ಸ್ಯಾಂಡಲ್ ವುಡ್ ಚಿತ್ರವೊಂದು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್. ಕನ್ನಡದ ಸಿನಿಮಾವೊಂದು ನೂರಾರು ಕೋಟಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು ಅಂದ್ರೆ ಅದು ಕೆಜಿಎಫ್ ನಿಂದ. ಹೌದು, ಒಂದೇ ಒಂದುಚಿತ್ರದಮೂಲಕ ಕನ್ನಡದ ಕಂಪನ್ನು ವಿದೇಶಕ್ಕೆ ಚೆಲ್ಲಿದ್ದರು.


 ಬಹುಭಾಷಾ ಚಿತ್ರದಿಂದ ಬಾಕ್ಸ್ ಆಫೀಸ್​ನಲ್ಲಿ ಬರೋಬ್ಬರಿ 250ಕೋಟಿ ಗಳಿಕೆ ಮಾಡಿದ ದಾಖಲೆ. ಒಬ್ಬ ರೀಜನಲ್ ಸ್ಟಾರ್ ಆಗಿ ಇಡೀ ದೇಶದ ಸಿನಿಮಾ ಮಾರುಕಟ್ಟೆಯನ್ನ ಆಕ್ರಮಿಸಿದ ರೀತಿ, ಇಡೀ ದೇಶದ ಚಿತ್ರೋದ್ಯಮಗಳಿಗೆ ಮಾದರಿಯಾಗಿದೆ. ಮಾಡೋ ಯೋಚನೆ ದೊಡ್ಡದಾಗಿರ್ಬೇಕು.. ಯೋಚನೆಗೆ ತಕ್ಕಂತೆ ಯೋಜನೆನೂ ದೊಡ್ಡದಾಗಿರ್ಬೇಕು.. ಆಗ ಆ ಪ್ರಮಾಣಿಕ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕುವದು ಎಂದಿದ್ದರು. 


ಸಿನಿಮಾ ಮೂಲಕ ಇಡೀ ಚಿತ್ರೋದ್ಯಮದ ಮೇಲೆ ರಾಕಿಂಗ್ ಸ್ಟಾರ್ ಯಶ್ ಅವ್ರು ಬೀರಿರೋ ಈ ಪ್ರಭಾವವನ್ನ ಪರಿಗಣಿಸಿ, 19 ದೇಶಗಳಲ್ಲಿ ಜನಪ್ರಿಯತೆಯನ್ನ ಪಡೆದುಕೊಂಡಿರೋ ಅಂತರಾಷ್ಟ್ರೀಯ ಮಟ್ಟದ ದಿ ಜೀ ಕ್ಯೂ ಮಾಸ ಪತ್ರಿಕೆ ಆಯೋಜಿಸಿದ್ದ ದಿ ಜೀ ಕ್ಯೂ ಇಂಡಿಯಾ 50 ಅತ್ಯಂತ ಪ್ರಭಾವಶಾಲಿ ಯುವ ಭಾರತೀಯರು ಪ್ರಶಸ್ತಿ ಪಟ್ಟಿಯಲ್ಲಿ, ರಾಕಿಂಗ್ ಸ್ಟಾರ್ ಯಶ್ ಅವ್ರಿಗೆ 2019ರ ಭಾರತೀಯ ಚಿತ್ರರಂಗದ ಅತ್ಯಂತ ಪ್ರಭಾವ ಶಾಲಿ ಯುವ ಭಾರತೀಯ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಬಾಲಿವುಡ್​ನ ಸ್ಟಾರ್ ಡೈರೆಕ್ಟರ್ ಕಮ್ ಪ್ರೊಡ್ಯೂಸರ್ ಕರಣ್ ಜೋಹರ್, ಜೀ ಕ್ಯೂ 2019ರ 50 ಪ್ರಭಾವಶಾಲಿ ಯುವ ಭಾರತೀಯರ ಸಾಲಲ್ಲಿ ಸಿನಿಮಾ ಕ್ಷೇತ್ರದ ಅತ್ಯಂತ ಪ್ರಭಾವ ಶಾಲಿ ಯುವ ಸೂಪರ್ ಸ್ಟಾರ್ ರಾಕಿಂಗ್ ಸ್ಟಾರ್ ಗೆ ಪ್ರಶಸ್ತಿ ನೀಡಿ ಗೌರವಿಸಿದ್ದು ವಿಶೇಷ. ಇನ್ನು ಯಶ್​ರ ಬೆಳವಣಿಗೆಗೆ ಖುದ್ದು ಕರಣ್ ಜೋಹಾರ್ ಎಂದಿರೋದು ಹೆಮ್ಮೆಯ ವಿಚಾರ. 
ಕರಣ್​ಗೆ ಸೌತ್ ಇಂಡಸ್ಟ್ರಿ ಗತ್ತು ಪರಿಚಯಿಸಿದ ಅಣ್ತಮ್ಮ.

ಏಪ್ರಿಲ್ 2020ಗೆ KGF ಚಾಪ್ಟರ್ 2 ರಿಲೀಸ್ ಫಿಕ್ಸ್. ವೇದಿಕೆಯಲ್ಲಿ ಮಾತನಾಡಿದ ಯಶ್, ನಿಮ್ಮ ನಿರೀಕ್ಷೆ ಹುಸಿಯಾಗಲ್ಲ. ನೀವು ಕೆಜಿಎಫ್ ಮೊದಲ ಭಾಗದಲ್ಲಿ ನೋಡಿದ್ದರ ಐದು ಪಟ್ಟು ಜೋರಿರಲಿದೆ ಚಾಪ್ಟರ್ 2 ಅಂತ ವಿಶ್ವಾಸದ ಮಾತಾಡಿದ್ದಾರೆ.



మరింత సమాచారం తెలుసుకోండి: