ಬೆಳಗಾವಿ (ಚಿಕ್ಕೋಡಿ): ಸ್ಯಾಂಡಲ್ ವುಡ್ ನಲ್ಲಿನ ಬಹು ನಿರೀಕ್ಷಿತ ಚಿತ್ರ ಶ್ರೀಮನ್ನಾರಾಯಣ ಬಿಡುಗಡೆಯಾಗಿ ಮುನ್ನುಗ್ಗುತ್ತಿರುವ ವೇಳೆ ಶಿವಸೇನೆ ಪಕ್ಷವು ಗಡಿ ವಿವಾದ ಎಬ್ಬಿಸಿ ಚಿತ್ರಕ್ಕೆದ ಓಟಕ್ಕೆ ಬ್ರೇಕ್ ಹಾಕಿದೆ. 
 
 ಶಿವಸೇನೆ ಕಾರ್ಯಕರ್ತರಿಂದ ಕೊಲ್ಲಾಪುರದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರ ಇರುವ ಥಿಯೆಟರ್​​ ಒಳಗಡೆ ಪ್ರವೇಶಿಸಿ ಅಡ್ಡಿಪಸಿರುವುದು ಬೆಳಕಿಗೆ ಬಂದಿದೆ. ಕನ್ನಡ ಚಿತ್ರ ಇರುವ ಚಿತ್ರಮಂದಿರಕ್ಕೆ ನುಗ್ಗಿ ಶಿವಸೇನಾ ಕಾರ್ಯಕರ್ತರು ಶೋ ಸ್ಥಗಿತಗೊಳಿಸಿದ್ದಾರೆ. ಇದಲ್ಲದೇ, ಕೊಲ್ಲಾಪುರದಲ್ಲಿ ಹೋಟೆಲ್ ಮತ್ತು ಅಂಗಡಿ ಮೇಲೆರುವ ಕನ್ನಡ ನಾಮ ಫಲಕ ಇರುವ ಹಾಗೂ ಕನ್ನಡ ಧ್ವಜಗಳಿಗೆ ಮಸಿ ಎರಚಿ ಪುಂಡಾಟಿಕೆ ಮೆರೆದಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರತಿಭಟನೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗಿನಿಂದಲೇ ಕರ್ನಾಟಕದ ಬಸ್‌ಗಳ ಮಹಾರಾಷ್ಟ್ರ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಮಹಾರಾಷ್ಟ್ರದ ಕಡೆಯಿಂದಲೂ ಬಸ್‌ಗಳು ಬರಲಿಲ್ಲ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸಿದರು. ಹೀಗಾಗಿ ಪ್ರಯಾಣಿಕರು ಖಾಸಗಿ ವಾಹನಗಳ ಮೂಲಕ ಗಡಿ ದಾಟಿ ಬಸ್‌ ಏರಿದರು.
 
ಏನಿದು ಗಡಿ ವಿವಾದ ಗೊತ್ತಾ:- ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕದ ಭಾಗಗಳು ಹರಿದು ಹಂಚಿಹೋಗಿದ್ದವು. ಸ್ವಾತಂತ್ರ ಬಂದು 9 ವರ್ಷಗಳ ನಂತರ 1956ರಲ್ಲಿ ಬೇರೆ ಬೇರರೆ ಕಡೆ ಭಾಗಳೆಲ್ಲವನ್ನೂ ಏಕೀಕರಣಗೊಳಿಸಿ ಮೈಸೂರು ರಾಜ್ಯವನ್ನಾಗಿ ಮಾಡಲಾಯಿತು. ನೆರೆಹೊರೆಯ ರಾಜ್ಯಗಳ ಆಳ್ವಿಕೆಯಲ್ಲಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಆಯಾ ಪ್ರದೇಶಗಳಿಂದ ಬಿಡುಗಡೆ ಮಾಡಿ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಇನ್ನು,ಬಾಂಬೆ ಪ್ರಾಂತ್ಯದಲ್ಲಿದ್ದ ಕೆಲ ಪ್ರದೇಶಗಳೂ ಕರ್ನಾಟಕಕ್ಕೆ ಸೇರಿದವು. ಆದರೆ ನೆರೆ ರಾಜ್ಯಗಳು ಇದಕ್ಕೆ ಸಿದ್ಧವಿರಲಿಲ್ಲ. ಆ ಕಾರಣದಿಂದಲೇ ಕನ್ನಡ ನೆಲವಾಗಿದ್ದ ಹೊಸೂರು, ಕೃಷ್ಣಗಿರಿ ತಮಿಳುನಾಡಿನಲ್ಲಿಯೇ ಉಳಿದವು. ಅನಂತಪುರ, ರಾಮದುರ್ಗ, ಅದೋಣಿ, ಮಂತ್ರಾಲಯಗಳು ಆಂಧ್ರದಲ್ಲಿ ಉಳಿದವು. ಕಾಸರಗೋಡು ಕೇರಳದ ಪಾಲಾಯಿತು. ಅಕ್ಕಲಕೋಟೆ, ಜತ್ತ, ಸೊಲ್ಲಾಪುರಗಳು ಮಹಾರಾಷ್ಟ್ರದಲ್ಲಿ ಉಳಿದು ಕೊಂಡವು.ಅಲ್ಲದೇ, ಕರ್ನಾಟಕದ ಭಾಗವಾಗಿದ್ದ ಮತ್ತಷ್ಟು ಪ್ರದೇಶಗಳ ಮೇಲೆ ಪಕ್ಕದ ರಾಜ್ಯಗಳು ಹಕ್ಕು ಮಂಡಿಸತೊಡಗಿದವು. ಆಗ ಬೆಳಗಾವಿ, ಬೀದರ್, ಕಾರವಾರ ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಮಹಾರಾಷ್ಟ್ರ ಕೂಗಲೆಬ್ಬಿಸಿತು.ಆನಂತರ ಗಡಿ ವಿವಾದಗಳು ನಡೆಯುತ್ತಲೇ ಇವೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ನಡೆಯುತ್ತಿದ್ದರೂ ಸಹ ಶಿವಸೇನೆ ಕಾಲುಕೆರೆದು ಜಗಳಕ್ಕೆ ಬರುತ್ತಿದೆ. 

మరింత సమాచారం తెలుసుకోండి: