ಮುಂಬೈ: ಕನ್ನಡಿಗ ಕಿಚ್ಚ ಸುದೀಪ್ ನಟಿಸುತ್ತಿರುವ ಕನ್ನಡದ ಕೋಟಿಗೊಬ್ಬ 3 ಚಿತ್ರತಂಡವೂ ಇನ್ನಿಲ್ಲದ ಸರ್ಕಸ್ ಗಳನ್ನು ಮಾಡುತ್ತಿದೆ. ಚಿತ್ರದ ವಿಭಿನ್ನತೆ ಹಾಗೂ ಹಾಗೂ ವಿಶೇಷತೆ ಗಾಗಿ  ಭರ್ಜರಿ ಪ್ಲಾನೊಂದು ನಡೆಸಿದೆ. ಇತ್ತೀಚೆಗೆ ಮುಂಬೈನ ಪಬ್‌ವೊಂದರಲ್ಲಿ ಚಿತ್ರದ ಟೈಟಲ್‌ ಟ್ರಾಕ್‌ ಸಾಂಗ್‌ಗೆ ಚಿತ್ರೀಕರಣ ನಡೆದಿದೆ. ಹೌದು, ಕಳೆದ ನಾಲ್ಕು ದಿನಗಳಿಂದಲೂ ಅಲ್ಲಿನ ಪಬ್‌ವೊಂದರಲ್ಲಿ ಚಿತ್ರದ ಶೀರ್ಷಿಕೆ ಗೀತೆಗೆ ಚಿತ್ರೀಕರಣ ನಡೆದಿದ್ದು, “ದ ಲಯನ್‌ ಈಸ್‌ ಬ್ಯಾಕ್‌…’ ಎಂದು ಶುರುವಾಗುವ ಹಾಡಿಗೆ ಸುದೀಪ್‌ ಹೆಜ್ಜೆ ಹಾಕಿದ್ದು, ಭಾರೀ ವೈರಲ್ ಆಗಿದೆ. 
 
 ಈ ಸಿನಿಮಾ ಪ್ರಾರಂಭವಾದಗಿನಿಂತಲೂ ಭಾರೀ ನಿರೀಕ್ಷೆಗಳನ್ನು ಅಭಿಮಾನಿಗಳು ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಹಾಡಲ್ಲಿ ಕನ್ನಡದ ಯುವ ನಟರಾದ “ಮದರಂಗಿ’ ಕೃಷ್ಣ ಮತ್ತು ಪ್ರದೀಪ್‌ ಕೂಡ ಸ್ಟೆಪ್‌ ಹಾಕಿದ್ದಾರೆ. ಶಿವ ಕಾರ್ತಿಕ್‌ ನಿರ್ದೇಶನದ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಾಣ ಮಾಡುತ್ತಿದ್ದಾರೆ. ಇದೊಂದು ಆ್ಯಕ್ಷನ್‌ ಥ್ರಿಲ್ಲರ್‌ ಕಥಾಹಂದರ ಹೊಂದಿದ್ದು, ಮಾಸ್‌ ಪ್ರಿಯರಿಗೊಂದು ವಿಶೇಷ ಪ್ಯಾಕೇಜ್‌ ಇರುವ ಚಿತ್ರ ಎಂಬುದು ಚಿತ್ರತಂಡದ ಮಾತು. ಚಿತ್ರ ಶೇ ನೂರಕ್ಕೆ ನೂರರಷ್ಟು ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದು ಚಿತ್ರತಂಡ ಹೇಳುತ್ತಿದೆ. 
 
ಅಭಿಮಾನಿಗಳ ಜೊತೆಗೆ ಸುದೀಪ್ ಸಹ ಕೂತುಹಲಕಾರಿ ಆಗಿದ್ದಾರೆ. ಏಕೆಂದರೆ ಚಿತ್ರದಲ್ಲಿ ಅಂತಹ ಸಸ್ಪೆನ್ಸ್ ಇದೆಯಂತೆ. ಆದ್ದರಿಂದಲೇ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಕೋಟಿಗೊಬ್ಬ 3 ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಡೈಲಾಗ್ ಕಿಂಗ್ ರವಿಶಂಕರ್ ಕೂಡ ಚಿತ್ರದಲ್ಲಿ ನಟಿಸಿದ್ದು, ಡೈಲಾಗ್ ಗಳ ಸುರಿಮಳೆಯು ಸುರಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದು ಚಿತ್ರ ಬಿಡುಗಡೆಯಾದ ಮೇಲೆ ತಿಳಿದು ಬರಲಿದೆ. ಈ ಚಿತ್ರದಲ್ಲಿ ಮಡೋನ ಸೆಬಾಸ್ಟಿನ್‌ ಮತ್ತು ಶ್ರದ್ಧಾ ದಾಸ್‌ ಅವರು ನಾಯಕಿಯಾಗಿದ್ದಾರೆ. ಬಾಲಿವುಡ್‌ನ‌ ಅಫ್ತಾಬ್‌ ಶಿವದಾಸನಿ ಕೂಡ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.ಉಳಿದಂತೆ ರವಿಶಂಕರ್‌ ಇತರರು ನಟಿಸಿದ್ದಾರೆ. ಅರ್ಜುನ್‌ ಜನ್ಯಾ ಚಿತ್ರಕ್ಕೆ ಸಂಗೀತ ನೀಡಿದ್ದು, ಶೇಖರ್‌ಚಂದ್ರ ಛಾಯಾಗ್ರಹಣವಿದೆ. ಅಂದಹಾಗೆ, ಜಾನಿ ಮಾಸ್ಟರ್‌ ಚಿತ್ರದ ಹಾಡಿಗೆ ನೃತ್ಯ ಸಂಯೋಜಿಸಿದ್ದಾರೆ.

మరింత సమాచారం తెలుసుకోండి: