ಕರುನಾಡಿನ ಹೆಮ್ಮೆಯ ನಟ ಸಾರ್ವಭೌಮ ರಾಜ್ ಕುಮಾರ್ ಅವರ ಮಗ ಇದೀಗ ವಿಲನ್ ಆಗಿದ್ದಾರೆ. ಅದು ಬೇರಾರು ಅಲ್ಲ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಅವರಿಗೆ ಏನಾಯ್ತು ಇದ್ದಕ್ಕಿದ್ದಂತೆ ಚೆನ್ನಾಗಿಯೇ ಇದ್ರಲ್ವಾ  ಎಂದು ಆಶ್ಚರ್ಯ ಆಯ್ತಾ! ಡೋಂಟ್ ವರಿ. ಏನಾಯ್ತು ಅಂತ ನಾವ್ ಹೇಳ್ತೀವಿ. 


'ಹ್ಯಾಟ್ರಿಕ್‌ ಹೀರೋ' ಶಿವರಾಜ್‌ಕುಮಾರ್ ಮಾಡಿರುವ ಬಹುತೇಕ ಸಿನಿಮಾಗಳು ಫ್ಯಾಮಿಲಿ ಸೆಂಟಿಮೆಂಟ್ ಆಗಿರುತ್ತಿದ್ದವು. ಎಲ್ಲ ಥರದ ಪಾತ್ರಗಳನ್ನು ಅವರು ಮಾಡಿದ್ದಾರೆ. ಆದರೆ, ವಿಲನ್ ಆಗಿ ಕಾಣಿಸಿಕೊಂಡಿದ್ದು ಇಲ್ಲವೇ ಇಲ್ಲ. ಈಗ ಅಂಥದ್ದೊಂದು ಪ್ರಯತ್ನಕ್ಕೂ ಶಿವಣ್ಣ ಕೈ ಹಾಕಿದ್ದಾರೆ. ಈ ಬಾರಿ ಅವರು ನೆಗೆಟಿವ್ ಶೇಡ್‌ನ ಪಾತ್ರ ಮಾಡೋಕೆ ಸಜ್ಜಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಯಾವುದು ಗೊತ್ತಾ ಆ ಚಿತ್ರ. 


ಇದರ ಹಿಂದೆ ನಿರ್ದೇಶಕ ಯೋಗಿ ಜಿ. ರಾಜ್‌ ಅವರ 'ಬಂಗಾರದ ಸನ್‌ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿ ಶಿವರಾಜ್‌ಕುಮಾರ್ ನಟಿಸಿದ್ದರು. ಈಗ ಮತ್ತೊಮ್ಮೆ ಯೋಗಿ ಜತೆ ಶಿವಣ್ಣ ಕೈ ಜೋಡಿಸಿದ್ದಾರೆ. ಸದ್ಯದ ಸ್ಕ್ರಿಪ್ಟ್ ಹಂತದಲ್ಲಿರುವ ಈ ಸಿನಿಮಾದಲ್ಲಿ ಶಿವಣ್ಣ ವಿಲನ್‌ ಶೇಡ್‌ ಇರುವ ಪಾತ್ರವನ್ನು ಮಾಡಲಿದ್ದಾರಂತೆ. ಕೆ.ಆರ್‌.ಜಿ ಸ್ಟುಡಿಯೋಸ್‌ ಮೂಲಕ ಸಿನಿಮಾ ವಿತರಣೆ ಮಾಡುತ್ತಿದ್ದ ಕಾರ್ತಿಕ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ನಿರ್ಮಾಪಕನಾಗಲಿದ್ದಾರೆ.


ಸೆಂಚುರಿ ಸ್ಟಾರ್ ಶಿವಣ್ಣ ಫಿಟ್‍ನೆಸ್ ನೋಡಿ ಅಭಿಮಾನಿಗಳು ಥ್ರಿಲ್ತುಂ ಬ ಡಿಫರೆಂಟ್ ಆದ ಪಾತ್ರ. 40-45ರ ವಯಸ್ಸಿನ ಪಾತ್ರ ನನ್ನದು. ಆ ಬಗ್ಗೆ ಚರ್ಚೆಗಳು ಮುಂದುವರಿದಿವೆ. 'ಓಂ'ನಲ್ಲಿ ಪಾಸಿಟಿವ್‌ ಅಂಶ ಇತ್ತು. ಇದರಲ್ಲಿ ಪಾಸಿಟಿವ್ ತೋರಿಸದೆ ಹೇಗೆ ಮಾಡಬಹುದು ಅನ್ನೋದನ್ನು ಟ್ರೈ ಮಾಡ್ತಾ ಇದಿವಿ. ಗೆಟಪ್‌ ಬಗ್ಗೆ ಈಗಲೇ ಏನೂ ಹೇಳೋಕೆ ಆಗಲ್ಲ. ಮುಂದೇನು ಮಾಡಬಹುದು, ನಮ್ಮಿಂದ ಏನೆಲ್ಲ ಸಾಧ್ಯವಾಗುತ್ತೋ ಅದನ್ನೆಲ್ಲ ಮಾಡೋಣ. ಇದುವರೆಗೂ ಪಾಸಿಟಿವ್ ಪಾತ್ರ ಮಾಡಿರುವ ನನಗೆ ವಿಲನ್‌ ಮಾಡೋದು ಒಂದು ರೀತಿಯ ಚಾಲೆಂಜ್. ಅವನು ವಿಲನ್ ಆಗೋಕು ಕಾರಣ ಇರತ್ತೆ. ಅದನ್ನು ಸಿನಿಮಾ ನೋಡಬೇಕು' ಎಂದು ಶಿವರಾಜ್ ಕುಮಾರ್ ತಿಳಿಸಿದ್ದಾರೆ. 


మరింత సమాచారం తెలుసుకోండి: