ಬೆಂಗಳೂರು: ಜನವರಿ 8, ಕೆಜಿಎಫ್ ಕಿಂಗ್ ರಾಕಿ ಭಾಯ್ ಯಶ್ ಬರ್ತಡೇ. ಈಗಾಗಲೇ ಬುಧವಾರ ನಡೆಯೋ ಬರ್ತಡೇಗೆ 216 ಅಡಿ ಎತ್ತರದ ಕಟೌಟ್, 5,000 ಕೆಜಿ ಕೇಕ್ ಮೂಲಕ ಯಶ್ ಹೆಸ್ರಲ್ಲಿ ದಾಖಲೆ ಆಗೋದು ಪಕ್ಕಾ ಆಗಿದೆ. ಜೊತೆಗೆ ಇನ್ನು ಹತ್ತು ಹಲವಾರು ರೀತಿಯ ಬರ್ತಡೇ ಸೆಲಬ್ರೇಶನ್ ಗೆ ಭರ್ಜರಿ ಪೂರ್ವತಯಾರಿ ಮಾಡಿಕೊಳ್ಳಲಾಗಿದೆ. 
 
ಬುಧವಾರ ನಟ ಯಶ್ ಹುಟ್ಟುಹಬ್ಬಕ್ಕೆ ನಂದಿ ಲಿಂಕ್ ಗ್ರೌಂಡ್ ನಲ್ಲಿ ಅದ್ಧೂರಿ ವೇದಿಕೆ ಸಜ್ಜಾಗುತ್ತಿದೆ. ಅಲ್ಲದೆ ಹುಟ್ಟುಹಬ್ಬದಂದು ತಮ್ಮ ನೆಚ್ಚಿನ ನಟನ ಹೆಸರಿನಲ್ಲಿ ಹೊಸ ದಾಖಲೆಯನ್ನು ಸೃಷ್ಟಿ ಮಾಡಲು ಅಭಿಮಾನಿಗಳು ತಯಾರಿ ನಡೆಸುತ್ತಿದ್ದಾರೆ. ರಾಕಿ ಭಾಯ್ ಹುಟ್ಟುಹಬ್ಬಕ್ಕೆ ರಾಜ್ಯ ಹಾಗೂ ಹೊರ ರಾಜ್ಯದಿಂದ ಅಭಿಮಾನಿ ಬಳಗ ಬರಲಿದೆ. ಹಾಗಾಗಿ 216 ಅಡಿ ಎತ್ತರದಲ್ಲಿ ರಾಕಿಂಗ್ ಸ್ಟಾರ್ ಕಟೌಟ್ ರಾರಾಜಿಸಲಿದೆ. ಅಲ್ಲದೆ 5 ಸಾವಿರ ಕೆ.ಜಿ ಕೇಕ್ ಮೂಲಕ ಯಶ್ ಹೆಸರಿನಲ್ಲಿ ಅಭಿಮಾನಿಗಳು ದಾಖಲೆ ಮಾಡಲು ಸಜ್ಜಾಗಿದ್ದಾರೆ. ವಿಶೇಷ ಏನಪ್ಪಾ ಅಂದರೆ ಯಶ್ ಅವರ ಹುಟ್ಟುಹಬ್ಬಕ್ಕೆ 50 ದಿನ ಇರುವಾಗ ನಟಿ ಶಾನ್ವಿ ಶ್ರೀವತ್ಸವ್ ತಮ್ಮ ಇನ್‍ಸ್ಟಾದಲ್ಲಿ ಕಾಮನ್ ಡಿಪಿ ಹಂಚಿಕೊಂಡಿದ್ದರು. ವೈರಲ್ ಕೂಡ ಆಗಿತ್ತು. 
 
ಯಶ್ ಅವರ ಹುಟ್ಟುಹಬ್ಬಗೂ 50 ದಿನ ಮೊದಲು ಎಂದರೆ, 50ನೇ ದಿನವಾದ ಇಂದಿನಿಂದ ಜನವರಿ 8ರವರೆಗೂ ನೀವು ಮಾಡುತ್ತಿರುವ ಈ ಪರಿಹಾರದ ಒಂದು ಭಾಗವಾಗಿರಿ. ನೀರು ಉಳಿಸಿ, ಗಿಡಗಳನ್ನು ಬೆಳೆಸಿ ಅಮೂಲ್ಯವಾದಂತಹ ಅಭಿಯಾನವಾಗಿದೆ. ಇದು ರಾಜ್ಯಾದ್ಯಂತ ಸಾಕಷ್ಟು ಸಮಾಜಮುಖಿ ಕೆಲಸ ಮಾಡಲು ನೆರವಾಯಿತು. ಅಂದಹಾಗೆ ಈ ಪೋಸ್ಟರ್ ಕಾನ್ಸೆಪ್ಪ್ ನನಗ್ ಸಖತ್ ಇಷ್ಟ ಆಯಿತು. ಪರಿಸರ ಮಾಲಿನ್ಯದ ಮೇಲೆ ಕೋಪಗೊಂಡಿರುವ ಯಶ್ ಸರ್ ಅವರ ಮೈ ಮನಸ್ಸು ಹಸಿರುಮಯವಾಗಿರುವಂತೆ ಡಿಸೈನ್ ಮಾಡಿರುವ ರೀತಿ ಇಂಟ್ರೆಸ್ಟಿಂಗ್ ಎನಿಸುತ್ತಿದೆ. ಯಶ್ ಅವರ ಅಭಿಮಾನಿಗಳ ಈ ಅಭಿಯಾನದಲ್ಲಿ ನಾನು ಭಾಗಿಯಾಗಿದ್ದೀನಿ, ನೀವೂ ಭಾಗಿಯಾಗಿ. ಹಸಿರು ಬೆಳೆಸೋಣ, ಪರಿಸರ ಉಳಿಸೋಣ ಎಂದು ಬರೆದು ಪೋಸ್ಟ್ ಮಾಡಿದ್ದರು.
 

మరింత సమాచారం తెలుసుకోండి: