ಸೀಸನ್ ಪೂರ್ತಿ ಗಾಸಿಪ್ ಗಳಿಂದಲೇ ಸುದ್ದಿ ಯಾಗುವ ಬಿಗ್ ಬಾಸ್ ನಲ್ಲಿ ಇದೀಗ ಮುತ್ತುಗಳ ಸುರಿಮಳೆ ಸುರಿಯುತ್ತಿದೆ. ಯಾರು ಬೇಕಾದ ರಲ್ಲಿ ಮುದ್ದು ಕೊಡುವುದರಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಇದೀಗ ಗ್ಯಾಪ್ ನಲ್ಲಿಯೇ ಭೂಮಿ ಕೆನ್ನೆಗೂ ಮುತ್ತಿಟ್ಟಿರುವ ಘಟನೆ ನಡೆದಿದೆ. ಅದು ಯಾರು, ಏನಿದು ಸ್ಟೋರಿ, ಇಲ್ಲಿದೆ ನೋಡಿ ಮಾಹಿತಿ. 
 
ಈ ಸಾರಿಯ ಬಿಗ್ ಬಾಸ್  ಮನೆ ಮುತ್ತಿನ ಮನೆಯಾಗಿ ಬದಲಾಗುತ್ತಿದೆ. ಕಿಶನ್ ಕಿಸ್ಸಿಂಗ್ ಸ್ಟಾರ್ ಆಗುತ್ತಿದ್ದಾರೆ. ಹಿಂದಿಯ ಇಮ್ರಾನ್ ಹಶ್ಮಿ ಅವರನ್ನೇ ಹಿಂದೆ ಹಾಕುತ್ತಿದ್ದಾರೆ. ಅವಕಾಶ ಸಿಕ್ಕಾಗ ಹೆಣ್ಣು ಮಕ್ಕಳಿಗೆ ಒಂದು ಮುತ್ತು ನೀಡಿಯೇ ಹೆಜ್ಜೆ ಹಿಂದಕ್ಕೆ ಇಡೋದು ಕಿಶನ್ ಸ್ಪೆಷಾಲಿಟಿ. ಸುಂದರಿ ಚಂದನಾಳ ಸಮಾಧಾನ ಪಡಿಸುವ ಸಂದರ್ಭ ಕಿಶನ್ ಕೊಟ್ಟ ಕಿಸ್ ದೊಡ್ಡ ಸುದ್ದಿಯಾಗಿತ್ತು. ಅದಾದ ಮೇಲೆ ಹೆಣ್ಣು ಮಕ್ಕಳೆ ಪರಸ್ಪರ ಕಿಸ್ ಕೊಟ್ಟುಕೊಂಡಿದ್ದರು.
 
ಇದನ್ನು ಕಂಡ ಗಾಯಕ ವಾಸುಕಿ ವೈಭವ್ ಹೌಹಾರಿದ್ದರು. ಒಂದಲ್ಲ ಎರಡೆರಡು ಸಾರಿ ಭೂಮಿ ಶೆಟ್ಟಿ ಮತ್ತು ದೀಪಿಕಾ ತುಟಿಗೆ ತುಟಿ ಒತ್ತಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಮುತ್ತಿನ ಕತೆ ಅನಾವರಣವಾಗಿದೆ. ಕಿಸ್ ವಿಚಾರವನ್ನೇ ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಿಶನ್ ಭೂಮಿ ಶೆಟ್ಟಿಗೆ ಕಿಸ್ ಮಾಡಿದ್ದಾರೆ. ಒದು ಕ್ಷಣ ಮನೆ ದಂಗಾಗಿ ಹೋಗಿದೆ.  ಅವಕಾಶ ಸಿಕ್ಕಾಗ ದೀಪಿಕಾ ಕೆನ್ನೆಗೂ ಈ ಕಿಸ್ಸಿಂಗ್ ಕುಮಾರ ಮುತ್ತು ಕೊಡದೇ ಬಿಟ್ಟಿಲ್ಲ. ಮನೆಯಲ್ಲಿರುವ, ಮನೆಯಲ್ಲಿದ್ದ ಎಲ್ಲ ಹೆಣ್ಣು ಮಕ್ಕಳಿಗೂ ಮುತ್ತಿನ ರುಚಿ ತೋರಿಸಿದ್ದಾನೆ.
 
ಬಿಗ್ ಬಾಸ್ ಮನೆಯಲ್ಲಿ ದೀಪಿಕಾಗೆ ಕಿಸ್ ಕೊಡುವುದು ಮೋಸ್ಟ್ ಡಿಫಿಕಲ್ಟ್ ಟಾಸ್ಕ್ ಆಗಿತ್ತು. ಅದನ್ನೇ ಮಾಡಿದ್ದೇನೆ ಎಂದು ಕಿಶನ್ ತಮ್ಮ ಬೆನ್ನು ತಾವೇ ತಟ್ಟಿಕೊಂಡರು. ಆ ದಿನ ಟಾಸ್ಕ್ ವೊಂದನ್ನು ಗೆದ್ದಾಗ ಗ್ಯಾಪ್ ನಲ್ಲಿ ದೀಪಿಕಾಗೂ ಕಿಸ್ ಮಾಡಿದ್ಧೇನೆ ಎಂದು ಕಿಶನ್ ಸಾವರಿಸಿಕೊಂಡೆ ಹೇಳಿದರು. ಒಟ್ಟಿನಲ್ಲಿ ಮನೆಯಲ್ಲೊಬ್ಬ ಕಿಸ್ಸಿಂಗ್ ಸ್ಟಾರ್ ಹುಟ್ಟಿಕೊಂಡಿದ್ದಾನೆ. ಅಥವಾ ಆತ ಮೊದಲಿನಿಂದಲೂ ಹಾಗೇ ಇದ್ದಾನೆಯೋ ಗೊತ್ತಿಲ್ಲ. ಚಾನ್ಸ್ ಸಿಕ್ಕಿದ್ದೇ ತಡ ಹೆಣ್ಣು ಮಕ್ಕಳ ಚೆಂದ ಕೆನ್ನೆಗೊಂದು ಮುತ್ತನಿಡುವ ಕಿಶನ್ ಈಗ ಭಾರೀ ಸುದ್ದಿಯಾಗಿದ್ದಾರೆ.

మరింత సమాచారం తెలుసుకోండి: