ಸ್ಯಾಂಡಲ್ ವುಡ್ ನ ಕನಸುಗಾರ, ಇತ್ತೀಚೆಗಷ್ಟೇ ಡಾಕ್ಟರೇಟ್ ಪಡೆದಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಮಗ ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಅದು ಮುಗಿಲ್ ಪೇಟೆಯಲ್ಲಿ. ಹೌದು, ಏನು ಅದರ ವಿಶೇಷ ಎಂಬ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ. 
 
ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯುತ್ತಿರುವ “ಮುಗಿಲ್‌ ಪೇಟೆ ಚಿತ್ರದ ಚಿತ್ರೀಕರಣ ಸೆಟ್‌ನಲ್ಲಿ ಚಿತ್ರತಂಡ ಹಾಗು ಅಭಿಮಾನಿಗಳೊಂದಿಗೆ ಕೇಕ್‌ ಕತ್ತರಿಸುವ ಮೂಲಕ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ನಗರಗಳಿಂದ ಮನುರಂಜನ್‌ ಅವರ ಗೆಳೆಯರು, ಹಿತೈಷಿಗಳು ಹಾಗು ಅಭಿಮಾನಿ ಗಳು ಚಿತ್ರೀಕರಣದ ಸ್ಥಳಕ್ಕೆ ಹೋಗಿ, ಶುಭಾಶಯ ಹೇಳಿದ್ದಾರೆ. ಅವರ ಜೊತೆ ಸೇರಿ ಅವರು ಪ್ರೀತಿಯಿಂದ ತಂದಿದ್ದ ಕೇಕ್‌ ಕತ್ತರಿಸಿ, ಹುಟ್ಟು ಹಬ್ಬದ ಸಂಭ್ರಮ ವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ.
 
ಇನ್ನು, ಚಿತ್ರತಂಡ ಕೂಡ ಮನುರಂಜನ್‌ ಅವರ ಬರ್ತ್‌ಡೇ ಅಂಗವಾಗಿ “ಮುಗಿಲ್‌ ಪೇಟೆ’ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆ ಮಾಡಿದೆ. ಮೋಷನ್‌ ಪೋಸ್ಟರ್‌ ನೋಡಿದವರಿಗೆ ಅದೊಂದು ಪಕ್ಕಾ ರಗಡ್‌ ಫೀಲ್‌ ಇರುವ ಚಿತ್ರ ಅನ್ನೋದು ಗೊತ್ತಾಗುತ್ತೆ. ವಿಭಿನ್ನ ಗೆಟಪ್‌ನಲ್ಲಿರುವ ಪೋಸ್ಟರ್‌ ಇಡೀ ಚಿತ್ರದ ಆ್ಯಕ್ಷನ್‌ ಫೀಲ್‌ ಕಟ್ಟಿಕೊಡು ವಂತಿದೆ. ಮೋಷನ್‌ ಪೊಸ್ಟರ್‌ ನೋಡಿರುವ ಅನೇಕರು, ಸಾಕಷ್ಟು ಕಾಮೆಂಟ್ಸ್‌ ಮಾಡಿದ್ದಾರೆ.
 
ಈ ಹಿಂದೆ ಮಾಡಿದ ಎರಡು ಚಿತ್ರಗಳಲ್ಲೂ ಮನುರಂಜನ್‌ ಅವರು ಸಾಫ್ಟ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು. ಆದರೆ, “ಮುಗಿಲ್‌ ಪೇಟೆ’ ಚಿತ್ರದ ಮೋಷನ್‌ ಪೋಸ್ಟರ್‌ ಪಕ್ಕಾ ಮಾಸ್‌ ಸಿನಿಮಾದ ಸೂಚನೆ ಕೊಡುತ್ತಿದೆ. ಅಂದಹಾಗೆ, ಈ ಚಿತ್ರವನ್ನು ಭರತ್‌ ನಾವುಂದ ನಿರ್ದೇಶನ ಮಾಡುತ್ತಿದ್ದಾರೆ. ರಕ್ಷಾ, ಮೋತಿ ಮಹೇಶ್‌ ನಿರ್ಮಾಣ ವಿದೆ. 
 
ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಹೆಜ್ಜೆ ಇಟ್ಟು ಹವಾ ಎಬ್ಬಿಸಿರುವ ಮನರಂಜನ್ ಇದೀಗ ಪಕ್ಕಾ ಮಾಸ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ಇಗಾಗಲೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಗಳಿದ್ದು ಚಿತ್ರ ಪಕ್ಕಾ 100 ಡೇಸ್ ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

మరింత సమాచారం తెలుసుకోండి: