ಮುಂಬೈ: ಬಾಲಿವುಡ್ ಹಿರಿಯ ಮತ್ತು ಖ್ಯಾತ ನಟ ಅಮಿತಾಬ್ ಬಚ್ಚನ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ ವಂತೆ. ಹೌದು ಇದನ್ನು ಸ್ವತಹ ಅವರೇ ಟ್ವೀಟರ್ ನಲ್ಲಿ ಬರೆದು ಕೊಂಡಿದ್ದಾರೆ. ಯಾಕೆ ಅಂತ ಇಲ್ನೋಡಿ.  ಬಾಲಿವುಡ್​ ನಟ ಅಮಿತಾಬ್ ಬಚ್ಚನ್ ದೆಹಲಿಯಲ್ಲಿ ನಡೆದ ಈ ವರ್ಷದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹಾಜರು ಆಗಿಲ್ಲ. 
 
77 ವರ್ಷದ ಅಮಿತಾಬ್​ ತಮ್ಮ ಟ್ವೀಟರ್​ನಲ್ಲಿ ಟ್ವೀಟ್ ಮಾಡಿ, ನಾನು ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದೇನೆ. ಹೀಗಾಗಿ ನನಗೆ ಪ್ರಯಾಣಿಸಲು ಅನುಮತಿ ಇಲ್ಲ. ನನ್ನ ಆರೋಗ್ಯ ಹೀಗೆ ಇರುವುದರಿಂದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು.  ನಾನು ಜ್ವರದಿಂದ ಬಳಲುತ್ತಿದ್ದು, ಹೀಗಾಗಿ ಪ್ರಯಾಣಿಸಲು ಅವಕಾಶವಿಲ್ಲ. ಹೀಗಾಗಿ ನಾಳೆ ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ದುರದೃಷ್ಟಕರ, ನನ್ನ ವಿಷಾದ ಇರಲಿ ಎಂದು ಬಿಗ್ ಬಿ ಟ್ವೀಟ್ ಮಾಡಿದ್ದಾರೆ. ಇತ್ತೀಚೆಗೆ ಬಿಗ್ ಬಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ – ಈ ವರ್ಷದ ಭಾರತದ ಅತ್ಯುನ್ನತ ಚಲನಚಿತ್ರ ಗೌರವ ಪ್ರಶಸ್ತಿಗಳನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸೋಮವಾರ ವಿಜೇತರಿಗೆ ನೀಡಲಿದ್ದಾರೆ. 
 
ಈ ವರ್ಷದ ಆರಂಭದಲ್ಲಿ, ಬಿಗ್ ಬಿ ಆರೋಗ್ಯ ಸಮಸ್ಯೆಗಳಿಂದಾಗಿ 25 ನೇ ಕೋಲ್ಕತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ತ್ಯಜಿಸಬೇಕಾಯಿತು ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ಅಲ್ಲದೇ, ಅಮಿತಾಬ್ ಬಚ್ಚನ್ ತಮ್ಮ ಶ್ರೇಷ್ಠ ವೃತ್ತಿಜೀವನದ ಮೂಲಕ ಅತ್ಯುತ್ತಮ ನಟನಾಗಿ ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೊನೆಯ ಬಾರಿಗೆ 2015 ರ ಚಲನಚಿತ್ರ ಪಿಕು ಅವರ ಅಭಿನಯಕ್ಕಾಗಿ ಇದನ್ನು ಗೆದ್ದಿದ್ದಾರೆ. ಟಿವಿ ರಸಪ್ರಶ್ನೆ ಕಾರ್ಯಕ್ರಮವಾದ ಕೌನ್ ಬನೇಗಾ ಕರೋಡ್ ಪತಿ ಸೀಸನ್​ 11 ರಲ್ಲಿ ಬಿಗ್ ಬಿ ಕೊನೆಯ ಬಾರಿಗೆ ಆತಿಥಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ಸ್ವತಹ ಅವರ ಕೈಯಿಂದ ಪ್ರಶಸ್ತಿ ಪಡೆಯದೇ ಆಗಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದಾರೆ.

మరింత సమాచారం తెలుసుకోండి: