ಬೆಂಗಳೂರು: ರಾಷ್ಟ್ರಾದ್ಯಂತ ಬುಧವಾರ ಜಗತ್ತಿಗೆ ಮಹಾ ಮಾನವತಿಯಾದ ಏಸು ಕ್ರಿಸ್ತನ ಕ್ರಿಸ್ ಮಸ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಹೌದು, ಕ್ರಿಸ್ತನ ಭಕ್ತರಿಗೆ ಆ ಏಸು ಕ್ರಿಸ್ತ ಸದಾ ಒಳ್ಳೆಯದೇ ಮಾಡು ತ್ತಾನೆ ಎಂಬುದು ಅವರ ಬಲವಾದ ನಂಬಿಕೆಯು ಆಗಿದೆ. ಹಾಗೆ ಸ್ಯಾಂಡಲ್ ವುಡ್ ನ ನಟ ನಟಿಯರು ಸಹ ಕ್ರಿಸ್ ಮಸ್ ಹಬ್ಬವನ್ನು ಅತ್ಯಂತ ಸಂಭ್ರಮ ದಿಂದ ಆಚರಿಸಿದ್ದಾರೆ. ಹೌದು, ಅದರ ಡೀಟೆಲ್ಸ್ ಇಲ್ಲಿದೆ ನೋಡಿ. 
 
 ಡಿಸೆಂಬರ್ 25 ಎಲ್ಲೆಲ್ಲೂ ಕ್ರಿಸ್​ ಮಸ್ ಹಬ್ಬದ ಸಂಭ್ರಮ. ಸ್ಯಾಂಡಲ್​​ವುಡ್ ನಟಿ ಸಂಜನಾ ಗರ್ಲಾನಿ ಕೂಡ ಇಂದು ಸರಳವಾಗಿ, ವಿಶೇಷವಾಗಿ ಕ್ರಿಸ್​ಮಸ್ ಹಬ್ಬ ಸೆಲೆಬ್ರೆಟ್ ಮಾಡಿದ್ದಾರೆ. ನಟಿ ಸಂಜನಾ ಗರ್ಲಾನಿ ಬುಧಲವಾರ ಕ್ರಿಸ್​ಮಸ್​ ಹಬ್ಬವನ್ನ ವಿಶೇಷವಾಗಿ ಆಚರಿಸಿದ್ದಾರೆ. ಇಂದಿರಾ ನಗರದ ಖಾಸಗಿ ರೆಸ್ಟೋರೆಂಟ್​ ಒಂದ್ರಲ್ಲಿ ಸರಳವಾಗಿ , ಅನಾಥ ಮಕ್ಕಳ ಜೊತೆ ಕ್ರಿಸ್​ಮಸ್ ಸೆಲೆಬ್ರೇಟ್ ಮಾಡಿದ್ದಾರೆ. ಈ ವಿಶೇಷ ದಿನದಂದು ಸಂಜನಾ ಗರ್ಲಾನಿ ಫೌಂಡೇಶನ್ ​ಗೆ ಚಾಲನೆ ನೀಡಿದ ಸಂಜನಾ , ಈ ಫೌಂಡೇಶನ್​ ವತಿಯಿಂದಲೇ  ಮಕ್ಕಳಿಗೆ ಕ್ರಿಸ್ಮಸ್ ಹಬ್ಬದ ಉಡುಗೊರೆಯನ್ನ ಕೂಡ ನೀಡಿದರು.
 
ಅಲ್ಲಿನ ಮಕ್ಕಳ ಜೊತೆಗೂಡಿ, ನಟಿ ಸಂಜನಾ, ಕೇಕ್​ ಕತ್ತರಿಸಿ, ಹಾಡಿ, ಕುಣಿದು ಕುಪ್ಪಳಿಸಿದ್ರು.ಜೊತೆಗೆ ಮಕ್ಕಳು ಸಹ ಹಾಡು ಹಾಡೋದು, ಮತ್ತು ನೃತ್ಯ ಮಾಡೋದ್ರ ಜೊತೆಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಒಂದು ಕ್ಷಣ ಸ್ವರ್ಗವೇ ಧರೆಗಿಳಿದಂತೆ ಭಾಗವಾಗಿತ್ತು. ಇನ್ನು ಕ್ರಿಸ್​ಮಸ್​ ಹಬ್ಬದ ಪ್ರಯುಕ್ತ ಮಕ್ಕಳಿಗೆ ಊಟದ ವ್ಯವಸ್ತೆ ಕೂಡ ಮಾಡಲಾಗಿತ್ತು ಹಾಗೂ ಇದೇ ಸಂದರ್ಭದಲ್ಲಿ ಮಕ್ಕಳಿಗೆ ಶೂ,ಚಪ್ಪಲಿಯನ್ನು ಕೂಡ ವಿತರಿಸ ಲಾಯ್ತು. ಈ ಸಂಭ್ರಮದಲ್ಲಿ ನಟ ಅನಿರುದ್ದ್, ಪತ್ನಿ ಕೀರ್ತಿ ಅನಿರುದ್ದ್, ಹಾಗೂ ನಿರ್ಮಾಪಕ ಪ್ರಸನ್ನ, ಇನ್ನಿತರ ಕಿರುತೆರೆ ಕಲಾವಿದರು ಕೂಡ ಭಾಗವಹಿಸಿದರು. ಇಂದು ಕ್ರಿಸ್​ಮಸ್​ ಪ್ರಯುಕ್ತ ಸಂಜನಾ ಗರ್ಲಾನಿ ಫೌಂಡೇಶನ್​ಗೆ ಚಾಲನೆ ಕೊಟ್ಟು, ಮುಂದಿನ ದಿನಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಸಂಜನಾ ತೊಡಗಿಸಿಕೊಳ್ಳಿದ್ದಾರೆ ಎಂದಿದ್ದಾರೆ.
 
 
 

మరింత సమాచారం తెలుసుకోండి: