ಸ್ಯಾಂಡಲ್ ವುಡ್ ನ ಡಿಂಪಲ್ ಕ್ವೀನ್, ಸ್ಟಾರ್ ನಟಿ ರಚಿತಾ ರಾಮ್ ಇದೀಗ ಟಾಲಿವುಡ್ ಗೆ ಹಾರಲು ರೆಡಿಯಾಗಿದ್ದಾರೆ. ಟಾಲಿವುಡ್ ನ ಡೈಲಾಗ್ ಕಿಂಗ್ ಬಾಲಕೃಷ್ಣ ಜೊತೆ ಸ್ಟೆಪ್ ಆಕಲಿದ್ದಾರೆ ಎಂಬುದು ಇದೀಗ ಲೇಟೆಸ್ಟ್ ಸುದ್ದಿ ಯಾಗಿದೆ. ಟಾಲಿವುಡ್ ನಟಸಿಂಹ ನಂದಮೂರಿ ಬಾಲಕೃಷ್ಣ  ಅಭಿನಯದ 'ರೂಲರ್' ಸಿನಿಮಾ ಚಿತ್ರೀಕರಣ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಇನ್ನೊಂದು ಕಡೆ ಬೋಯಪಾಟಿ ಸಿನಿಮಾಗೆ ರೆಡಿಯಾಗುತ್ತಿದ್ದಾರೆ 'ಲೆಜೆಂಡ್' ಆಕ್ಟರ್. ಶೀಘ್ರದಲ್ಲೇ ಬೋಯಪಾಟಿ, ಬಾಲಕೃಷ್ಣ ಕಾಂಬಿನೇಷನ್ ಸಿನಿಮಾ ಸೆಟ್ಟೇರಲಿದೆ. ಈ ಸಿನಿಮಾಗೆ ಸಂಬಂಧಿಸಿದ ಪ್ರೀ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ.


ಲೇಟೆಸ್ಟ್ ಸಮಾಚಾರ ಏನೆಂದರೆ ಈ ಚಿತ್ರದಲ್ಲಿ ಬಾಲಯ್ಯ ಜೊತೆಗೆ ಕನ್ನಡದ ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಸೊಂಟ ಬಳುಕಿಸಲಿದ್ದಾರೆ ಎಂಬುದು. ಸದ್ಯಕ್ಕೆ ರಚಿತಾ ರಾಮ್ ಜೊತೆ ನಿರ್ಮಾಪಕ ಮತ್ತು ನಿರ್ದೇಶಕರು ಮಾತುಕತೆ ನಡೆಸುತ್ತಿದ್ದಾರೆ ಎಂದಿವೆ ಟಾಲಿವುಡ್ ಮೂಲಗಳು.


ಈ ಮೂಲಕ ಶೀಘ್ರದಲ್ಲೇ ಬಾಲಯ್ಯ 106ನೇ ಸಿನಿಮಾದ ಹೀರೋಯಿನ್ ಯಾರಾಗಲಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಷ್ಟೆ ಅಲ್ಲದೆ ಈ ಚಿತ್ರದಲ್ಲಿ ವಿಲನ್ ಆಗಿ ಬಾಲಿವುಡ್ ಸ್ಟಾರ್ ನಟ ಸಂಜಯ್ ದತ್‌ರನ್ನು ಸಂಪರ್ಕಿಸಲಾಗಿದೆಯಂತೆ. ಅವರೂ ಅಷ್ಟೇ ಬಹುತೇಕ ಗ್ರೀನ್ ಸಿಗ್ನಲ್ ನೀಡಿದ್ದು ಡೇಟ್ಸ್‌ಗೆ ಸಂಬಂಧಿಸಿದಂತೆ ಮಾತುಕತೆ ನಡೆಯುತ್ತಿದೆಯಂತೆ. ಮಿರ್ಯಾಲ ರವೀಂದರ್ ರೆಡ್ಡಿ ನಿರ್ಮಾಣದಲ್ಲಿ ಬೋಯಪಾಟಿ ಭಾರಿ ರೇಂಜ್‌ನಲ್ಲಿ ಈ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಬೋಯಪಾಟಿ ಸಿನಿಮಾ ಎಂದರೆ ಮಾಸ್, ಕಮರ್ಷಿಯಲ್ ಅಂಶಗಳ ಜೊತೆಗೆ ಅದ್ದೂರಿತನವನ್ನೂ ಕಾಣಬಹುದು. ಈ ಹಿಂದಿನ ತನ್ನ ಯಾವುದೇ ಚಿತ್ರಕ್ಕೂ ಕಡಿಮೆ ಇಲ್ಲದಂತೆ 106ನೇ ಸಿನಿಮಾವನ್ನು ತೆರೆಗೆ ತರಲಿದ್ದಾರಂತೆ ಬೋಯಪಾಟಿ.


ರಶ್ಮಿಕಾ ಮಂದಣ್ಣಗೆ ದೊಡ್ಡ ಸ್ಪರ್ಧೆ ಕೊಡ್ತಿದ್ದಾರೆ ದರ್ಶನ್ ನಾಯಕಿ ಸಿಂಹ, ಲೆಜೆಂಡ್‌ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ ಜೋಡಿ ಇವರದು. ಹಾಗಾಗಿ 106ನೇ ಸಿನಿಮಾದ ಬಗ್ಗೆಯೂ ಅದೇ ರೀತಿಯ ನಿರೀಕ್ಷೆಗಳಿವೆ. ಬಾಲಕೃಷ್ಣ ಅವರು ಈ ಸಿನಿಮಾದಲ್ಲೂ ಸಹ ಡೈಲಾಗ್, ಫೈಟಿಂಗ್ಸ್ ನೊಂದಿಗೆ ಮಿಂಚಲಿದ್ದಾರಂತೆ.


మరింత సమాచారం తెలుసుకోండి: