ಐಪೋನ್, ಸಾಮಾನ್ಯವಾಗಿ ಈ ಹೆಸರು ಕೇಳೇ ಇರ್ತೀವಿ. ಮೊಬೈಲ್ ಫೋನ್. ತುಂಬಾ ಸ್ಮಾರ್ಟ್ ಎಂದು. ಆದರೆ ಕನ್ನಡ ಚಿತ್ರರಂಗದಲ್ಲಿ ಹೊಸ ಪ್ರಯೋಗವೊಂದು ನಡೆಯುತ್ತಿದೆ. ಅದೇ ಐಫೋನ್. 


ಸದ್ಯಕ್ಕೆ ಐ ಫೋನ್‌ನಲ್ಲಿ ಚಿತ್ರೀಕರಿಸಿರುವ ಚಿತ್ರದ ಮೇಕಿಂಗ್‌ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಚಿತ್ರಕ್ಕೆ “ಬಿ ಪಾಸಿಟಿವ್‌’ ಎಂಬ ಸಬ್ ಟೈಟಲ್ ಇದೆ. 
ಆಧುನಿಕ ಕಾಲದ ತಂತ್ರಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಂಡ ತೃಪ್ತಭಾವ ಚಿತ್ರತಂಡದ್ದು. ಸದ್ಯಕ್ಕೆ ಸಿನಿಮಾ ಪೂರ್ಣಗೊಂಡಿದ್ದು, ಇಷ್ಟರಲ್ಲೇ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಈ ಚಿತ್ರಕ್ಕೆ ಆರವ್‌ ಗೌಡ ಹೀರೋ. ಅಭಿಷೇಕ್‌ ಜೈನ್‌ ನಿರ್ದೇಶನದ ಜೊತೆಯಲ್ಲಿ ಒಂದು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅದೇನೆ ಇರಲಿ, ಸುಮಾರು 40 ಕ್ಕೂ ಹೆಚ್ಚು ಮಂದಿ ನಿರ್ಮಾಪಕರು ಈ ಕಥೆ ಕೇಳಿ, ಐಫೋನ್‌ನಲ್ಲಿ ಸಿನಿಮಾ ಮಾಡುವ ವಿಷಯ ಕೇಳಿ ರಿಜೆಕ್ಟ್ ಮಾಡಿದ್ದ ಚಿತ್ರ ಈಗ ಒಂದಷ್ಟು ಸುದ್ದಿ ಮಾಡುತ್ತಿರುವುದಕ್ಕೆ ನಿರ್ದೇಶಕ ಅಭಿಷೇಕ್‌ ಗೆ ಸಂತಸವಿದೆ. 


ಈ ಹೊಸ ಪ್ರಯೋಗವನ್ನು ಪರಭಾಷೆಯಲ್ಲೂ ಮಾಡಿ ಎಂದು ಈಗಾಗಲೇ ನಿರ್ಮಾಪಕರೊಬ್ಬರು ಬಂದಿದ್ದರೂ, ನಿರ್ದೇಶಕರು ಮಾತ್ರ ಸದ್ಯ, ಕನ್ನಡದಲ್ಲೇ ಹೆಚ್ಚು ಗಮನಿಸುವ ಸಿನಿಮಾ ಮಾಡುವ ಯೋಚನೆ ಮಾಡಿರುವುದಾಗಿ ಹೇಳಿ ಆ ಅವಕಾಶ ನಿರಾಕರಿಸಿದ್ದಾರೆ. ಇನ್ನು, “ಡಿಂಗ’ನ ಕಥೆ ಕುರಿತು ಹೇಳುವುದಾದರೆ, ಇಲ್ಲಿ ಒಬ್ಟಾತ ಕ್ಯಾನ್ಸರ್‌ ಪೀಡಿತ. ಅವನು ಸಾಯುವ ಮುನ್ನ ತಾನು ಪ್ರೀತಿಯಿಂದ ಸಾಕಿರುವ ಶ್ವಾನವೊಂದನ್ನು, ತನ್ನಷ್ಟೇ ಅದನ್ನೂ ಪ್ರೀತಿಸುವ ವ್ಯಕ್ತಿಯೊಬ್ಬನಿಗೆ ಕೊಡಬೇಕು ಎಂಬುದು ಅವನ ಕೊನೆಯ ಆಸೆ. ಕೇವಲ ಆ ಶ್ವಾನವನ್ನು ಇಷ್ಟಪಟ್ಟರೆ ಸಾಲದು. ಅದಕ್ಕೂ ಹಾಗು ಶ್ವಾನ ಪಡೆಯುವ ವ್ಯಕ್ತಿಯ ಜಾತಕ ಹೊಂದಿಕೆಯಾಗಬೇಕಂತೆ. 


ಚಿತ್ರದಲ್ಲಿ ಅನುಷಾ ನಾಯಕಿಯಾಗಿದ್ದು, ಅವರಿಗಿಲ್ಲಿ ಎರಡು ಶೇಡ್‌ ಪಾತ್ರ ಇದೆಯಂತೆ. ಉಳಿದಂತೆ ಚಿತ್ರದಲ್ಲಿ ರಾಘು ರಮಣಕೊಪ್ಪ, ನಾಗೇಂದ್ರ ಷಾ, ವಿಜಯ್‌ ಈಶ್ವರ್‌ ಕಾಣಿಸಿಕೊಂಡಿದ್ದಾರೆ. ನಾಗೇಂದ್ರಪ್ರಸಾದ್‌ ಬರೆದಿರುವ ಶೀರ್ಷಿಕೆ ಗೀತೆಗೆ ಅರ್ಜುನ್‌ಜನ್ಯ, ನವೀನ್‌ಸಜ್ಜು ಹಾಗು ಸಂಚಿತ್‌ ಹೆಗ್ಡೆ ಧ್ವನಿಗೂಡಿಸಿದ್ದಾರೆ. ಸುದೋರಾಯ್‌ ಸಂಗೀತವಿದೆ. ಜಯಂತ್‌ ಮಂಜುನಾಥ್‌ ಛಾಯಾಗ್ರಹಣವಿದೆ. ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ. ಶ್ರೀಮಾಯಕಾರ ಪೊ›ಡಕ್ಷನ್ಸ್‌ ಮೂಲಕ ಚಿತ್ರ ನಿರ್ಮಿಸಲಾಗಿದೆ. 


మరింత సమాచారం తెలుసుకోండి: