ಬೆಂಗಳೂರಿನ: ಸ್ಯಾಂಡಲ್ ವುಡ್ ನಲ್ಲೂ, ಎಲ್ಲೆಲ್ಲೂ ಶ್ರೀಮನ್ನಾರಾಯಣ ನ ಜಪ ತಪ ಸಿನಿ ಪ್ರಿಯರಲ್ಲಿ ಶುರುವಾಗಿದೆ. ಶುಕ್ರವಾರದಿಂದ ‘ಅವನೇ ಶ್ರೀಮನ್ನಾರಾಯಣ’ನ ಅವತಾರದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಿಲ್ವರ್ ಸ್ಕ್ರೀನ್​ ಮೇಲೆ ಇದು ಚರಿತ್ರೆ ಸೃಷ್ಠಿಸೋ ಅವತಾರ ಎಂದು ತನ್ನ ಅವತಾರ ತೋರಿಸಲು ಪ್ರಾರಂಭಿಸಿದ್ದಾರೆ. 
 
‘ಅವನೇ ಶ್ರೀಮನ್ನಾರಾಯಣ’. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನ್ ಹಾಗೂ ಪ್ರಕಾಶ್​ ಬಳಗ ಸತತ ಮೂರು ವರ್ಷದ ಪರಿಶ್ರಮದ ಕನಸಿನ ಸಿನಿಮಾ ‘ಅವನೇ ಶ್ರೀಮನ್ನಾರಾಯಣ’ ಸೆಟ್ಟೇರಿದಾಗಿಂದಲೂ ಸುದ್ದಿಯಾಗುತ್ತಲೇ ಇದ್ದು, ಈಗ ಪಂಚ ಭಾಷೆಗಳಲ್ಲಿ ತೆರೆಯ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಐದು ಭಾಷೆಯಲ್ಲಿ ತೆರೆ ಕಾಣುವ ಮುನ್ನ ಚಿತ್ರತಂಡ ಕನ್ನಡಿಗರಿಗೆ ಮೊದಲು ಪ್ರದರ್ಶನ ನೀಡಲು ಸನ್ನದವಾಗಿದೆ.
 
ರಕ್ಷಿತ್ ಶೆಟ್ಟಿ ನಟನೆಯ ಸಚಿನ್ ರವಿ ನಿರ್ದೇಶನದ ಈ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಇನ್ನೇನು ಕೆಲವೇ ಕ್ಷಣಗಳಲ್ಲಿ ರಾಜ್ಯದ 14 ಮಲ್ಟಿಫ್ಲೆಕ್ಸ್ ಸ್ಕ್ರೀನ್ಸ್​​ ಗಳಲ್ಲಿ ತೆರೆ ಕಾಣಲಿದೆ.. ಈಗಾಗಲೇ ಆನ್​​ಲೈನ್ ಬುಕಿಂಗ್ ಓಪನ್ ಮಾಡಿಕೊಂಡಿರುವ ‘ಅವನೇ ಶ್ರೀಮನ್ನಾರಾಯಣ’ ನಾಳೆ ರಾಜ್ಯಾದ್ಯಂತ ಬರೋಬ್ಬರಿ 400 ಪರದೆಗಳ ಮೇಲೆ ಬೆಳಕು ಚೆಲ್ಲಲಿದೆ. ಪುಷ್ಕರ್ ಫಿಲ್ಮ್ ಹಾಗೂ ಮೋಹನ್ ಫಿಲಂಸ್ ರಾಜ್ಯದ ಜನತೆಗೆ ನಾರಾಯಣ ದರ್ಶನ ಮಾಡಿಸಲಿದ್ದಾರೆ.
 
ಆಂಧ್ರ ಪ್ರದೇಶದಲ್ಲಿ ಜನವರಿ 1 ರಿಂದ ತೆಲುಗು ಭಾಷೆಯನ್ನಾಡುತ್ತಾ ‘ನಾರಾಯಣ’ ಅಬ್ಬರಿಸಲು ಶುರು ಮಾಡಿದರೆ, ಮಲಯಾಳಂ ಹಾಗೂ ತಮಿಳು ಭಾಷೆಯಗಳ ರಾಜ್ಯಗಳಲ್ಲಿ ಜನವರಿ 3 ರಿಂದ ಪ್ರದರ್ಶನದ ದರ್ಶನ ನೀಡಿದ್ರೆ ಬಾಲಿವುಡ್​ ಅಂಗಳದಲ್ಲಿ ಜನವರಿ 16ರಿಂದ ಪ್ರದರ್ಶನ ನೀಡುವ ಪ್ಲಾನ್ ನಲ್ಲಿದ್ದಾನೆ. ಪ್ಯಾನ್ ಇಂಡಿಯ ಕಲ್ಪನೆಯಲ್ಲಿ ಅವನೇ ಶ್ರೀ ಮನ್ನಾರಾಯಣ ಸಿದ್ದವಾಗಿದ್ದು ಅನ್ಯ ಭಾಷೆಗಳ ಪ್ರದರ್ಶನಗಳ ಮುಂಚೆ, ಕನ್ನಡ ಪರದೆಳಿಂದ ತನ್ನ ಪ್ರದರ್ಶನ ಶುರುಮಾಡುತ್ತಿದ್ದಾನೆ. ದೊಡ್ಡ ಮಟ್ಟದ ಕನಸನ್ನು ಹೊತ್ತು ರಂಜಿಸಲು ಬರುತ್ತಿರುವ ‘ಅವನೇ ಶ್ರೀಮನ್ನಾರಾಯಣ’ ಎಷ್ಟರ ಮಟ್ಟಿಗೆ ಪ್ರೇಕ್ಷಕರ ಮುಂದೆ ಘರ್ಜಿಸಿ ಅಬ್ಬರಿಸುತ್ತಾನೋ ಎಂಬುದು ಪ್ರೇಕ್ಷಕ ಮಹಾಶಯನೇ ತಿಳಿಸಬೇಕು.

మరింత సమాచారం తెలుసుకోండి: