ರಜನಿಕಾಂತ್, ಈ ಹೆಸರು ಕೇಳಿದ್ರೆ ಮಯೈಲ್ಲಾ ಒಂಥರಾ ರೋಮಾಂಚನವಾಗುತ್ತದೆ. ಹೌದು, ಸೌತ್ ಸಿನಿ ಇಂಡಸ್ಟ್ರೀಯ ಡಾನ್ ಇವರು. ಸೂಪರ್ ಸ್ಟಾರ್ಮ ತಮಿಳು ನಾಡಿನ ತಲೆಯ, ಕಾಲ, ರೋಬೋ ಎಂದೇ ಪ್ರೀತಿಯಿಂದ ಅಭಿಮಾನಿಗಳು ಕರೆಯೋದು. ಸಿನಿ ಬಾಕ್ಸ್ ಆಫೀಸ್ ನಲ್ಲಿ ಈಗಲೂ ಅದೇ ಖದರ್, ಅದೇ ಸ್ಟೈಲ್. ಒಂದು ಚಿತ್ರಕ್ಕೆ ತಲೈವ ಪಡೆಯುವ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗ್ತೀರಾ. 
 
ಸೂಪರ್ ಸ್ಟಾರ್ ರಜಿನಿಕಾಂತ್ ಇಂದಿಗೂ ಎಂದೆಂದಿಗೂ ' ಒನ್ ಅಂಡ್ ಒನ್ಲಿ ಸ್ಟಾರ್'. ಚಿತ್ರರಂಗಕ್ಕೆ ಕಾಲಿಟ್ಟು 44 ವರ್ಷ ಪೂರೈಸಿದ್ದ ರಜನಿಗೆ ಅಭಿಮಾನಿಗಳು ಈಗಲೂ ಜೈಕಾರ ಹಾಕುತ್ತಾರೆ.  ಇನ್ನು ದರ್ಬಾರ್ ಚಿತ್ರದಲ್ಲಿ ಖಾಕಿ ತೊಟ್ಟು ಖಡಕ್‌ ಆಫೀಸರ್ ರೀತಿಯಲ್ಲಿ ಕಾಣಿಸಿಕೊಳ್ಳುವ ರಜನಿ ಲುಕ್‌ಗೆ ಫ್ಯಾನ್ಸ್‌ ಮಾರು ಹೋಗುತ್ತಾರೆ. ಈ ಚಿತ್ರವು ತಮಿಳು,ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣಲಿದೆ ಹಾಗೂ ಇದರಲ್ಲಿ ರಜನಿಗೆ ನಯನತಾರಾ ಜೋಡಿಯಾಗಿ ಸಾಥ್‌ ನೀಡುತ್ತಿದ್ದಾರೆ.ಖ್ಯಾತ ಎ.ಆರ್ ಮುರುಗದಾಸ್ ನಿರ್ದೇಶನದಲ್ಲಿಮೂಡಿ ಬರುತ್ತಿರುವ ಚಿತ್ರದ ಒಟ್ಟ ಬಜೆಟ್ 250 ಕೋಟಿ ಆಗಿದ್ದು ರಜನಿಕಾಂತ್ 100 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಹೈ ರಾಂಕ್ ಪೊಲೀಸ್‌ ರೀತಿ ಕಾಣಿಸಿಕೊಳ್ಳುತ್ತಿರುವ ರಜನಿಯನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಚಿತ್ರತಂಡದ ಪ್ರಕಾರ ಸಂಕ್ರಾಂತಿ ಹಬ್ಬದ ದಿನ ತೆರೆ ಕಾಣಲು ಸಿದ್ಧವಾಗುತ್ತಿದೆ. 2.0 ಹಾಗೂ 'ಪೆಟ್ಟಾ' ಎರಡು ಚಿತ್ರಗಳು ಸೂಪರ್ ಹಿಟ್ ಆಗಿ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ನಲ್ಲಿ ಹಾಕಿದ ಬಂಡವಾಳವನ್ನು ಪಡೆದುಕೊಂಡಿತ್ತು.


ತಲೈವ ನೂರಾರು ಕೋಟಿ ಸಂಭಾವನೆ ಪಡೆದರು ಸಹ ಏನು ಮಾಡಿದ್ದಾರೆ? ಎಂದು ಹೇಳಬೇಡಿ. ಏಕೆಂದರೆ ತಲೈವ ಮಾಡುವ ಸಾಮಾಜಿಕ ಸೇವೆ, ಮತ್ತು ಸಹಾಯವನ್ನು ಲೆಕ್ಕ ಇಟ್ಟವರಿಲ್ಲ. ಮನೆ ಇಲ್ಲದವರಿಗೆ ಮನೆ, ಸಹಾಯ, ಪ್ರವಾಹವಾದಾಗ ರಾಜ್ಯಕ್ಕೆ ಕೋಟಿಗಟ್ಟಲೆ ಹಣವನ್ನು ಸಹಾಯ ನೀಡಿದ್ದಾರೆ. ಹೌದ! ಎಂದು ಶಾಕ್ ಆದರೂ ಸಹ ನಂಬಲೇಬೇಕಾದ ವಿಷಯವಿದು. ನಾನೇ ಬೇರೆ ನನ್ನ ಸ್ಟೈಲೇ  ಬೇರೆ ಎಂದು ಹೇಳುವ ತಲೈವ ಗೆ ನಿಜಕ್ಕೂ ಗ್ರೇಟ್ ಎನ್ನಲೇ ಬೇಕು.


మరింత సమాచారం తెలుసుకోండి: