ಲೇಡಿ ಸಿಗಂ, ಸೂಪರ್ ಸ್ಟಾರ್ ನಟಿ ಎಂದೇ ಕರೆಯಲ್ಪಡುವ ಮಂಗಳೂರಿನ ಮೀನು ಅನುಷ್ಕಾ ಶೆಟ್ಟಿ ಅವರ ಹುಟ್ಟು ಹಬ್ಬದ ದಿನದಂದೇ ಅವರ ನಿಶ್ಯಬ್ದಂ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾದ್ದರಿಂದ ಅಭಿಮಾನಿಗಳಲ್ಲಿ ಸಿನಿಮಾದ ಮೇಲಿನ ನಿರೀಕ್ಷೆಗಳು ಹೆಚ್ಚಿವೆ.


ನಿಶಬ್ಧಂ, ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಅಭಿನಯದ ಸಸ್ಪೆನ್ಸ್​ ಥ್ರಿಲ್ಲರ್​ ಎಂಟ್ರಟ್ರೈನರ್. ಹೇಮಂತ್​ ಮಧುಕರ್​ ನಿರ್ದೇಶನದ ನಿಶಬ್ಧಂ ಸಿನಿಮಾ ಏಕಕಾಲದಲ್ಲಿ ಇಂಗ್ಲೀಷ್, ತೆಲುಗು, ತಮಿಳು, ಹಿಂದಿ, ಮತ್ತು ಮಲಯಾಳಂ ಭಾಷೆಗಳಲ್ಲಿ ಸಿದ್ಧವಾಗ್ತಿದೆ. ದಕ್ಷಿಣ ಭಾರತದ ಕಲಾವಿದರ ಜೊತೆಗೆ ಹಾಲಿವುಡ್​ ಕಲಾವಿದರು ನಟಿಸಿದ್ದು, ಸೌತ್​ ಹಾಲಿವುಡ್​ ಕ್ರಾಸ್​ ಓವರ್​ ಸಿನಿಮಾ ಅನ್ನೋ ಖ್ಯಾತಿ ಪಡೆದಿದೆ. 


ನಟಿ ಅನುಷ್ಕಾ, ಭಾಗಮತಿ ಸಿನಿಮಾದಲ್ಲಿ ನಟಿಸಿದ್ದು, ಬಿಟ್ರೆ ಈ ವರ್ಷ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಗೆಸ್ಟ್ ಪಾತ್ರ ಮಾಡಿದ್ದರು. ಕೆಲದಿನಗಳ ಹಿಂದೆಯಷ್ಟೆ ತೂಕ ಇಳಿಸಿಕೊಂಡು ನಿಶಬ್ಧಂ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಸ್ವೀಟಿ ಹುಟ್ಟುಹಬ್ಬಕ್ಕೆ ಒಂದು ದಿನ ಮೊದ್ಲೇ ನಿಶಬ್ಧಂ ಟೀಂ, ಟೀಸರ್​​ ರಿಲೀಸ್​ ಮಾಡಿ ಸ್ಪೆಷಲ್​ ಗಿಫ್ಟ್​ ಕೊಟ್ಟಿದೆ.ಚಿತ್ರದಲ್ಲಿ ಮಾಧವನ್,​​ ಅನುಷ್ಕಾ ಶೆಟ್ಟಿ ಜೋಡಿಯಾಗಿ ಮಿಂಚಿದ್ದಾರೆ.


ಸೆಲೆಬ್ರೆಟಿ ಮ್ಯೂಜೀಷಿಯನ್ ಆ್ಯಂಟೋನಿ ಮತ್ತು ಆತನ ಪತ್ನಿ ಮ್ಯೂಟ್​ ಆರ್ಟಿಸ್ಟ್​​ ಸಾಕ್ಷಿ.. ಇಬ್ರು ರಜೆಯ ಮಜಾ ಅನುಭವಿಸಲು ಪ್ರವಾಸ ಕೈಗೊಳ್ತಾರೆ. ಅಲ್ಲಿ ಇವರು ಉಳಿದುಕೊಳ್ಳುವ ಫ್ಲಾಟ್​​​ನಲ್ಲಿ ಚಿತ್ರ ವಿಚಿತ್ರ ಘಟನೆಗಳು ನಡೀತಾವೆ. ಇದ್ರ ಸುತ್ತಾ ನಿಶಬ್ಧಂ ಕಥೆ ಸುತ್ತುತ್ತೆ. ಆ ಜೋಡಿಗೆ ಜಾಲಿ ಟ್ರಿಪ್​ ದುಸ್ವಪ್ನವಾಗಿ ಕಾಡೋಕ್ಕೆ ಶುರುವಾಗುತ್ತೆ. ಹಾರರ್​ ಟಚ್​ ಇರೋ ಸಸ್ಪೆನ್ಸ್​ ಥ್ರಿಲ್ಲರ್​ ನಿಶಬ್ದಂ ಟೀಸರ್​​, ಕುತೂಹಲ ಕೆರಳಿಸುವಂತಿದೆ. ಈಗಾಗಲೇ ಅಭಿಮಾನಿಗಳು ಫುಲ್ ಥ್ರಿಲ್ ಆಗಿದ್ದಾರೆ. ಅಂಜಲಿ, ಮೈಕಲ್​ ಮ್ಯಾಡ್​ಸನ್​, ಸುಬ್ಬರಾಜು, ಶಾಲಿನಿ ಪಾಂಡೆ ಚಿತ್ರದ ತಾರಾಗಣವಿದೆ. ನಿಶಬ್ದಂ ತೆಲುಗು ಟೀಸರ್​ನ ನಿರ್ದೇಶಕ ಪೂರಿ ಜಗನ್ನಾಥ್​, ತಮಿಳು, ಮಲಯಾಳಂ ಟೀಸರ್​ನ ಗೌತಮ್​ ಮೆನನ್​, ಹಿಂದಿ ಟೀಸರ್​​ನ ನೀರಜ್​ ಪಾಂಡೆ ರಿವೀಲ್​ ಮಾಡಿದ್ದಾರೆ. ಇಂಗ್ಲೀಷ್​​ನಲ್ಲಿ ಸೈಲೆನ್ಸ್​ ಹೆಸರಿನಲ್ಲಿ ಸಿನಿಮಾ ತೆರೆ ಕಾಣಲಿದೆ


మరింత సమాచారం తెలుసుకోండి: