ಸ್ಯಾಂಡಲ್ ವುಡ್ ನಲ್ಲಿ ಬಹುದಿನಗಳ ನಂತರ ಭರ್ಜರಿ ಡಬ್ಬಲ್ ಮೀನಿಂಗ್ ಡೈಲಾಗ್ಸ್ ನೊಂದಿಗೆ ತೆರೆಗೆ ಅಪ್ಪಳಿಸು ತ್ತಿರುವ ಚಿತ್ರವೇ ಬ್ರಹ್ಮಚಾರಿ. ಹೌದು, ಇದೀಗ ತಾನೆ ಟ್ರೈಲರ್ ಬಿಡುಗಡೆಯಾಗಿ ಭರ್ಜರಿ ಸದ್ದು ಮಾಡುತ್ತಿದೆ. 'ಬ್ರಹ್ಮಚಾರಿ' ಟ್ರೈಲರ್​ನಲ್ಲಿರುವ ಪಂಚಿಂಗ್​ ಡಬಲ್​ ಮೀನಿಂಗ್​ ಡೈಲಾಗ್​ಗಳು ಪ್ರೇಕ್ಷಕರಗಿಗೆ ಇಷ್ಟವಾಗಿದೆ. ಸಿನಿಮಾದಲ್ಲಿ ಮತ್ತಷ್ಟು ಮಸಾಲೆ ಭರಿತವಾಗಿರಲಿದೆ ಎನ್ನುವ ನಿರೀಕ್ಷೆ ಪ್ರೇಕ್ಷಕಯಿದೆ.


‘ಅಯೋಗ್ಯ’ ಹಾಗೂ ‘ಚಂಬಲ್​’ ಯಶಸ್ಸಿನ ನಂತರ ನೀನಾಸಂ ಸತೀಶ್​ ‘ಬ್ರಹ್ಮಚಾರಿ’ಯಾಗಿದ್ದು ಸಖತ್​ ಸುದ್ದಿಯಾಗಿತ್ತು. ಪೋಸ್ಟರ್,​ ಟೀಸರ್​ ಮೂಲಕ ಗಮನಸೆಳೆದಿದ್ದ ಈ ಚಿತ್ರದ ಟ್ರೈಲರ್​ ನ.4ರಂದು ರಿಲೀಸ್​ ಆಗಿತ್ತು. ಚಿತ್ರದ ಟ್ರೈಲರ್​ಗೆ ಜನ ಮೆಚ್ಚುಗೆ ವ್ಯಕ್ತವಾಗಿದ್ದು, 1 ಮಿಲಿಯನ್​ ವೀಕ್ಷಣೆಯತ್ತ ‘ಬ್ರಹ್ಮಚಾರಿ’ ದಾಪುಗಾಲು ಹಾಕುತ್ತಿದ್ದು, ಚಿತ್ರತಂಡ ಫುಲ್ ಖುಷ್ ಆಗಿದೆ. ‘ಹಾಗೇ ಇರ್ತೀನಿ, ಹಾಗೇ ಬದಕ್ತೀನಿ, ಹಾಗೇ ಬಾಳ್ತೀನಿ, ಇದು ಸತ್ಯ’​ ಎನ್ನುವುದರಿಂದ ಟ್ರೈಲರ್​ ಆರಂಭಗೊಳ್ಳುತ್ತದೆ. ಗೃಹಸ್ಥನಾಗಿ ನೀನಾಸಂ ಸತೀಶ್​ ಕಾಣಿಸಿಕೊಂಡಿದ್ದಾರೆ. ಅದಿತಿ ಪ್ರಭುದೇವ ಸಿನಿಮಾದ ನಾಯಕಿ. ಈ ಚಿತ್ರದಲ್ಲಿ ಸತೀಶ್​ಗೆ ಮದುವೆಯೇನೋ ಆಗಿರುತ್ತದೆ. ಆದರೆ, ಮದುವೆ ನಂತರವೂ ಅವರು ಬ್ರಹ್ಮಚಾರಿ ರೀತಿ ಬದುಕಬೇಕಾದ ಪರಿಸ್ಥಿತಿ ಬಂದೊದಗುತ್ತದೆ ಎನ್ನುವುದನ್ನು ಟ್ರೈಲರ್​ನಲ್ಲಿ ಹಾಸ್ಯಮಯವಾಗಿ ಹೊಟ್ಟೆ ನೋವು ಬರುವಷ್ಟು ನಗಿಸುತ್ತದೆ.


ಸತೀಶ್ ನೀನಾಸಂ ಅವರು ಈ ಮೊದಲಿನಿಂದಲೂ ಕಾಮಿಡಿ ಯಲ್ಲಿ ಬಹು ಖ್ಯಾತಿ ಪಡೆದವರು. ಇದೀಗ ಮತ್ತೇ ಈ ರೀತಿಯ ಪಂಚಿಂಗ್ ಡೈಲಾಗ್ಸ್ ಗಳಿಂದ ತೆರೆ ಮೇಲೆ ಮೋಡಿ ಮಾಡಲು ರೆಡಿಯಾಗಿದ್ದಾರೆ. ಚಿತ್ರವೂ  ಕಲರ್ ಫುಲ್ ಆಗಿ ಸೆಟ್ಟೇರಿದೆ  ಎಂಬುದು ಟೀಸರ್ ಮೂಲಕವೇ ತಿಳಿದು ಬರುತ್ತಿದೆ. ಈ ಎಲ್ಲ ಕಾರಣಕ್ಕೆ ‘ಬ್ರಹ್ಮಚಾರಿ’ ಟ್ರೈಲರ್​ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾದಲ್ಲಿ ದತ್ತಣ್ಣ, ಶಿವರಾಜ್​ ಕೆಆರ್​ ಪೇಟೆ, ಅಚ್ಯುತ್​ ಕುಮಾರ್​ ಮೊದಲಾದವರು ನಟಿಸಿದ್ದು, ಸಿನಿಮಾದ ತೂಕ ಹೆಚ್ಚಿಸಿದ್ದಾರೆ. ಚಂದ್ರ ಮೋಹನ್​ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಧರ್ಮಾ ವಿಶ್​ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದೀಗ ಬ್ರಹ್ಯಚಾರ್ಯಕ್ಕಾಗಿ ಸಿನಿ ರಸಿಕರು ಸಾವಿರ ಕಣ್ಣುಗಳಿಂದ ಎದುರು ನೋಡುತ್ತಿದ್ದಾರೆ.


మరింత సమాచారం తెలుసుకోండి: