
ಮುಂಬೈ: ಬಾಲಿವುಡ್ ನ ಬ್ಯೂಟಿ ಕ್ವಿನ್, ಮುದ್ದು ಚೆಲುವೆ ಎಂದೆಲ್ಲಾ ಕರೆಯಲ್ಪಡುವ ದೀಪಿಕಾ ಪಡುಕೋಣೆ ಗೆ ಏನಾಗಿದೆ ಅಂತ ಕೇಳಿದ್ರೆ ನೀವು ಕೂಡ ಶಾಕ್ ಆಗೋದು ಪಕ್ಕಾ. ಹೌದು, ಈ ಮುದ್ದು ಚಲುವೆಗೆ ಆರೋಗ್ಯವೇ ಸರಿಯಿಲ್ಲ ವಂತೆ. ಹೌದು ಈ ವಿಷಯವನ್ನು ಬೇರಾರು ಹೇಳುವುದಿಲ್ಲ, ಸ್ವತಹ ದೀಪಿಕಾ ಪಡುಕೋಣೆ ಅವರೇ ತಮ್ಮ ಇನ್ ಸ್ಟಾ ಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಹೌದು ಇದರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ.
ಇತ್ತೀಚೆಗೆ ದೀಪಿಕಾ ತನ್ನ ಪತಿ, ನಟ ರಣ್‍ವೀರ್ ಸಿಂಗ್ ಜೊತೆ ಆತ್ಮೀಯ ಗೆಳತಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ ಈ ಕಾರ್ಯಕ್ರಮದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಸಾಕಷ್ಟು ಎಂಜಾಯ್ ಮಾಡಿದ್ದು, ಸಕತ್ ಕುಣಿದಾಡಿದ್ದು, ಇದೀಗ ಅವರು ಅನಾರೋಗ್ಯ ದಿಂದ ಬಳಲುತ್ತಿದ್ದಾರೆ.
ದೀಪಿಕಾ ತನ್ನ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಅನಾರೋಗ್ಯದಲ್ಲಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಈ ಫೋಟೋಗೆ ಅವರು ಥರ್ಮಾಮೀಟರ್ ಎಮೋಜಿ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ದೀಪಿಕಾ ಜ್ವರದಿಂದ ಬಳಲುತ್ತಿದ್ದಾರೆ ಅವರು ಬೇಗ ಗುಣಮುಖ ರಾಗಲಿ ಎಂದುಆಶಿಸುತ್ತಿದ್ದಾರೆ. ಇದರ ಕಾಮೆಂಟ್ಸ್ ಗಳು ಸಹ ಹೆಚ್ಚಾಗಿವೆ.
ಆರೋಗ್ಯ ಸರಿಯಿಲ್ಲದ ಫೋಟೋ ಪೋಸ್ಟ್ ಮಾಡಿ ದೀಪಿಕಾ ಅದಕ್ಕೆ, “ನೀವು ನಿಮ್ಮ ಆತ್ಮೀಯ ಗೆಳತಿಯ ಮದುವೆಯಲ್ಲಿ ತುಂಬಾನೇ ಎಂಜಾಯ್ ಮಾಡಿದರೆ ಈ ರೀತಿ ಆಗುತ್ತದೆ” ಎಂದು ಬರೆದುಕೊಂಡಿದ್ದಾರೆ. ಸದ್ಯ ದೀಪಿಕಾ ತಮಗೆ ಏನಾಗಿದೆ ಎಂಬುದನ್ನು ಅಧಿಕೃತವಾಗಿ ಹೇಳಲಿಲ್ಲ. ದೀಪಿಕಾ, ಮೇಘನಾ ಗುಲ್ಝಾರ್ ನಿರ್ದೇಶಿಸುತ್ತಿರುವ ‘ಚಾಪಕ್’ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಈ ಚಿತ್ರ ಆ್ಯಸಿಡ್ ದಾಳಿಗೊಳಗಾದ ಲಕ್ಷ್ಮೀ ಅಗರ್ ವಾಲ್ ಜೀವನಚರಿತ್ರೆ ಆಗಿದೆ. ಈ ಚಿತ್ರದ ನಂತರ ದೀಪಿಕಾ ಪಡುಕೋಣೆ ತಮ್ಮ ಪತಿ, ನಟ ರಣ್‍ವೀರ್ ಸಿಂಗ್ ಅವರ ಜೊತೆ ’83’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ದೀಪಿಕಾ ಪಡುಕೋಣೆ ಅವರು ಬೇಗ ಗುಣಮುಖ ರಾಗಲಿ ಎಂದು ಸಹಸ್ರಾರು ಅಭಿಮಾನಿಗಳು ಆಶಿಸುತ್ತಿದ್ದಾರೆ.
Please do not make derogatory comments, comments those attack any person directly, indirectly, comments those create societal pressures, comments those are not ethical & moral. Please do support us to moderate and remove the comments which doesn't fit to this comment policy - India Herald Group