ದಿ ವಿಲನ್ ಚಿತ್ರದ ನಿರ್ದೇಶಕರಾದ ಜ್ಯೋಗಿ  ಪ್ರೇಮ್ ಇದೀಗ ಏಕ್ ಲವ್ ಯಾ  ಚಿತ್ರದ ನಿರ್ದೇಶನದಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಪತ್ನಿ ರಕ್ಷಿತಾ ನಿರ್ಮಿಸುತ್ತಿರುವ ಈ ಸಿನಿಮಾದಲ್ಲಿ, ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಈಚೆಗೆ ಪ್ರೇಮ್‌ ಕೈಯಲ್ಲಿ ದೊಡ್ಡ ದೊಡ್ಡ ಎಣ್ಣೆ ಬಾಟಲ್‌ಗಳು ಕಾಣಿಸಿಕೊಂಡಿವೆ. ಹೌದು, ಪ್ರೇಮ್‌ಗೆ ಏನಾಯ್ತು? ಅವರೇನು ಕುಡಿಯೋಕೆ ಶುರು ಮಾಡಿದ್ರಾ? ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.


ನಟ ಕಂ ನಿರ್ದೇಶಕ ಪ್ರೇಮ್ ಮದ್ಯಪಾನ ಮಾಡೋದೇ ಇಲ್ಲ. ಹೀಗಿದ್ದರೂ, ಅವರ ಕೈಯಲ್ಲಿ ಇಷ್ಟೊಂದು ದೊಡ್ಡ ಬಾಟಲ್‌ಗಳು ಬಂದಿದ್ದೇಕೆ! 'ಬಾಟಲ್ ಸೈಜ್ ನೋಡಿ ಭಯ ಪಡ್ಬೇಡಿ... ಒಳಗಡೆ ಇರೋದ್ ಎಣ್ಣೆನೂ ಅಲ್ಲ, ನಾನ್ ಎಣ್ಣೆ ಕುಡಿಯೋದು ಇಲ್ಲಾ.... 'ಎಕ್‌ ಲವ್ ಯಾ' ಚಿತ್ರದ ಎಣ್ಣೆ ಸಾಂಗ್ ಶೂಟಿಂಗ್ ಗ್ಯಾಪಲ್ಲಿ ಹಂಗೇ ಒಂದ್ ಪೋಸ್ ಕೊಟ್ಟೆ ಅಷ್ಟೇ' ಎಂದಿದ್ದಾರೆ ಪ್ರೇಮ್‌. ಅಲ್ಲಿಗೆ, 'ಎಕ್‌ ಲವ್ ಯಾ' ಚಿತ್ರದಲ್ಲಿ ಒಂದು ಎಣ್ಣೆ ಸಾಂಗ್ ಇದೆ ಅನ್ನೋದು ಪಕ್ಕಾ ಆಗಿದೆ. ಈ ಸಾಂಗ್ ಲವ್ ಫೇಲ್ಯೂರ್ ಕುರಿತದ್ದಾಗಿದೆ. 
ಈ ಎಣ್ಣೆ ಸಾಂಗ್ ನಿರ್ದೇಶಿಸಿರೋದು ಯಾರು ಅಂತ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ, ಅದು ಯಾರು ಅಂತ ನಾವ್ ಹೇಳ್ತೀವಿ ಕೇಳಿ. 


 ಅರ್ಜುನ್‌ ಜನ್ಯ, ಎಣ್ಣೆ ಸಾಂಗ್ ಮಾಡೋದ್ರಲ್ಲಿ ಅರ್ಜುನ್‌ ಸಖತ್ ಫೇಮಸ್ಸು. ಈ ಹಿಂದಿನ 'ಖಾಲಿ ಕ್ವಾಟರ್ ಬಾಟ್ಲಿ ಹಂಗೆ ಲೈಫು..', 'ನಾವ್ ಮನೇಗ್ ಹೋಗೋದಿಲ್ಲ..', 'ಫೋನು ಇಲ್ಲ ಮೇಸೇಜ್‌ ಇಲ್ಲ ನಿಂದು..' ಸೇರಿ ಸಾಕಷ್ಟು ಹಿಟ್ ಎಣ್ಣೆ ಹಾಡುಗಳನ್ನೇ ಅವರು ನೀಡಿದ್ದಾರೆ. ಏಕ್ ಲವ್ ಯಾ ಚಿತ್ರವು ರಾಣಾ ನಟನೆಯ ಚೊಚ್ಚಲ ಚಿತ್ರವಾಗಿದೆ. ನಟನೆಗೆ ಬೇಕಾದ ಅಗತ್ಯ ತಯಾರಿಗಳನ್ನು ಮಾಡಿಕೊಂಡೇ ರಾಣಾ ಅಖಾಡಕ್ಕೆ ಇಳಿದಿದ್ದಾರೆ. ಈ ಚಿತ್ರದ ಟೈಟಲ್ ಟೀಸರ್ ಗಮನಸೆಳೆದಿದೆ. ಇನ್ನು, ಈಚಿತ್ರದ ಮೂಲಕ ರೀಷ್ಮಾ ನಾಯಕಿಯಾಗಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.ಬಹಳ ದಿನಗಳ ರಕ್ಷಿತಾ 'ಏಕ್‌ ಲವ್ ಯಾ'ದಲ್ಲಿ ಒಂದು ಪಾತ್ರ ಮಾಡಿದರೆ, ರಚಿತಾ ರಾಮ್‌ ಮುಖ್ಯವಾದ ಪಾತ್ರದಲ್ಲಿ ನಟಿಸಿದ್ದಾರೆ.


మరింత సమాచారం తెలుసుకోండి: