ಬೆಂಗಳೂರು: ಕೊಡಗಿನ ಬೆಡಗಿ, ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಇದೀಗ ರೌಡಿ ಹೀರೋ ಖ್ಯಾತಿಯ ವಿಜಯ್ ದೇವರಕೊಂಡ ಮನೆಯಲ್ಲಿ ಪ್ರತ್ಯಕ್ಷ ರಾಗಿದ್ದಾರೆ. ಹೌದು, ಇಷ್ಟು ದಿನ ಸಿನಿಮಾಗಳಲ್ಲಿ ಮಾತ್ರ ಎಂದು ಓಡಾಡಿಕೊಂಡಿದ್ದರು ಆದರೆ ಈಗ ಮನೆ ವರೆಗೂ ಬಂತಲ್ಲಪ್ಪಾ ಎಂದು ಜನರು ಮಾತನಾಡಿಕೊಳ್ಳುತ್ತಿದ್ದು, ನಿಜಕ್ಕೂ ರಶ್ಮಿಕಾ ವಿಜಯ್ ಮನೆಯಲ್ಲಿ ಏನ್ ಮಾಡ್ತಿದ್ದಾರೆ ಎಂದು ನಾವ್ ಹೇಳ್ತೀವಿ ಕೇಳಿ. 
 
 ರಶ್ಮಿಕಾ ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಅವರ ನೂತನ ಗೃಹಕ್ಕೂ ಪ್ರವೇಶ ಮಾಡಿದ್ದಾರೆ. ಅರ್ಥಾತ್ ವಿಜಯ್ ಅವರ ಗೃಹಪ್ರವೇಶಕ್ಕೆ ರಶ್ಮಿಕಾ ಮಂದಣ್ಣ ಕೂಡ ಅತಿಥಿಯಾಗಿ ಹೋಗಿದ್ದು ಶುಭ ಹಾರೈಸಿದ್ದಾರೆ. ಆ ಕುರಿತ ಫೋಟೋಗಳು ತಡವಾಗಿ ಬೆಳಕಿಗೆ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನಟ ವಿಜಯ್ ದೇವರಕೊಂಡ ಇತ್ತೀಚೆಗಷ್ಟೇ ಹೈದರಾಬಾದ್​ನ ಜುಬಿಲಿ ಹಿಲ್ಸ್​ನಲ್ಲಿ ಭವ್ಯ ಬಂಗಲೆಯೊಂದನ್ನು ಖರೀದಿಸಿ, ಅದ್ದೂರಿಯಾಗಿ ಗೃಹಪ್ರವೇಶ ಸಮಾರಂಭವನ್ನೂ ಆಯೋಜಿಸಿದ್ದರು.
 
ಈ ಗೃಹಪ್ರವೇಶಕ್ಕೆ ಅವರ ಬಂಧು-ಬಳಗ, ಸಿನಿಮಾ ಕ್ಷೇತ್ರದ ಆಪ್ತರು ಆಗಮಿಸಿ ಶುಭ ಹಾರೈಸಿದ್ದಾರೆ. ಅಂತೆಯೇ ಅವರೊಂದಿಗೆ ಟಾಲಿವುಡ್​ನಲ್ಲಿ ದೊಡ್ಡಮಟ್ಟದ ಜನಪ್ರಿಯತೆ ಪಡೆದಿರುವ ರಶ್ಮಿಕಾಗೆ ವಿಜಯ್ ಜತೆ ವಿಶೇಷವಾದ ಗೆಳೆತನ ಇದ್ದುದರಿಂದ ಅವರಿಗೂ ಗೃಹಪ್ರವೇಶಕ್ಕೆ ಆಹ್ವಾನ ನೀಡಲಾಗಿದೆ ಎನ್ನಲಾಗುತ್ತಿದೆ. ದೇವರಕೊಂಡ ಮನೆಯಲ್ಲಿ ವಿಜಯ್ ಕುಟುಂಬದ ಜತೆ ರಶ್ಮಿಕಾ ಕಾಣಿಸಿಕೊಂಡಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೀಗ ಈ ವೈರಲ್ ಪೋಟೋ ಇಟ್ಟುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ರಕ್ಷಿತ್ ಶೆಟ್ಟಿ ಪೋಟೋ ನೂ ಹಾಕು ಶೇರ್ ಮಾಡಲಾಗುತ್ತಿದೆ. ರಶ್ಮಿಕಾ ವಿಜಯ್ ಸೂಪರ್ ಎಂದೆಲ್ಲಾ ಕಾಮೆಂಟ್ ಗಳು ಹಲಿದಾಡುತ್ತಿವೆ. 
 
ಖ್ಯಾತ ನಟಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಆರಂಭದ ಎರಡೂ ಸಿನಿಮಾಗಳಾದ ‘ಗೀತಾ ಗೋವಿಂದಂ’ ಹಾಗೂ ‘ಡಿಯರ್ ಕಾಮ್ರೇಡ್’ನಲ್ಲಿ ವಿಜಯ್ ದೇವರಕೊಂಡ ಅವರಿಗೆ ಜೋಡಿಯಾಗಿಯೇ ಅಭಿನಯಿಸಿದ್ದರು. ಆ ಬಳಿಕ ಇಬ್ಬರ ನಡುವೆ ಆಪ್ತತೆ ಬೆಳೆದಿತ್ತು. ಇದೀಗ ಗೃಹಪ್ರವೇಶದಲ್ಲೂ ಇಬ್ಬರೂ ಒಟ್ಟಿಗೆ ಕಾಣಿಸಿದ್ದಾರೆ. ಸದ್ಯ ರಶ್ಮಿಕಾ ಕೈಯಲ್ಲಿ ಹಲವು ಸಿನಿಮಾಗಳಿವೆ. ‘ಭೀಷ್ಮಾ’, ‘ಪೊಗರು’, ‘ಸರಿಲೇರು ನೀಕೆವ್ವರು’ ಮುಂತಾದ ಚಿತ್ರಗಳಲ್ಲಿ ತೊಡಗಿಕೊಂಡಿದ್ದಾರೆ.

మరింత సమాచారం తెలుసుకోండి: