ಯಾಮಿ ಗುಪ್ತಾ ಅವರ ರಿಯಲ್ ಲೈಪ್ ಪಾರ್ಟ್ ನರ್ ಆಗುವ ತನ್ನ ಪ್ರಿಯಕರ ಈಗಿರಬೇಕೆಂದು ತಿಳಿಸಿದ್ದು, ಇಂತಹ ಹುಡುಗ ಸಿಕ್ಕರೇ ಖಂಡಿತ ಮದುವೆಯಾಗುವುದಾಗಿ ತಿಳಿಸಿದ್ದಾರೆ. ಹೌದು, ಯಾರು ಈ ಏನಿದು ಪ್ರಿಯಕರನ ಹುಡುಕಾಟ ಎಂದು ನಾವು ಹೇಳ್ತೀವಿ ನೋಡಿ. 


'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಯಾಮಿ ಗುಪ್ತಾ ರಿಯಲ್ ಲೈಫ್‌ ಪಾರ್ಟನರ್‌ ಹೀಗಿರಬೇಕೆಂದು ಹೇಳಿದ್ದು, ಅದನ್ನು ಕೇಳಿದ್ರೆ ನೀವು ಸಹ ಶಾಕ್ ಆಗೋದು ಪಕ್ಕಾ. 'ಬಾಲಾ' ಚಿತ್ರದ ಮೂಲಕ ಬಿ-ಟೌನ್‌ಗೆ ಕಮ್‌ ಬ್ಯಾಕ್ ಮಾಡುತ್ತಿರುವ ಯಾಮಿ ಗುಪ್ತಾ ಯಶಸ್ಸಿನ ಹಾದಿಯಲ್ಲಿದ್ದಾರೆ. ವಿಭಿನ್ನ ಚಿತ್ರಕಥೆ ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಚಿತ್ರ ರಿಲೀಸ್ ಅಗಿ ನಾಲ್ಕು ದಿನಗಳಲ್ಲಿ 8.24 ಕೋಟಿ ಕಲೆಕ್ಷನ್ ಮಾಡಿದ್ದು ಒಂದು ವಾರದಲ್ಲಿ 52.21 ಕೋಟಿ ಗಿಟ್ಟಿಸಿಕೊಂಡಿದೆ. ಚಿತ್ರದ ಸಕ್ಸಸ್ ಮೀಟ್‌ನಲ್ಲಿ ಭಾಗಿಯಾಗಿದ್ದ ಯಾಮಿ ರಿಯಲ್ ಲೈಫ್‌ ಹುಡುಗ ಹೇಗಿರಬೇಕು ಎಂದು ಹೇಳಿದ್ದಾರೆ. ನಿಜ ಜೀವನದಲ್ಲೂ ಬಾಲ್ಡ್‌ ಇರುವ ಹುಡುಗ ಬಂದ್ರೆ ಒಪ್ಪಿಕೊಳ್ಳುತ್ತೀರಾ ಎಂದು ನಿರೂಪಕಿ ಪ್ರಶ್ನಿಸಿದಾಗ ಯಾಮಿ ಕೊಟ್ಟ ಉತ್ತರ ಶಾಕಿಂಗ್. 'ಒಪ್ಪಿಕೊಳ್ಳುತ್ತೇನೆ. ಬಾಲ್ಡ್‌ ಗಂಡಸರು ತುಂಬಾ ಕೂಲ್. ನೋಡಲು ತುಂಬಾ ಆಕರ್ಷಕವಾಗಿ ಕಾಣುತ್ತಾರೆ. ಚಿತ್ರದ ಉದ್ದೇಶವೇ ಬೇರೊಬ್ಬರು ನಿಮ್ಮನ್ನು ಪ್ರೀತಿಸುವ ಮುನ್ನ ಮೊದಲು ನಮ್ಮನ್ನು ನಾವು ಇಷ್ಟ ಪಡುವುದು' ಎಂದಿದ್ದಾರೆ. ಇದರ ಬೆನ್ನಲ್ಲೇ ಗಡ್ಡ ಮೀಸೆಯ ಹುಡುಗರು ನಾನು ಎಂದು ಸಹ ಕಾಮೆಂಟ್ ಮಾಡಿದ್ದಾರೆ. 


ಬಾಲಾ ಚಿತ್ರದಲ್ಲಿ ಪ್ರೀ ಮೆಚ್ಯೂರ್ ಬಾಲ್ಡ್‌ನೆಸ್‌ಯಿಂದ ನಟ ಆಯುಷ್ಮಾನ್ ನರಳುತ್ತಿದ್ದು ಸಾಮಾಜಿಕ ಒತ್ತಡದಿಂದ ಧೈರ್ಯ ಕಳೆದುಕೊಳ್ಳುತ್ತಾರೆ. ಅದನ್ನು ಎದುರಿಸಿ ಜೀವನ ಹೇಗಿರುತ್ತದೆ ಎಂದು ತೋರಿಸಲಾಗಿದೆ. ಕೌಶಿಕ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅಭಿಮಾನಿಗಳು ಪ್ರೀತಿಯ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಯಾಮಿ ಟಿಕ್‌ಟಾಕ್‌ ಮಾಡುವ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪಡ್ಡೆ ಹೈಕಳ ಮನ ಗೆದ್ದಿದ್ದರು. ಇದೀಗ ತನ್ನ ಪ್ರಿಯಕರನ ಹುಡುಕಾಟ ದಲ್ಲಿ ಫುಲ್ ಬ್ಯೂಸಿ ಯಾಗಿದ್ದಾರೆ.


మరింత సమాచారం తెలుసుకోండి: