ಗೋಧ್ರಾ, ಸ್ಯಾಂಡಲ್ ವುಡ್ ನಲ್ಲಿ ಮಿಂಚಲು ಸಿದ್ಧವಾಗುತ್ತಿರುವ ವಿಶೇಷ ಚಿತ್ರವಿದು. ಬ್ರಹ್ಮಚಾರಿ ಚಿತ್ರದ ಯಶಸ್ಸಿನ ಲ್ಲಿರುವ ನೀನಾಸಂ ಸತೀಶ್ ಅಭಿನಯಿಸಿರುವ ಈ ಚಿತ್ರದಲ್ಲಿ ಬಹು ವಿಶೇಷತೆಗಳಿವೆ. ಚಂಬಲ್ ಚಿತ್ರದಲ್ಲಿ ಪವರ್ ಫುಲ್ ಅಧಿಕಾರಿ ಪಾತ್ರ ನಿರ್ವಹಿಸಿದ್ದ ಸತೀಶ್ ‘ಗೋಧ್ರಾ’ ಚಿತ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿ ಬಣ್ಣ ಹಚ್ಚಿ ಗಮನ ಸೆಳೆಯಲು ಸಿದ್ಧರಾಗಿದ್ದಾರೆ. ಚಿತ್ರೀಕರಣ ಮುಗಿಸಿ ಚಿತ್ರದ ಡಬ್ಬಿಂಗ್ ಕೂಡ ಕಂಪ್ಲೀಟ್ ಮಾಡಿರುವ ಚಿತ್ರತಂಡ ಇದೀಗ ಹೈಬಜೆಟ್ ನಲ್ಲಿ ಮತ್ತೇನೋ ಪ್ಲಾನ್ ಮಾಡಿದ್ದು, ಪ್ರೇಕ್ಷಕರಿಗೆ ಅರ್ಥವೇ ಆಗದಂತಾಗಿದೆ. ಅದೇನು ಎಂದು ನಾವ್ ಹೇಳ್ತೀವಿ ನೋಡಿ. 
 
ಹೈ ಬಜೆಟ್ ನಲ್ಲಿ ಗೋಧ್ರಾ ಚಿತ್ರತಂಡ ಮಾಡುತ್ತಿರುವುದು ಅದ್ಭುತ ಸಾಂಗ್ ವೊಂದರ ಚಿತ್ರೀಕರಣ. ಹೌದು, ನಾಯಕನ ಎಂಟ್ರಿ ಸಾಂಗ್ ಇದಾಗಿದ್ದು, ಒಂದು ಹಾಡಿಗಾಗಿ ನಲವತ್ತು ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ ಚಿತ್ರತಂಡ. ಸತೀಶ್ ನೀನಾಸಂ ಕೆರಿಯರ್ ನಲ್ಲೇ ಇದು ಬಿಗ್ ಬಜೆಟ್. ಮೊದಲ ಸಿನಿಮಾ ಅಂತಾರೆ ಅಭಿನಯ ಚತುರ ಸತೀಶ್. ಚೇತನ್ ಕುಮಾರ್ ಸಾಹಿತ್ಯದಲ್ಲಿ ಮೂಡಿ ಬರ್ತಿರೋ ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಅದ್ಧೂರಿ ಸೆಟ್‍ನಲ್ಲಿ ಹಾಡನ್ನು ಸೆರೆಹಿಡಿಯಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇಲ್ಲಿಯವರೆಗೂ ಚಿತ್ರದ ಬಗ್ಗೆ ಕೊಂಚ ಸುಳಿವನ್ನು ಕೊಡದ ಚಿತ್ರತಂಡ ಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ಗೋಧ್ರಾ ಚಿತ್ರದ ಟೀಸರ್ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿದೆ.
 
ಸಮಾಜದಲ್ಲಿ ನಡೆಯುವ ಶೋಷಣೆಯ ವಿರುದ್ಧ ಬಂಡೆದ್ದು ಹೋರಾಟಗಾರನಾಗುವ ವ್ಯಕ್ತಿಯ ಕಥೆಯನ್ನು ಗೋಧ್ರಾ ಚಿತ್ರತಂಡ ಹೇಳ ಹೊರಟಿದೆ. ಸತೀಶ್ ನೀನಾಸಂ, ಶ್ರದ್ಧಾ ಶ್ರೀನಾಥ್ ಚಿತ್ರದಲ್ಲಿ ಪತ್ರಿಕೋಧ್ಯಮ ವಿದ್ಯಾರ್ಥಿಗಳಾಗಿ ಕಾಣಿಸಿ ಕೊಂಡಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್ ರಾಜಕರಣಿಯಾಗಿ, ವಸಿಷ್ಠ ಸಿಂಹ ಪೈಲೆಟ್ ಆಗಿ ಮಿಂಚಿದ್ದಾರೆ. ಕೆ.ಎಸ್.ನಂದೀಶ್ ಗೋಧ್ರಾ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದಾರೆ. ಜಾಕೋಬ್ ಫಿಲಮ್ಸ್, ಲೀಡರ್ ಫಿಲ್ಮ್ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದ್ದು, ಚಿತ್ರ ಭಾರೀ ಹಿಟ್ ಆಗುತ್ತದೆ ಎಂಬುದು ಚಿತ್ರತಂಡದ ಲೆಕ್ಕಾಚಾರವಾಗಿದೆ.

మరింత సమాచారం తెలుసుకోండి: