ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರ ಪಾಪ್ ಕಾರ್ನ್ ಟೈಗರ್. ಇದೀಗ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಘಟನೆಯೊಂದು ಸಂಭವಿಸಿದೆ. ಅದು ಏನ್ ಅಂತ ಕೇಳಿದ್ರೆ ನೀವು ಕೂಡ ಶಾಕ್ ಆಗ್ತೀರಾ. ಹೌದು ಅಂತಹದ್ದು  ಏನಾಯಿತು ಎಂದು ಪ್ರೇಕ್ಷಕರಿಗೆ ಕುತೂಹಲ ಉಂಟಾಗಿದ್ದು, ಅದನ್ನು ನಾವ್ ಹೇಳ್ತೀವಿ ನೋಡಿ. 


ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಭರ್ಜರಿ ಯಶಸ್ಸಿನ ನಂತರ ಸೂರಿ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಚಿತ್ರೀ ಕರಣ ಮುಗಿದಿದ್ದು, ಚಿತ್ರತಂಡ ಇದೀಗ ಪ್ರೀ ಪೊಡಕ್ಷನ್ ಕೆಲಸಗಳಲ್ಲಿ ತುಂಬಾ ಬಿಸಿಯಾಗಿರುವ ಘಟನೆಯಾಗಿದೆ. ಈ ನಡುವೆಯೇ ಚಿತ್ರತಂಡದಿಂದ ಒಂದೊಂದೇ ವಿಚಾರಗಳು ಹೊರಬರುತ್ತಿವೆ. ಈಗ ಚಿತ್ರದಲ್ಲಿ ನವೀನ್‌ ವಿಭಿನ್ನ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಅಷ್ಟಕ್ಕೂ ಯಾವ ನವೀನ್‌ ಎಂದರೆ “ಜಾಕಿ’ ಭಾವನಾ ಬಗ್ಗೆ ಹೇಳಬೇಕು. ನಟಿ ಭಾವನಾ ಪತಿ ನವೀನ್‌ “ಪಾಪ್‌ಕಾರ್ನ್ ಮಂಕಿ ಟೈಗರ್‌’ ಚಿತ್ರದಲ್ಲಿ ನಟಿಸಿದ್ದು, ಈಗ ಅವರ ಲುಕ್‌ ಬಿಡುಗಡೆಯಾಗಿದೆ. 


ಟಗರು ಚಿತ್ರದಲ್ಲಿ ಕಾಕ್ರೋಚ್‌ ಪಾತ್ರ ಮಾಡಿದ್ದ ಸುಧಿ ಜೊತೆ ಕೂದಲು ಬಿಟ್ಟುಕೊಂಡು ಬನಿಯನ್‌ನಲ್ಲಿ ಕುಳಿತಿರುವ ಫೋಟೋ ಹೊರಬಂದಿದೆ. ಈ ಮೂಲಕ ನವೀನ್‌ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿರೋದು ಪಕ್ಕಾ ಆಗಿದೆ. “ಟಗರು’ ಚಿತ್ರದಲ್ಲಿ “ಡಾಲಿ’ ಪಾತ್ರದ ಮೂಲಕ ಸುದ್ದಿಯಾದ ಧನಂಜಯ್‌, ಪುನಃ ಸೂರಿ ಅವರ ನಿರ್ದೇಶನದ ಚಿತ್ರದಲ್ಲಿ ಹೀರೋ ಆಗಿರುವುದರಿಂದ ಸಹಜವಾಗಿಯೇ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಯೂ ಇದ. ಅದರ ಜೊತೆಗೆ ಈ ಚಿತ್ರವನ್ನು ಸುಧೀರ್‌ ನಿರ್ಮಿಸಿದ್ದಾರೆ. ಹಲವು ವರ್ಷಗಳಿಂದಲೂ ಅವರು ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿ ಕೆಲಸ ಮಾಡಿರುವ ಸುಧೀರ್‌ ಅವರಿಗೆ ಇದು ಮೊದಲ ಚಿತ್ರ. ಈ ಚಿತ್ರಕ್ಕೆ ಸೂರಿ ಯವರ ಸಂಭಾಷಣೆ ಇದೆ. ಚಿತ್ರದಲ್ಲಿ ನಿವೇದಿತಾ, ಅಮೃತಾ, ಸಪ್ತಮಿ ಅವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿದ್ದು, ಚಿತ್ರದ ಬಿಡುಗಡೆಗಾಗಿ ಕಾದು ಕುಳಿತಿದ್ದಾರೆ. 


మరింత సమాచారం తెలుసుకోండి: