ಮುಂಬೈ: ಹಾಟ್ ಹಾಟ್ ಬಿಕಿನಿ ಪೋಟೋಸ್ ಗಳಿಂದ ಸದಾ ಕಾದ ಒಂದಿಲ್ಲೊಂದು ವಿಷಯಗಳಿಂದ ಸುದ್ದಿಯಾಗುತ್ತಲೇ ಇರುವ ಹಾಟ್ ಬೆಡಗಿ ಸನ್ನಿ ಲಿಯೋನ್ ಇದೀಗ  ಬೆತ್ತಲಾಗಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡು ಭಾರೀ ಸುದ್ದಿಯಾಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಪಡ್ಡೆ ಹಾಕಿ ಮನ ಗೆದ್ದು ಬಾಯಿಬಿಟ್ಟು ಕೊಂಡು ದೃಶ್ಯ ನೋಡುವಂತೆ ಮಾಡಿದ್ದಾರೆ. 
 
ವಿಡಿಯೋದಲ್ಲಿ, ಸನ್ನಿ ಲಿಯೋನ್ ನೀರು ಮತ್ತು ದ್ರಾಕ್ಷಿಗಳಿಂದ ತುಂಬಿದ ಬಾತ್‍ಟಬ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾತ್‍ಟಬ್‍ನಲ್ಲಿ ಕುಳಿತು ಸನ್ನಿ ಎರಡು ಕೈಯಲ್ಲಿ ದ್ರಾಕ್ಷಿಯನ್ನು ಹಿಡಿದುಕೊಂಡಿದ್ದಾರೆ. ಸನ್ನಿ ಈ ವಿಡಿಯೋವನ್ನು ಪೋಸ್ಟ್ ಮಾಡಿ ಅದಕ್ಕೆ, “ಎಷ್ಟೊಂದು ಕ್ರೇಜಿ ಕ್ಯಾಪ್ಷನ್‍ಗಳು ಮನಸ್ಸಿಗೆ ಬರುತ್ತಿವೆ” ಎಂದು ಫನ್ನಿಯಾಗಿ ಬರೆದುಕೊಂಡಿದ್ದಾರೆ. ಸನ್ನಿ ಲಿಯೋನ್ ಅಪ್ಲೋಡ್ ಮಾಡಿದ ಈ ವಿಡಿಯೋ ಒಂದು ದಿನದಲ್ಲೇ 26 ಲಕ್ಷ ಕ್ಕೂ ಅಧಿಕ ವೀವ್ಸ್ ಕಂಡಿದೆ. ಅಲ್ಲದೆ 4 ಸಾವಿರಕ್ಕೂ ಅಧಿಕ ಮಂದಿ ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
 
ಇತ್ತೀಚೆಗಷ್ಟೆ ಫುಟ್ಬಾಲ್ ಆಡಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಇತ್ತೀಚೆಗೆ ಅಬುದಾಬಿಯಲ್ಲಿ ನಡೆಯುತ್ತಿರುವ ಟಿ 10 ಲೀಗ್ ವೇಳೆಯಲ್ಲಿ ಸನ್ನಿ ತಮ್ಮ ಫುಟ್ಬಾಲ್ ಸ್ಕಿಲ್ಸ್ ಪ್ರದರ್ಶಿಸಿದ್ದರು. ಫುಟ್ಬಾಲ್ ಆಟದಲ್ಲಿ ಕೌಶಲ್ಯ ಮೆರೆದು ಸನ್ನಿ ಲಿಯೋನ್ ಅಭಿಮಾನಿಗಳ ಮನ ಗೆದ್ದಿದ್ದರು. ಈ ಮೂಲಕ ಟಿ 10 ಲೀಗ್ ಹೆಚ್ಚಿನ ಪ್ರಚಾರ ಕೂಡ ನೀಡಿದ್ದರು. ಜೊತೆಗೆ ತಮ್ಮ ಡೆಲ್ಲಿ ಬುಲ್ಸ್ ತಂಡಕ್ಕೆ ಪ್ರೋತ್ಸಾಹಿಸಿದ್ದರು.
 
ಸನ್ನಿ ಲಿಯೋನ್ ಅಬುದಾಬಿಗೆ ಆಗಮಿಸಿದಾಗ ಡೆಲ್ಲಿ ಬುಲ್ಸ್ ತಂಡದ ಜರ್ಸಿ ತೊಟ್ಟು ಮಿಂಚಿದ್ದರು. ಅಲ್ಲದೆ ಫುಟ್ಬಾಲ್ ಆಡಿ, ಗೋಲ್ ಹೊಡೆದು ಖುಷಿ ಪಟ್ಟಿದ್ದರು. ಈ ವೇಳೆ ಸನ್ನಿಗೆ ಪತಿ ಡೇನಿಯಲ್ ವೆಬೆರ್ ಕೂಡ ಸಾಥ್ ನೀಡಿದ್ದರು. ಈ ವಿಡಿಯೋ ವನ್ನು ಸನ್ನಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡು ಸಂತೋಷಪಟ್ಟಿದ್ದರು. ಪ್ರಸ್ತುತ ಈ ವೀಡಿಯೋ ದಿಂದ ಲಕ್ಷಾಂತರ ವಿವ್ಸ್  ಲೈಕ್ಸ್ ಪಡೆದಿರುವ ಬಾಲಿವುಡ್ ಹಾಟ್ ಬೆಡಗಿ ಸನ್ನಿ ಲಿಯೋನ್ ಪಡ್ಡೆ ಹೈಕಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದಾರೆ.

మరింత సమాచారం తెలుసుకోండి: