ಸ್ಯಾಂಡಲ್ ವುಡ್ ನಲ್ಲೀ ಇತ್ತೀಚೆಗೆ ಹೊಸ ಪ್ರಯತ್ನಗಳು ನಡೆಯುತ್ತಲೇ ಸಾಗುತ್ತಿದೆ.  ಇದೀಗ ಈ ಸಾಲಿನಲ್ಲಿ ಸೇರ್ಪಡೆಯಾಗಿರುವುದು ಕನ್ನಡ್ ಗೊತ್ತಿಲ್ಲ. ಸದ್ಯಕ್ಕೆ ಟೀಸರ್ ಬಿಡುಗಡೆ ಆಗಿದ್ದು, ಎಲ್ಲವು ಅವರವರ ಭಾವಕ್ಕೆ. ಎಂಬಂತಾಗಿದೆ. ಮಾತು ಮಾತಿಗೂ ‘ಮುಝೇ ಕನ್ನಡ್ ಗೊತ್ತಿಲ್ಲ..’ ಎನ್ನುತ್ತಿದ್ದರು. ನಮ್ಮ ನೆಲದಲ್ಲಿ ಇದ್ದುಕೊಂಡೇ ಇಷ್ಟೆಲ್ಲ ಮಾತನಾಡುತ್ತಿದ್ದಾರಲ್ಲ ಎಂಬ ಬೇಸರವೂ ಇತ್ತು. ಸದ್ಯ ಈಗಲೂ ಆ ಸ್ಥಿತಿ ಬೆಂಗಳೂರಿನಲ್ಲಿದೆ. ಅಂಥವರಿಗೆ ಬಿಸಿ ಮುಟ್ಟಿಸಲು ‘ಕನ್ನಡ್ ಗೊತ್ತಿಲ್ಲ’ ಸಿನಿಮಾ ಮಾಡಿದ್ದೇವೆ’ ಎನ್ನುತ್ತಾರೆ ನಟ, ನಿರ್ದೇಶಕ, ಮಯೂರ ರಾಘವೇಂದ್ರ.


ಇತ್ತೀಚೆಗಷ್ಟೇ ‘ಕನ್ನಡ್ ಗೊತ್ತಿಲ್ಲ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಆದರೆ, ಚಿತ್ರದ ಶೀರ್ಷಿಕೆಗೂ ಟ್ರೇಲರ್​ನಲ್ಲಿನ ಅಂಶಕ್ಕೆ ಒಂದೇ ಒಂದು ಸಣ್ಣ ಸುಳಿವನ್ನೂ ನಿರ್ದೇಶಕರು ನೀಡಿಲ್ಲ. ‘ಆ ಎಲ್ಲ ಕೌತುಕವನ್ನು ಪೂರ್ತಿ ಸಿನಿಮಾ ನೋಡಿಯೇ ಸವಿಯಬೇಕು’ ಎನ್ನುತ್ತಾರವರು. ಹಾಗಾದರೆ ಏನಿದು ‘ಕನ್ನಡ್ ಗೊತ್ತಿಲ್ಲ’? ‘ತನ್ನ ಭಾಷೆಗೆ ಧಕ್ಕೆ ಬರುವಂಥ ಸಂದರ್ಭ ಬಂದರೆ ಒಬ್ಬ ಕನ್ನಡದ ಭಕ್ತ ಏನು ಮಾಡುತ್ತಾನೆ ಎಂಬುದರ ಸುತ್ತ ಈ ಸಿನಿಮಾ ಸಾಗಲಿದೆ. ಈ ಚಿತ್ರದ ನಾಯಕ ಕನ್ನಡ, ನಾಯಕಿ ಕನ್ನಡತಿ ಹರಿಪ್ರಿಯಾ. ಸರಣಿ ಕೊಲೆಗಳೂ ಇಲ್ಲಿ ನಡೆಯುತ್ತವೆ. ಕ್ರೖೆಂ ಥ್ರಿಲ್ಲರ್ ಹಾದಿಯಲ್ಲಿ ಸಿನಿಮಾ ತೆರೆದುಕೊಳ್ಳುತ್ತದೆ’ ಎಂದು ಚಿತ್ರದ ಬಗ್ಗೆ ವಿವರಣೆ ನೀಡುವ ನಿರ್ದೇಶಕ ಮಯೂರ ಅವರು, ಇಡೀ ಸಿನಿಮಾ ಕನ್ನಡ ಭಾಷೆ ಮತ್ತು ಅದರ ಉಳಿವಿನ ಬಗ್ಗೆಯೇ ಮಾತನಾಡಲಿದೆ ಎನ್ನುತ್ತಾರೆ.


ಪ್ರಸ್ತುತ ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಮಾತೃಭಾಷೆ ಕನ್ನಡದ ಸ್ಥಿತಿ ಹೇಗಿದೆ ಎಂಬುದನ್ನು ಹೇಳುವ ಪ್ರಯತ್ನ ನಿರ್ದೇಶಕರಿಂದ ಆಗಿದೆಯಂತೆ. ‘ಬೆಂಗಳೂರಿನಲ್ಲಿ ಹಲವು ಭಾಷೆಗಳ ಜನರಿದ್ದಾರೆ. ನಿತ್ಯ ಅವರವರ ಭಾಷೆಯಲ್ಲಿ ವ್ಯವಹರಿಸುತ್ತ, ಸಂವಹನ ಮಾಡುತ್ತ ಚೆನ್ನಾಗಿಯೇ ಇದ್ದಾರೆ.  ಈ ಪ್ರಸ್ತುತ ವಿಷಯಕ್ಕೆ ಸಿನಿಮಾ ಮೂಲಕ ಸಾಣೆ ಹಿಡಿಯುವ ಪ್ರಯತ್ನ ಮಾಡಿದ್ದೇವೆ. ಹೀಗೇ ಬಿಟ್ಟರೆ, ನಾವು ಎಚ್ಚೆತ್ತುಕೊಳ್ಳದಿದ್ದರೆ ಮುಂದೇನಾಗುತ್ತದೆ ಎಂಬುದನ್ನು ಹೇಳಿಲ್ಲ ಎಂದಿದ್ದಾರೆ ನಿರ್ದೇಶಕರು. ಚಿತ್ರವು ಕನ್ನಡಿಗರ ಮನಸ್ಸಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂದು ಸಹ ಹೇಳಿದ್ದಾರೆ.


మరింత సమాచారం తెలుసుకోండి: