ಸ್ಯಾಂಡಲ್ ವುಡ್ ನಲ್ಲಿ ಇದೀಗ ಹೊಸತನದ ಹರಿವು ಹೆಚ್ಚಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿವೆ. ಇದಕ್ಕೆ ಬೆಸ್ಟ್ ಉದಾಹರಣೆ ಎಂದರೆ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆ.ಜಿ.ಎಫ್. ಹೌದು ಇದೀಗ ಈ ಸಾಲಿನಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರ ಸೇರ್ಪಡೆ ಆಗುವುದರಲ್ಲಿ ಅನುಮಾನವೇ ಇಲ್ಲ.
 
ಬಹು ನಿರೀಕ್ಷಿತ  ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಗಾಂದೀನಗರ ಸೇರಿದಂತೆ ರಾಜ್ಯಾದ್ಯಂತ ಭಾರೀ ಹವಾ ಎಬ್ಬಿಸಿದೆ. ಬಹುದಿನಗಳ ನಂತರ ತೆರೆ ಮೇಲೆ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ. ಚಿತ್ರ ಒಮ್ಮೆಲೆ ಪಂಚ ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿ ರುವುದರಿಂದ ವ್ಯಾಪ್ತಿ ಹೆಚ್ಚಾಗಿದೆ. ಸ್ಯಾಂಡಲ್ ವುಡ್ ಮಟ್ಟಿಗೆ ಗುರುವಾರ ಹಬ್ಬದ ವಾತಾವರಣ ಮನೆ ಮಾಡಿತ್ತು. ಏಕೆಂದರೆ ಬಹು ದಿನಗಳಿಂದ ಕಾಯುತ್ತಿದ್ದ 'ಅವನೇ ಶ್ರೀಮನ್ನಾರಾಯಣ’ ಟ್ರೇಲರ್ ಗುರುವಾರ ಬಿಡುಗಡೆಯಾಗಿ ಯೂ ಟ್ಯೂಬ್ ನಲ್ಲಿ ಹವಾ ಎಬ್ಬಿಸಿ ಮುನುಗ್ಗುತ್ತಿದೆ.
 
80ರ ದಶಕದ ರೆಟ್ರೋ ಲುಕ್​ಲ್ಲಿ ರಕ್ಷಿತ್​ ಶೆಟ್ಟಿ ಮಿಂಚಿದ್ದಾರೆ. ಇಂದು ಐದೂ ಭಾಷೆಗಳಲ್ಲೂ ಎ ಎಸ್ ​ಎನ್​​ ಟ್ರೈಲರ್​ ಬಿಡುಗಡೆ ಯಾಗಿದೆ. 'ಅವನೇ ಶ್ರೀಮನ್ನಾರಾಯಣ’ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಐದು ಭಾಷೆಗಳಲ್ಲಿ ಹೊರಬರಲಿದ್ದು 30 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಇದು ಸಹ ಸ್ಯಾಂಡಲ್ ವುಡ್ ನಲ್ಲಿ ದಾಖಲೆಯ ಬಜೆಟ್ ಆಗಿದ್ದು ನಿರ್ಮಾಪಕರು ಖಡಾಖಂಡಿತವಾಗಿ ಚಿತ್ರ ಹಿಟ್ ಆಗುತ್ತದೆ ಎಷ್ಟು ಬೇಕಾದರೂ ಖರ್ಚು ಮಾಡುವೆ ಎಂದಿದ್ದರು. 
 
ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಜತೆ ಶಾನ್ವಿ ಶ್ರೀವಾಸ್ತವ್​, ಪ್ರಮೋದ್​ ಶೆಟ್ಟಿ, ಅಚ್ಚ್ಯುತ್​ ಕುಮಾರ್​, ಬಾಲಾಜಿ ಮನೋಹರ್​ ತಾರಾಗಣದಲ್ಲಿದ್ದಾರೆ. ಈ ಸಿನಿಮಾ ಡಿಸೆಂಬರ್​ ಅಂತ್ಯದಲ್ಲಿ ತೆರೆಗಪ್ಪಳಿಸಲಿದೆ. ಕೆಜಿಎಫ್ ಮತ್ತು ಪೈಲ್ವಾನ್ ನಂತರ ಮತ್ತೆ ಅಷ್ಟೆ ಕುತೂಹಲ ಕೆರಳಿಸಿರುವ ಚಿತ್ರ ಇದಾಗಿದೆ. ಖಡಕ್ ಡೈಲಾಗ್ ಗಳ ಮೂಲಕ ರಕ್ಷಿತ್ ಶೆಟ್ಟಿ ಎಂಟ್ರಿ ಕೊಡುತ್ತಾರೆ. ಹಾಗಾದರೆ ಟ್ರೇಲರ್ ಹೇಗಿದೆ ನೀವು ಒಮ್ಮೆ ನೋಡಿಕೊಂಡು ಬನ್ನಿ.ಅದು ಕನ್ನಡದಲ್ಲಿರಲಿ. ಚಿತ್ರ ಬಿಗ್ ಹಿಟ್ ಪಡೆಯುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂಬುದು ಟ್ರೇಲರ್ ಹೇ ತಿಳಿಸುತ್ತಿದೆ. 

మరింత సమాచారం తెలుసుకోండి: