ಕೊಡಗಿನ ಬೆಡಗಿ, ಕನ್ನಡದ ಕುವರಿ ರಶ್ಮಿಕಾ ಮಂದಣ್ಣ ಕಿರಿಕ್ ಪಾರ್ಟಿ ಮೂಲಕ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರೀ ಖ್ಯಾತಿ ಗಳಸಿದರು. ಸಿನಿಮಾದ ಜೊತೆಗೆ ರಕ್ಷಿತ್ ಶೆಟ್ಟಿ ಲವ್ವಿ ಡವ್ವಿ  ಶುರುವಾಗಿತ್ತು. ಅದಾದ ನಂತರ ತೆಲುಗಿನಲ್ಲಿ ಗೀತಾ ಗೋವಿಂದಂ ಚಿತ್ರದಲ್ಲಿ ನಟಿಸಿದ ನಂತರ ವಿಜಯ್ ದೇವರಕೊಂಡ ಜೊತೆಗೆ ಲವ್ ಶುರುಮಾಡಿಕೊಂಡಿದ್ದರು. 
 
ವಿಜಯ ದೇವರಕೊಂಡ ಜೊತೆಗೆ ಕುಚ್ ಕುಚ್ ಹೋ ರಹಾ ಹೇ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ರಶ್ಮಿಕಾ ಉತ್ತರ ಕೊಟ್ಟಿದ್ದಾರೆ. 'ಕಿರಿಕ್ ಪಾರ್ಟಿ' ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಆಮೇಲೆ ಹೆಸರು ಮಾಡಿದ್ದು ಮಾತ್ರ ತೆಲುಗು ಇಂಡಸ್ಟ್ರಿಯಲ್ಲಿ. ಕನ್ನಡಕ್ಕಿಂತ ಹೆಚ್ಚಾಗಿ ಟಾಲಿವುಡ್‌ ಕಡೆಗೆ ಹೆಚ್ಚು ಒಲವು ತೋರಿದರು. ಗೀತಾ ಗೋ ವಿಂದಂ, ಡಿಯರ್ ಕಾಮ್ರೆಡ್ ನಂತರ ಅವರ ಸ್ಟಾರೇ ಬದಲಾಗಿ ಹೋಯಿತು. ವಿಜಯ್ ದೇವರಕೊಂಡ ಜೊತೆ ಹೆಚ್ಚಾಗಿ ಕಾಣಿಸಿ ಕೊಂಡ ನಂತರ ಅವರಿಬ್ಬರೂ ಪ್ರೀತಿಸುತ್ತಿ ದ್ದಾರೆ ಎಂಬ ಸುದ್ದಿ ಓಡಾಡುತ್ತಿತ್ತು. ಈ ಬಗ್ಗೆ ರಶ್ಮಿಕಾ ಪ್ರತಿಕ್ರಿಯಿಸಿ ಹೌದು ಪ್ರೀತಿಸುತ್ತಿದ್ದೇನೆ ಎಂದಿದ್ದಾರೆ.  ಇತ್ತೀಚಿಗೆ ರಶ್ಮಿಕಾ ಮಂದಣ್ಣ ಮಾಧ್ಯಮ ಸಂವಾದದಲ್ಲಿ ಮಾತನಾಡುತ್ತಾ, ವಿಜಯ್ ದೇವರಕೊಂಡರನ್ನು ಪ್ರೀತಿಸುತ್ತಿರುವ ಗಾಸಿಪ್ ಬಗ್ಗೆ ಉತ್ತರಿಸಿದ್ದಾರೆ. 
 
'ಹೌದು. ನಾನು ಪ್ರೀತಿಸುತ್ತಿರುವುದು ನಿಜ. ಅದು ಯಾವುದೇ ವ್ಯಕ್ತಿಯಲ್ಲ. ಬದಲಾಗಿ ಸಿನಿಮಾವನ್ನು.  ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿ ಕೊಳ್ಳಬೇಕು ಎನ್ನುವ ಆಸೆಯಿದೆ.  ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಲು ಅವಕಾಶ ಸಿಕ್ಕಿದ್ದು ಖುಷಿ ಕೊಟ್ಟಿದೆ. ನಾನು ಸಿನಿಮಾ ಗಳನ್ನು ಮಾತ್ರ ಪ್ರೀತಿಸುತ್ತಿದ್ದೇನೆ' ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.  
 
ರಶ್ಮಿಕಾ ಇತ್ತೀಚಿಗೆ ಸಿನಿಮಾಗಿಂತ ಹೆಚ್ಚಾಗಿ ಟ್ರೋಲ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಬಾಲ್ಯದ ಫೋಟೋವನ್ನು ಶೇರ್ ಮಾಡಿಕೊಂಡಿದ್ದು ಅದು ಕೂಡಾ ಟ್ರೋಲ್ ಆಗಿತ್ತು. ಅದೇ ರೀತಿ ತಮಿಳು ಕಾರ್ಯಕ್ರಮವೊಂದರಲ್ಲಿ ಸಾಲುಮರದ ತಿಮ್ಮಕ್ಕ ಜೊತೆ ವೇದಿಕೆ ಮೇಲೆ ನಡೆದುಕೊಂಡ ರೀತಿಗೆ ಚರ್ಚೆಗೆ ಒಳಗಾಗಿದ್ದರು. ಇದೀಗ ಸಿನಿಮಾಗಳನ್ನು ಮಾತ್ರ ಪ್ರೀತಿಸುತ್ತೇನೆ ಎಂದು ಹೇಳುವ ಮೂಲಕ ಗಾಸಿಪ್ ಗಳಿಗೆ ತೆರೆ ಎಳೆದಿದ್ದಾರೆ.

మరింత సమాచారం తెలుసుకోండి: