ಟಾಲಿವುಡ್ ನ ಮಾಸ್ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ರವಿತೇಜ ಇದೀಗ ಮತ್ತೊಮ್ಮೆ ಕಮ್ ಬ್ಯಾಕ್ ಆಗಿದ್ದಾರೆ. ಪ್ರಸ್ತುತ ಮಾಸ್ ಅಂಡ್ ಕ್ಲಾಸ್ ಲುಕ್ ನಲ್ಲಿಯೇ ಮತ್ತೊಮ್ಮೆ ಮಿಂಚಲು ಸಿದ್ಧವಾಗಿದ್ದಾರೆ. ಹೌದು, ಆ ಚಿತ್ರಕ್ಕೀಗ  ತೆಲುಗಿನ ಟಾಪ್ ನಟಿ ಆಯ್ಕೆಯಾಗಿದ್ದಾರೆ. ಅದು ಯಾರು ಗೊತ್ತಾ. 


ಟಾಲಿವುಡ್ ಸ್ಟಾರ್ ನಟ ರವಿ ತೇಜಗೆ ಜತೆಯಾಗುವ ಮೂಲಕ ನಟಿ ಶ್ರುತಿ ಹಾಸನ್ ಟಾಲಿವುಡ್​ಗೆ ಕಮ್ ಬ್ಯಾಕ್ ಆಗಿದ್ದಾರೆ. ರವಿತೇಜ ಅಭಿನಯಿಸಲಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಶ್ರುತಿ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಎರಡು ವರ್ಷಗಳ ಬಳಿಕ ಶ್ರುತಿ ಹಾಸನ್ ತೆಲುಗು ಚಿತ್ರರಂಗಕ್ಕೆ ಮರಳಿದಂತಾಗಿದೆ. ಖ್ಯಾತ ನಿರ್ದೇಶಕ ಗೋಪಿಚಂದ್ ಮಲಿನೇನಿ ಆಕ್ಷನ್-ಕಟ್ ಹೇಳಲಿರುವ ಈ ಸಿನಿಮಾದಲ್ಲಿ ರವಿತೇಜ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇವರಿಬ್ಬರ ಜೋಡಿಯ ಹಿಂದಿನ ಸಿನಿಮಾಗಳಾದ ‘ಡಾನ್ ಸೀನು’ ಹಾಗೂ ‘ಬಲುಪು’ ಬಾಕ್ಸಾಫೀಸ್​ನಲ್ಲಿ ಗೆದ್ದಿದ್ದವು. ಹೀಗಾಗಿ ಮತ್ತೆ ಇವರದೇ ಕಾಂಬಿನೇಷನ್​ನಲ್ಲಿ ಬರುತ್ತಿರುವ ಹೊಸ ಸಿನಿಮಾ ಕುರಿತು ನಿರೀಕ್ಷೆ ಹೆಚ್ಚಾಗಿದೆ. ಆದ್ದರಿಂದ ಅಭಿಮಾನಿಗಳಿಗೆ ಈಗಲೇ ನಿರೀಕ್ಷೆ ಗರಿಗೆದರಿದೆ ಎಂಬುದು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೇಳಿ ಬರುತ್ತಿದೆ. 


ಗೋಪಿಚಂದ್ ಜತೆ ರವಿತೇಜ ಮತ್ತೊಂದು ಸಿನಿಮಾ ಮಾಡಲಿರುವುರುವುದು ಈಗಾಗಲೇ ಬಹಿರಂಗವಾಗಿದ್ದರೂ ನಾಯಕಿಯ ಪಾತ್ರವನ್ನು ಯಾರು ಮಾಡುತ್ತಾರೆ ಎಂಬುದು ನಿಗದಿ ಆಗಿರಲಿಲ್ಲ. ಇದೀಗ ನಂಬಲರ್ಹ ಮೂಲಗಳಿಂದಲೇ ಈ ವಿಷಯ ಬಹಿರಂಗವಾಗಿದೆ. ಶ್ರುತಿ ಸದ್ಯ ವಿಜಯ್ ಸೇತುಪತಿ ಅಭಿನಯದ ತಮಿಳು ಸಿನಿಮಾ ‘ಲಾಭಂ’ ಹಾಗೂ ಮಹೇಶ್ ಮಾಂಜ್ರೇಕರ್ ಅವರ ‘ಪವರ್’ ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. 


ಟಾಲಿವುಡ್ ಇತಿಹಾಸದಲ್ಲಿ ತನ್ನದೇ ಆದ ಮಾಸ್ ಮಹಾರಾಜ ಎಂಬ ಬಿರುದು ಹೊಂದಿದ್ದರು ಸಹ ರವಿತೇಜ ಅವರ ಅನೇಕ ಸಿನಿಮಾಗಳು ಹಿಟ್ ಆದರೂ ಸಹ ಕೆಲವು ಪ್ಲಾಪ್ ಆಗಿವೆ. ಹೌದು, ಆದರೆ ಎಂದಿಗೂ ಎದೆಗುಂದದ ರವಿತೇಜ ಅವರು ಇಂದಿಗೂ ಟಾಲಿವುಡ್ ನ ಚಿತ್ರಗಳಲ್ಲಿ ನಟಿ ಸುತ್ತಲೇ ಇದ್ದಾರೆ. ಆದರೂ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ.


మరింత సమాచారం తెలుసుకోండి: