ಟಾಲಿವುಡ್ ನ ರೌಡಿ ಹೀರೋ ಎಂದು ಕರೆಯಲ್ಪಡುವ ವಿಜಯ್ ದೇವರ ಕೊಂಡ ಲಿಪ್ ಲಾಕ್, ಬೆಡ್ ರೂಂ ಸೀನ್ ಗಳಲ್ಲಿ ರೊಮ್ಯಾಂಟಿಕ್ ಹೀರೋ ಆಗಿ ಈಗಾಗಲೇ ಬಿಗ್ ಹೀರೋ ಆಗಿದ್ದಾರೆ. ಪ್ರಸ್ತುತ ಬಹು ನಿರೀಕ್ಷಿಸುತ್ತಿರುವ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ವಿಜಯ್ ದೇವರಕೊಂಡ ಅಭಿಮಾನಿಗಳ ಮುಂದೆ 'ವರ್ಲ್ಡ್ ಫೇಮಸ್ ಲವರ್' ಆಗಿ ಮುಂದೆ ಬಂದಿದ್ದಾರೆ.
 
 ಇದಕ್ಕೂ ಹಿಂದೆ 'ಮಳ್ಳಿ ಮಳ್ಳಿ ಇದಿ ರಾನಿ ರೋಜು' ಎಂಬ ಟಾಲಿವುಡ್ ಸಿನಿಮಾ ನಿರ್ದೇಶಿಸಿದ್ದ ಕ್ರಾಂತಿ ಮಾಧನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಪಾತ್ರವರ್ಗದಲ್ಲಿ ರಾಶಿ ಖನ್ನಾ, ಐಶ್ವರ್ಯಾ ರಾಜೇಶ್, ಕೇಥರಿನ್, ಇಜಬೆಲ್ಲಾ ಲೈಟ್ ಪಾತ್ರವರ್ಗದಲ್ಲಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಸಾಲುಸಾಲಾಗಿ ನಾಲ್ಕು ಪೋಸ್ಟರ್‌ಗಳನ್ನು ಚಿತ್ರತಂಡ ಇತ್ತೀಚೆಗೆ ರಿಲೀಸ್ ಮಾಡಿತ್ತು. ಒಟ್ಟು ನಾಲ್ಕು ಮಂದಿ ಹೀರೋಯಿನ್‌ಗಳೊಂದಿಗೆ ಕಾಣಿಸಿಕೊಂಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ ವಿಜಯ್ ದೇವರಕೊಂಡ. ನಾಲ್ಕು ಮಂದಿ ನಾಯಕಿಯರ ಜೊತೆ ವಿಜಯ್ ದೇವರಕೊಂಡ ಅನ್ಯೋನ್ಯವಾಗಿ ಇರುವಂತೆ ಟೀಸರ್‌ನಲ್ಲಿ ತೋರಿಸಲಾಗಿದೆ. ಕೆಲವು ಸನ್ನಿವೇಶಗಳಲ್ಲಿ ಮತ್ತೊಬ್ಬ ಅರ್ಜುನ್ ರೆಡ್ಡಿಯಂತೆ ಕಾಣಿಸಿಕೊಂಡಿದ್ದು, ಮತ್ತೇ ಅರ್ಜುನ್ ರೆಡ್ಡಿ ಈಸ್ ಬ್ಯಾಕ್ ಎನ್ನುವ ಮಾತುಗಳು ಕೇಳಿ ಬರುತ್ತಿವೆ. 
 
ಚಿತ್ರದ ಟೀಸರ್‌ನಲ್ಲಿ ಕಥೆಯ ಎಳೆಯನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಒಟ್ಟಾರೆ ಹೊಸ ಲುಕ್, ಕಥೆಯಿಂದಾಗಿ ಈ ಸಿನಿಮಾ ಆಸಕ್ತಿ ಮೂಡಿಸಿದೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಈ ಸಿನಿಮಾ ರಿಲೀಸ್ ಆಗುತ್ತಿದೆ. ಟಾಲಿವುಡ್ ಕ್ರೇಜಿ ಹೀರೋ ವಿಜಯ್ ದೇವರಕೊಂಡ ಅಭಿನಯದ ಸಿನಿಮಾ ವರ್ಲ್ಡ್ ಫೇಮಸ್ ಲವರ್. "ಪ್ರೀತಿ ಎಂದರೆ ಕಾಂಪ್ರಮೈಸ್ ಅಲ್ಲ, ಪ್ರೀತಿ ಎಂದರೆ ಒಂದು ತ್ಯಾಗ. ಪ್ರೀತಿಯಲ್ಲಿ ದೈವತ್ವ ಇರುತ್ತದೆ. ಅದ್ಯಾವುದು ನಿನಗೆ ಅರ್ಥವಾಗಲ್ಲ" ಎಂದು ವಿಜಯ್ ದೇವರಕೊಂಡ ಲವರ್ ತುಂಬಾ ಭಾವನಾತ್ಮಕವಾಗಿ ಹೇಳಿತ್ತಿರುವ ಡೈಲಾಗ್ ಟೀಸರ್‌ನಲ್ಲಿದೆ. ಈ ಚಿತ್ರದಲ್ಲಿ ವಿಜಯ್ ನಾಲ್ಕು ಡಿಫರೆಂಟ್ ಶೇಡ್ಸ್ ಇರುವ ಪಾತ್ರದಲ್ಲಿ ಆವರಿಸಿದ್ದಾರೆ. ನಾಲ್ಕು ಪಾತ್ರಗಳಲ್ಲಿ, ನಾಲ್ಕು ಹೆಸರುಗಳಲ್ಲಿ ನಾಲ್ಕು ಮಂದಿ ಲವರ್ಸ್ ಜೊತೆಗೆ ವಿಜಯ್ ಮೋಡಿ ಮಾಡಲಿದ್ದಾರೆ.
 
 

మరింత సమాచారం తెలుసుకోండి: