತಿ ನೋಡುತ್ತಿದ್ರು. ಆದ್ರೂ ಟಾಸ್ಕ್ ಅಂತ ಬಂದಾಗ ಅವರ ಜತೆಗೂ ಫ್ರೆಂಡ್ಲಿ ಆಗಿಯೇ ಇರುತ್ತಿದ್ದೆ. ಆದ್ರೂ ಯಾಕೆ ಬಂದೆ ಅನ್ನೋದೇ ಯಕ್ಷ ಪ್ರಶ್ನೆ. ಅಲ್ಲಿನ ನಮ್ಮ ಆ್ಯಕ್ಟಿವಿಟಿಗಳು ಸರಿಯಾಗಿ ಟೆಲಿಕಾಸ್ಟ್ ಆಗಿದ್ದರೆ ನಾನು ಎಲಿಮಿನೇಟ್ ಆಗ್ತಿರಲಿಲ್ಲ ಅಂತೆನಿಸುತ್ತಿದೆ.


ಆರಂಭದಲ್ಲಿ ಹೊಸ ಪ್ರಪಂಚ ಅಂತೆನಿಸಿತು. ಮೊಬೈಲ್ ಇಲ್ಲದೆ ಇರೋದಿಕ್ಕೆ ಕಷ್ಟ ಅಂತೆನಿಸಿತ್ತು. ಕ್ರಮೇಣ ಅಲ್ಲಿರೋದೇ ಖುಷಿ ಎನಿಸಿತು.ಆರಂಭದಲ್ಲಿ ಒಂಥರ ಫ್ಯಾಮಿಲಿ ವಾತಾವರಣ ಇತ್ತು. ಆಮೇಲೆ ಶುರುವಾಯಿತು ಕೆಲವರ ಆಟ. ಇದೆಲ್ಲ ಟಾಸ್ಕ್ ಇರಬೇಕು ಅಂತ ಸಮ್ಮನಿರುತ್ತಿದೆ. ನಾನು ಇರೋದೇ ಹಾಗೆ. ಆದ್ರೂ, ಕೆಲವರು ಆಟ ಆಡ್ಲಿಕ್ಕೂ ನಿರ್ಲಕ್ಷ್ಯ ವಹಿಸಿದವರಿದ್ದರು.ಅವರೆಲ್ಲ ಅಲ್ಲಿರೋದೇ ಮುಖವಾಡ ಹಾಕಿಕೊಂಡು. ಅವರಿಗೆ ವಾಸ್ತವ ಏನು ಅಂತ ಅರಿವಾಗುವುದು ಹೊರಗೆ ಬಂದ ಮೇಲೆ.


ಆ ಮನೆ ಸಾಕಷ್ಟು ವಿಷಯಗಳನ್ನು ಕಲಿಸಿಕೊಟ್ಟಿದೆ. ಜನರ ಜತೆ ಹೇಗಿರಬೇಕು ಎನ್ನುವುದು ಅದರಲ್ಲಿ ಮುಖ್ಯವಾದದ್ದು. ನಾನು ತುಂಬಾ ಎಮೋಷನಲ್ ಹುಡುಗಿ. ಎಲ್ಲರನ್ನು ಆತ್ಮೀಯವಾಗಿಯೇ ನೋಡುತ್ತೇನೆ. ಪರಿಚಿತರನ್ನು ಒಮ್ಮೆ ಹಚ್ಚಿಕೊಂಡ್ರೆ ಮರೆಯೋದಿಕ್ಕೆ ಕಷ್ಟ. ಅಲ್ಲಿ ಮೂವರ ಜತೆಗೆ ತುಂಬ ಕ್ಲೋಸ್ ಆಗಿದ್ದೆ. ಅವರನ್ನು ಉಳಿಸೊಣ ಅಂದುಕೊಳ್ಳುತ್ತಿದ್ದೆ. ಆದ್ರೆ ಅವರೇ ನನ್ನನ್ನು ನಾಮಿನೇಟ್ ಮಾಡಿಬಿಟ್ಟರು. ಆಗ ಅನಿಸಿದ್ದು ಜನ್ರು ಹೀಗೆಲ್ಲ ಇರ್ತಾರಾ ಅಂತ. ಈಗಾಗಲೇ ನನ್ನ ಫ್ಯಾನ್ಸ್ ಪೇಜ್ ಹೆಚ್ಚಾಗಿದೆ. ಆ ಪೇಜ್‌ಗಳಲ್ಲಿ ಸಾಕಷ್ಟು ಲೈಕ್ಸ್, ಕಮೆಂಟ್ ಬಂದಿವೆ. ಆ ಸಂಖ್ಯೆ ಪ್ರತಿಕ್ರಿಯಿಸಲು ಆಗದಷ್ಟಿದೆ. ಇದೆಲ್ಲ ಒಳ್ಳೆಯದೇ ಅಲ್ವಾ ಎಂದಿದ್ದಾರೆ


మరింత సమాచారం తెలుసుకోండి: