ಶಾನ್ವಿ ಶ್ರೀವಾತ್ಸವ್, ಸಿಕ್ಕಾಪಟ್ಟೆ ಮುದ್ದು ಚೆಲುವೆಯಾದ ಶಾನ್ವಿ ಶ್ರೀವಾತ್ಸವ್ ಮಾಸ್ಟರ್ ಫೀಸ್ ಚಿತ್ರದ ಮೂಲಕ ಕನ್ನಡ ಸಿನಿ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದು, ಇದೀಗ ಲಕ್ಷ್ಮಿ ಅವತಾರ ಎತ್ತಿದ್ದಾರೆ. ಹೌದು, ಈ ಲಕ್ಷ್ಮಿಯ ಹಿಂದೆ ಶ್ರೀಮನ್ನಾರಾಯಣ ಹಿಂದೆ ಬಿದಿದ್ದಾನೆ. ಏನಿದು ಸ್ಟೋರಿ ಅಂತ ನಾವ್ ಹೇಳ್ತೀವಿ ಕೇಳಿ. 
 
ನಟಿ ಶಾನ್ವಿ ಶ್ರೀವಾತ್ಸವ್‌ ಫುಲ್ ಖುಷಿಯಾಗಿದ್ದಾರೆ. ಆ ಖುಷಿಗೆ ಮುಖ್ಯವಾಗಿ ಎರಡು ಕಾರಣ. ಮೊದಲನೇಯದಾಗಿ ಅವರ ನಟನೆಯ “ಅವನೇ ಶ್ರೀಮನ್ನಾರಾ ಯಣ’ ಚಿತ್ರ ಬಿಡುಗಡೆಗೆ ರೆಡಿಯಾಗಿರುವುದು ಒಂದಾದರೆ, ತನ್ನ ಹುಟ್ಟುಹಬ್ಬಕ್ಕೆ ಚಿತ್ರತಂಡವೊಂದು ಕಲರ್‌ಫ‌ುಲ್‌ ಪೋಸ್ಟರ್‌ ರಿಲೀಸ್‌ ಮಾಡಿರುವುದು. ಹೌದು, ನಟಿ ಶಾನ್ವಿಗೆ ಭಾನುವಾರ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮವನ್ನು ಹೆಚ್ಚಿಸಿದ್ದು “ಅವನೇ ಶ್ರೀಮನ್ನಾರಾಯಣ’ ಚಿತ್ರ ಬಿಡುಗಡೆ ಮಾಡಿದ ಪೋಸ್ಟರ್‌. ಶಾನ್ವಿ, ಲಕ್ಷ್ಮೀ ಅವತಾರದಲ್ಲಿರುವ ಜೊತೆಗೆ ನಾಯಕ ನಟ ರಕ್ಷಿತ್‌ ಶೆಟ್ಟಿ ಇರುವ ಪೋಸ್ಟರ್‌ವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿ ಶಾನ್ವಿಗೆ ಶುಭ ಕೋರಿದೆ. ಈ ಚಿತ್ರದಲ್ಲಿ ಶಾನ್ವಿ, ಲಕ್ಷ್ಮೀ ಎಂಬ ಪಾತ್ರ ಮಾಡಿದ್ದಾರೆ. ಶಾನ್ವಿ ಕೂಡಾ ಈ ಪಾತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ಕಳೆದ ಎರಡು ವರ್ಷಗಳಿಂದ ಚಿತ್ರ ತಂಡ ಜೊತೆ ಸತತವಾಗಿ ತೊಡಗಿ ಕೊಂಡಿದ್ದಾರೆ. 
 
ಅಂದಹಾಗೆ, ಪುಷ್ಕರ್‌ ನಿರ್ಮಾಣದ “ಅವನೇ ಶ್ರೀಮನ್ನಾರಾಯಣ’ ಚಿತ್ರ ಐದು ಭಾಷೆಗಳ ಮೂಲಕ ಪ್ಯಾನ್‌ ಇಂಡಿಯಾ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಮೂಲಕ ಶಾನ್ವಿ ಕೂಡಾ ಐದು ಭಾಷೆಗಳಲ್ಲಿ ಲಾಂಚ್‌ ಆಗುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ. ಟ್ರೇಲರ್‌ ನೋಡಿದವರಿಂದ ಚಿತ್ರದ ಮೇಕಿಂಗ್‌ ಬಗ್ಗೆಯೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಚಿತ್ರ ಡಿಸೆಂಬರ್‌ 27 ರಂದು ತೆರೆಕಾಣುತ್ತಿದೆ. ಶೀಘ್ರದಲ್ಲೇ ಚಿತ್ರದ ಹಾಡೊಂದು ಬಿಡುಗಡಯಾಗಲಿದೆ. ಕನ್ನಡ ಸಿನಿಮಾದ ಇಂಡಸ್ಟ್ರಿಯಲ್ಲಿ ಕೆಜಿಎಫ್ ಚಿತ್ರದಂತೆ ಈ ಚಿತ್ರವೂ  ಮಿಂಚಲಿದೆ ಎಂಬ ಸುದ್ದಿಗಳಿದ್ದು  ಅದು ಎಷ್ಟರಮಟ್ಟಿಗೆ ಸತ್ಯವೆಂಬುದು ಸಿನಿಮಾ ಬಿಡುಗಡೆ ಯಾಗಿ ಪ್ರೇಕ್ಷಕರ ಮಾತಿನಿಂದಲೇ ತಿಳಿದುಕೊಳ್ಳಬೇಕು.

మరింత సమాచారం తెలుసుకోండి: