ಬಿಗ್ ಬಾಸ್, ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ. ಹೆಸರಿಗೆ ತಕ್ಕಂತೆ ತನ್ನದೇ ಆದ ಖದರ್ ನಿಂದ ಸಾಕಷ್ಟು ಹೆಸರು ಗಳಿಸಿದೆ. ಸೀಸನ್ 7 ಈ ಬಾರಿಯಲ್ಲಿ  ಅದೇ ನೇನೋ ನಡೆಯುತ್ತಿದೆ ಬಿಗ್ ಬಾಸ್ ಮನೆಯಲ್ಲಿ. ಹೌದು, ಕಿಸ್ಸಿಂಗ್ ಸ್ಪಾಟ್ ಆಗುತ್ತಿದೆಯಾ ಬಿಗ್ ಬಾಸ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 


ಬಿಗ್ ಬಾಸ್ ಮನೆಯಲ್ಲಿ ರಣಾಂಗಣ ಟಾಸ್ಕ್ ನಲ್ಲಿ ಚೆಂದನಾರ ಕೆನ್ನೆಗೆ ಮುತ್ತು ಕೊಟ್ಟ ಡ್ಯಾನ್ಸರ್ ಕಿಶನ್. ಇದರಿಂದ ಗೊಂದಲ, ಜಗಳ ಹುಟ್ಟುಹಾಕಿದ ಬಿಗ್ ಬಾಸ್.  ಮಂಗಳವಾರದ ಆಟ ರಣಾಂಗಣ ಟಾಸ್ಕ್ ಹೊರಬಿದ್ದಾಗಲೇ ಮನೆಯಲ್ಲಿ ಗಲಾಟೆ, ಗೊಂದಲ ನಿರ್ಮಾಣವಾಗುವ ಲಕ್ಷಣಗಳು ಕಂಡುಬಂದಿದ್ದವು. ಬಿಗ್ ಬಾಸ್ ಮನೆ ಹೊರಗಿನಿಂದ ನೀಡುವ ವಸ್ತುಗಳನ್ನು ನಿರ್ಮಿಸಿ ಮನೆ ರೀತಿಯಲ್ಲಿ ಪ್ಲೋರ್ ಗಳನ್ನು ಕಟ್ಟಬೇಕು ಎಂದು ಸೂಚಿಸಲಾಗಿತ್ತು.


ಮನೆಯನ್ನು ಎಡು ತಂಡಗಳಾಗಿಯೂ ಮಾಡಲಾಗಿತ್ತು. ಒಂದು ತಂಡಕ್ಕೆ ಭೂಮಿ ಶೆಟ್ಟಿ ನಾಯಕಿಯಾದರೆ ಇನ್ನೊಂದಕ್ಕೆ ದೀಪಿಕಾ ದಾಸ್ ನಾಯಕಿಯಾದರು. ಮನೆಯಲ್ಲಿ ದೊಡ್ಡ ಜಟಾಪಟಿಗಳೆ ನಡೆದು ಹೋದವು. ಗೆಲ್ಲಲೇ ಬೇಕಾದ ಒತ್ತಡ ಏನೇನೆಲ್ಲಾ ಮಾಡಿಸುತ್ತದೆ.


ಬಿಗ್ ಬಾಸ್ ನೀಡಿದ್ದ ಬಾಲ್ ಬಳಸಿ ಇನ್ನೊಂದು ತಂಡ ನಿರ್ಮಾಣ ಮಾಡುವ ಗೋಪುರ ಕೆಡಗುವ ಸಾಧ್ಯತೆಯನ್ನು ನೀಡಲಾಗಿತ್ತು. ಒಂದು ಹಂತದಲ್ಲಿ ಜೈಜಗದೀಶ್ ಚೈತ್ರಾ ಕೊಟ್ಟೂರು ಅವರ ಮೇಲೆ ತೆಂಗಿನಕಾಯಿನ್ನು ಎಸೆದಿದ್ದು ದೊಡ್ಡ ಗಲಾಟೆಗೆ ಕಾರಣವಾಯಿತು.


ಟಾಸ್ಕ್ ಒಂದು ಹಂತದಲ್ಲಿ ಬ್ರೇಕ್ ನೀಡಿದ್ದಾಗ ಒಬ್ಬರನ್ನೊಬ್ಬರು ಸಮಾಧಾನ ಮಾಡುತ್ತಿದ್ದರು. ಈ ವೇಳೆ ಚಂದನಾ ಹತ್ತಿರ ಬಂದ ಡ್ಯಾನ್ಸರ್ ಕಿಶನ್ ಸಮಾಧಾನ ಪಡಿಸುವ ಭರದಲ್ಲಿ ಚಂದನಾರ ಕೆನ್ನೆಗೆ ಮುತ್ತು ನೀಡಿದರು. ಇದು ಸಹ ಸಣ್ಣ ಪ್ರಮಾಣದ ಚರ್ಚೆಗೆ ಕಾರಣವಾಯಿತು. ನಾನು ಮನೆಗೆ ಬಂದ ಮೇಲೆ ಇದೇ ಮೊದಲ ಸಾರಿ ಫ್ರಸ್ಟ್ರೇಟ್  ಆಗಿದ್ದೇನೆ. ಟಾಸ್ಕ್ ಸಂದರ್ಭದಲ್ಲಿ ಕೆಲವರು ನನ್ನ ಎದುರಗಡೆಯೇ ಕೈಹಾಕಿ ಹೋದರು ಎಂದು ಚಂದನಾ ಅಳಲು ತೋಡಿಕೊಂಡರು.  ಇದೂ ಸಮಾಧಾನ ಪಡಿಸಿದ್ದಾರೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಬಿಗ್ ಬಾಸ್ ಮನೆ ಕಿಸ್ಸಿಂಗ್ ಸ್ಪಾಟ್ ಆಗುತ್ತಿದೆ ಎಂದಿದ್ದಾರೆ. 


మరింత సమాచారం తెలుసుకోండి: